Monday, 7 July 2014

ಕವನ: ಫಾಲ್ಗುಣ ಗೌಡ

ಕವನ: ಫಾಲ್ಗುಣ ಗೌಡ ಇವರ `ಇನ್ನೂ ಬರಲಿಲ್ಲವಂತೆ ಪಾರಿವಾಳಗಳು' ಕಲಾತ್ಮಕ ಕವಿತೆ. ಅರ್ಥಗರ್ಭಿತ  ಕವಿತೆ. ತುಂಬಾ ಚನ್ನಾಗಿದೆ. ಧನ್ಯವಾದಳು.

-ದತ್ತಗುರು ಕಂಠಿ

Thursday, 30 June 2011

ಹನಿಗವನಗಳು

-----------------
1 ಕಸಿ
----------
ನಲ್ಲೇ..........
ನೀ
ಕಸಿ ಮಾಡಿ
ನೆಟ್ಟು
ಬೆಳೆಸಿರುವ ಸಸಿಗಳಂತೆ
ನಾ ಕಟ್ಟಿರುವ
ಕವಿತೆಗಳು.
2 ಪರಾಂಭರಿಸು
-------------
ಮನಸಿನಾಳದ ಬಯಕೆಗಳ
ಮೆಲುಕುಗಳು
ಆಡುವ ಮಾತಿನಲಿ ಬರದು
ಗೆಳತೀ
ಅದನು
ನನ್ನ ಕಣ್ಣಂಚಿನ
ಪ್ರತಿಬಿಂಬದಲಿ ಇಣುಕು.
3 ಕತ್ತಲೆ
----------
ಕತ್ತಲೆಯ ಓಡಿಸಲೆಂದು
ನೂರಾರು ಮೊಂಬತ್ತಿಗಳ
ಹಚ್ಚಿಟ್ಟೆ,
ಬತ್ತಿ ಬೆಳಗಿತು
ಬೆಳಕು ಹರಿಯಿತು
ಮೇಣ ಕರಗಿತು
ಕತ್ತಲೆ ಮಾತ್ರ
ಓಡಲೂ ಇಲ್ಲಾ
ಕರಗಲೂ ಇಲ್ಲಾ
ಇದ್ದಲ್ಲಿಯೇ ಇತ್ತು.
4 ಹನಿಮೂನ್
------------
ಸ್ವಚ್ಛಂದ ಬಾಳಿನಲಿ
ಚಕ್ಕಂದ ಆಡುತಿರುವ
ಯುವ ಜೋಡಿ ಏನ್ ಅಂದ ಏನ್ ಚೆಂದ
ಇದೇ ಅವರ
ಮಧು ಚಂದ್ರ.
5 ನೆನಪು
-----------
ತೊಟ್ಟಾಗ ನವನವೀನ ಉಡುಪು
ಮೈಮನ ನಿಮಿರುವ ಹೊಳಪು
ಹೌದು!
ಅಂದಾಗಿದ್ದಳು ಆಕೆ
ನನಗೆ ಮಾತ್ರ ಮುಡಿಪು
ಎಂದು ಕಾಡುವುದೆಲ್ಲ ಹಳೇ ನೆನಪು.
6 ಅನ್ನ
----------
ಬಾ
ಸುಮತೀ
ನಾನುಣಿಸುವೆ
'ಭಾಸುಮತಿ'.
7 ವಿರಹ
---------------
ಸಖೀ
ನೀ ನನಗೆ ನಿಕ್ಕಿ
ಇದರಿಂದ
ನಾ ತುಂಬಾ ಲಕ್ಕಿ
ನನ್ನ ಬಳಿ ನೀನಿರದಿರೆ
ನಾಅಳುವೆ ಬಿಕ್ಕಿ ಬಿಕ್ಕಿ.
8 ಕರಾರು
------------
ಪ್ರಿಯಕರಾ.......
ನೀ ನನ್ನ
ಮದುವೆ ಆದ ಮೇಲೆ
ಬೀರು ಬಾರಿಗೆ ಹೋಗಲು
ನನದಿಲ್ಲ ತಕರಾರು,
ಆದರೆ
ತಿಂಗಳ ಪೂತರ್ಿ ಸಂಬಳ ಮಾತ್ರ
ನನ್ನ ಕೈಗೆ
ಕೊಡಬೇಕೆನ್ನುವುದೇ
ನನ್ನ ಕರಾರು.
9 ಪ್ರಿಯ ತಮ್ಮ
---------------
ಪ್ರಿಯತಮಾ........
ಎಂದು ಕರೆಯದಿರು ಚಿನ್ನಾ
ನಿನ್ನ ಸೊಳ್ಳೆರಾಗದಿ ಅದು
ಪ್ರಿಯತಮ್ಮಾ ಎಂದಾಗಿ
ಅಣುಕಿಸುವುದು ನನ್ನ.
10 ಆಸರೆ
------------
ಪ್ರಿಯೇ.......
ನೀ ಬಳ್ಳಿಯಂಗೆ
