Saturday, 25 June 2011

ಹನಿಗವನಗಳು

-----------------



ಮಾತೃ ಭಾಷೆಯ ಮಹತ್ವ
-----------------
ಮಕ್ಕಳ ಮನಸ್ಸಿಗೆ
ನಾಟುವುದು ತಕ್ಷಣ
ಮಾತೃ ಭಾಷೆಯಲ್ಲಿ
ಕಲಿತ ಶಿಕ್ಷಣ.


ನಲ್ಲೆಯ ನೆನಪು
----------------
ಆಲದ ಮರದ ಬೇರುಗಳಂತೆ
ನನ್ನ ನರನಾಡಿಗಳಲ್ಲೂ
ತುಂಬಿ ಕೊಂಡಿಹುದು.

ಎಂಬತ್ತರ ಬದುಕು
----------------
ಉರಿದು
ಮುಗಿಯುತ್ತಾ ಬಂದಿರುವ
ಮೊಂಬತ್ತಿಯಂತೆ.

ಕಾರಣ
------------
ಚಿಕ್ಕವರ ಬಾಯಿಯಲ್ಲಿ
ದೊಡ್ಡ ಮಾತು ಬರಲು
ಮೂಲ ಕಾರಣ.........
ದೊಡ್ಡವರು ಮಾಡಿದ
ಚಿಕ್ಕ ತಪ್ಪು.

ನಿವರ್ಾಹಕ
-------------
ಸಾವಿರಾರು ಜನರಿಗೆ
ನೀರು ಕುಡಿಸಿದ ಭೂಪ!
ಈತ
ಕಲ್ಯಾಣಮಂಟಪದ ಊಟದ ಪಂಕ್ತಿಯಲ್ಲಿ
ನೀರ್-ವಾಹಕ.

ಪ್ರೀತಿ
------------
ಚಿಕ್ಕವರು ಮಾಡಿದರೆ
ಪೆಪ್ಪರಮೆಂಟು
ದೊಡ್ಡವರು ಮಾಡಿದರೆ ಫನಿಶ್ಮೆಂಟು.

ಯಮ_ಪೂರಿ
--------------
ಇಲ್ಲೊಬ್ಬ ಇಂದು ಕಂಡ
ಯಮಪುರಿ,
ಕಾರಣ
ಹೊಟ್ಟೆ ಬಿರಿ ತಿಂದಿದ್ದ
ಉಬ್ಬಿದ ಪೂರಿ.

ನನ್ನಿನಿಯ
------------
ಸರ್ವರಿಗೂ
ಸಾಮಾನ್ಯನಾದ
ಈ ಅಸಾಮಾನ್ಯದವ
ನನಗೆ ಮಾತ್ರ
ಸರ್ವಸ್ವ.

ಅರವತ್ತರ ನಂತರ............
-------------------------
ಅರವತ್ತರ ಅನಂತರ
ಅವಲಕ್ಕಿ ಗಂಜಿ,
ಎಂದು ಅಲವತ್ತುಕೊಂಡರೆ...........
ಉದುರಿ ಹಲ್ಲುಗಳು
ಉದ್ಭವಿಸಿಯಾವೇ?

ಸಂದಾಯ
-------------
ಚೆಲುವೇ,
ೆನಿನ್ನ ಒಲವೇ
ನನಗೆ ಸಂದಾಗ
ಭಾದಿಸಲಾರದು
ಇನ್ಯಾವುದೇ
ಸೋಲು ಗೆಲುವು.

ಬಂಧನ
-----------
ಎನ್ನ ಮನಸ ಕದ್ದ
ಚಿತ್ತ ಚೋರಿಯ
ಬಂಧಿಸಿಡುವೆನು
ಹೃದಯ ಗೂಡಿನ ಚಿಪ್ಪಿನೊಳಗೆ.
------------------------------------

ವಿಳಾಸ - ದತ್ತಗುರು ಕಂಠಿ,
ಪೊ - ಉಂಚಳ್ಳಿ,
ತಾ - ಸಿರಸಿ,
ಜಿ - ಉತ್ತರ ಕನ್ನಡ,
581318,
ಮೊ - 9483648230

No comments:

Post a Comment