ಸುತ್ತಿ ಬಳಸುವುದಾದರೆ
ನಾ
ಹೆಮ್ಮರವಾಗಿ ಬೆಳೆದೇನು!
20 ಮಗುವಿಗೆ ಸಿಗುವುದು
------------------
ಮಹಿಳೆಯಿಂದ
ಮುದ
ಪುರುಷನಿಂದ
ಮದ.
21 ಪುರುಷನಿಗೆ
----------------
ಅವಳನ್ನು
'ಚಿನ್ನ'
ಎಂದು ಕರೆದರೆ
ನೀ
11 ಚುಟುಕು
---------------
ಮೊಟಕಾಗಿ ಕಂಡರೂ
ನಾಟುವಂತೆ
ಕುಟುಕುವುದು
ಕಟುಕನನ್ನೂ ಕೂಡಾ.
12 ಕಲ್ಪನೆ
------------
ಇಲ್ಲದ ಸಂಗತಿಗಳ
ಸಂತತಿಗಳೇ
ಕವಿಯ ಕಲ್ಪನೆಗಳ
ಸಂಗಾತಿಗಳು.
13 ಸ್ತುಪ್ತತೆ
------------
ಬಾಯಿ ತುಂಬಾ
ಮಾತುಗಳನ್ನಾಡಿದಾಕ್ಷಣ
ಭಾವನೆಗಳು
ಬಿಚ್ಚಿಕೊಳ್ಳವು ಗೆಳತೀ,
ದಿನ ಪೂತರ್ಿ
ಮೌನ ಆವರಿಸೇ
ಬಯಕೆಗಳು
ಕಚ್ಚಿಕೊಳ್ಳವು ಎನ್ನೊಡತೀ.
14 ಒಲವು
---------------
ಬರಿಗಣ್ಣಿಗೆ ಕಾಣದ್ದು
ಇರಬಹುದು
ಹಲವು
ಅದರಲ್ಲೊಂದು
ನನ್ನ ನಲ್ಲಗೆ
ತಿಳಿಯದ
ನನ್ನೊಲವು.
15 ಬರ
------------
ಬರಗಾಲದ ಬವಣೆಯಲ್ಲಿ
ಬತ್ತಿದುದು
ಬಾವಿ,ಕೆರೆ,ಕೋಡಿ ಮಾತ್ರವಲ್ಲ
ಬಡ ಕವಿಯ
ಲೇಖನಿಯ 'ಮಸಿ' ಕೂಡ
16 ಸಾಲ
--------------
ಹನುಮಂತನ
ಬಾಲದಂತೆಯೆ ಬೆಳೆದು
ಕೊನೆಗೆ ಅದೇ
ಶೂಲವಾಗುವುದು.
17 ಕಾಡುವಿಕೆ
--------------
ಬಂದಾಗ ಎಪ್ರೀಲು
ಆಗಿಬಿದುವುನೇನೋ ಫೂಲು
ಎಂಬುದು ಅದೊಂದು ದಿನದ
ಫೀಲು.
18 ಸುವೃಷ್ಠಿ?
----------
ಆ ಶೃಷ್ಠಿಯಲಿ
ಅಕಾಲದಲಿ ಆಗುವುದು
ಅನಾವೃಷ್ಠಿ,
ಸಕಾಲದಲ್ಲಿ ಆಗುವುದು
ಅತಿವೃಷ್ಠಿ,
ಪಂಚಾಂಗಗಳಲ್ಲಿ ಬರೆದಿರುವುದು ಮಾತ್ರ
ಸುವೃಷ್ಠಿ.
19 ಗದ್ದೆ ನೆಟ್ಟಿ
------------
ಇರಬಹುದು
ಪುರುಷರ ಎದೆ ಗಟ್ಟಿ
ಆದರೆ
ಮಹಿಳೆಯರದು ಸೊಂಟ ಗಟ್ಟಿ,
ಹಾಗಾಗಿ
ಅವಳು ಮಾತ್ರ ಮಾಡುವಳು
ಗದ್ದೆ ನೆಟ್ಟಿ.
'ಕಬ್ಬಿಣ'
ಆಗುವ ಸಂಭವ.
22 ಹೊಂದಾಣಿಕೆ
----------------
ಬೆಳ್ಳೀ ಬಟ್ಟಲ ತುಂಬೆಲ್ಲಾ
ಬಿಡಿ ಬಿಡಿಯಾಗಿ
ಹರಡಿಕೊಂಡಿವೆ,
ಸಂಕ್ರಾಂತಿ ಕಾಳುಗಳು.
------23 ಭಾಸ-----
ಹೆಕ್ಕಿ ಹೆಕ್ಕಿ
ತಿನ್ನುತಿಹುದು
ಗಗನ ಚುಕ್ಕಿಗಳ
ಈ ಭೂಮಿ ಹಕ್ಕಿ.
24 ನಕ್ಷತ್ರಗಳು
-------------
ಬಿಳಿ ಹೊಲದಲ್ಲಿ
ಕಪ್ಪು ಅಕ್ಷರಗಳನ್ನು
ಬಿತ್ತುವವ.

25 ಕಲ್ಪನೆ
------------
ಆಗಸದ ಚಿಕ್ಕೆಗಳು
ಸೂರ್ಯ ಚಂದ್ರರ
ಇಕ್ಕೆಗಳು.
26 ಬೆಸುಗೆ
-----------
ಹೊಲಿಯೋಣ
ಬಾ ಬಾಲೆ
ಹರಿದು ಚಿಂದಿ ಚಿಂದಿ ಆಗಿಬಿಟ್ಟಿದೆ
ಮುಗಿಲು,
ಬೇಗ ತಾ ನೂಲು.
ಹೊಂದಾಣಿಕೆ
-------------
ದೇವರಿಗೆ ಹಾಕಲಿರುವ
ಕಾಣಿಕೆ
ಮಾಡದಿದ್ದರೂ ಪರವಾಗಿಲ್ಲ
ಎಣಿಕೆ,
ಏಂಕೆಂದರೆ
ದೇವರಲ್ಲಿಯೂ ಇದೆ,
ಕೊಟ್ಟು ತೆಗೆದುಕೊಳ್ಳುವ
ಹೊಂದಾಣಿಕೆ.
28 ತಾರೆಗಳು
----------------
ನೀಲಿ ಅಂಗಿಯ ತುಂಬೆಲ್ಲಾ
ಬಂಗಾರದ ಗುಂಡಿಗಳು.
29 ವ್ಯತ್ಯಾಸ
---------------
ಹೇಳೀ ಕೇಳೀ ಬರದು
ಆಕಳಿಕೆ,
ಮನಸ್ಪೂತರ್ಿಯಿಂದ ಬರುವುದು
ಆಲಿಕೆ.
30 ಉಪಗ್ರಹಗಳು
---------------
ರೆಕ್ಕೆ ಪುಕ್ಕಗಳಿರದಿದ್ದರೂ
ಹಾರಾಡುವವು
ನೀರಿಲ್ಲದಿದ್ದರೂ
ಈಜಾಡುವವು.
31 ಸುಲಭ
---------------
ಅವಳ
ಹೆಸರೇನೆಂದಿರಾ?
ಅವಳ್ಹೆಸರೇ...........
ಇಂದಿರಾ.
32 ಅತಿಯಾದಾಗ
----------------
ನಲ್ಲೆಯ ಪ್ರೇಮ ಸಲ್ಲಾಪದ
ಆಲಿಕೆ
ತಡೆಯಲಾಗುತ್ತಿಲ್ಲ
ಆಕಳಿಕೆ.
33 ನಲ್ಲೆಯ ನೆನಪು
----------------
ಆಲದ ಮರದ ಬೇರುಗಳಂತೆ
ನನ್ನ ನರನಾಡಿಗಳಲ್ಲೂ
ತುಂಬಿ ಕೊಂಡಿಹುದು.
34 ಎಂಬತ್ತರ ಬದುಕು
----------------
ಉರಿದು
ಮುಗಿಯುತ್ತಾ ಬಂದಿರುವ
ಮೊಂಬತ್ತಿಯಂತೆ.
35 ಕಾರಣ
------------
ಚಿಕ್ಕವರ ಬಾಯಿಯಲ್ಲಿ
ದೊಡ್ಡ ಮಾತು ಬರಲು
ಮೂಲ ಕಾರಣ.........
ದೊಡ್ಡವರು ಮಾಡಿದ
ಚಿಕ್ಕ ತಪ್ಪು.
36 ನಿವರ್ಾಹಕ
-------------
ಸಾವಿರಾರು ಜನರಿಗೆ
ನೀರು ಕುಡಿಸಿದ ಭೂಪ!
ಈತ
ಕಲ್ಯಾಣಮಂಟಪದ ಊಟದ ಪಂಕ್ತಿಯಲ್ಲಿ
ನೀರ್-ವಾಹಕ.
37 ಪ್ರೀತಿ
------------
ಚಿಕ್ಕವರು ಮಾಡಿದರೆ
ಪೆಪ್ಪರಮೆಂಟು
ದೊಡ್ಡವರು ಮಾಡಿದರೆ ಫನಿಶ್ಮೆಂಟು.
38 ಯಮ_ಪೂರಿ
--------------
ಇಲ್ಲೊಬ್ಬ ಇಂದು ಕಂಡ
ಯಮಪುರಿ,
ಕಾರಣ
ಹೊಟ್ಟೆ ಬಿರಿ ತಿಂದಿದ್ದ
ಉಬ್ಬಿದ ಪೂರಿ.
39 ನನ್ನಿನಿಯ
------------
ಸರ್ವರಿಗೂ
ಸಾಮಾನ್ಯನಾದ
ಈ ಅಸಾಮಾನ್ಯದವ
ನನಗೆ ಮಾತ್ರ
ಸರ್ವಸ್ವ.
40 ಅರವತ್ತರ ನಂತರ............
-------------------------
ಅರವತ್ತರ ಅನಂತರ
ಅವಲಕ್ಕಿ ಗಂಜಿ,
ಎಂದು ಅಲವತ್ತುಕೊಂಡರೆ...........
ಉದುರಿ ಹಲ್ಲುಗಳು
ಉದ್ಭವಿಸಿಯಾವೇ?
41 ಸಂದಾಯ
-------------
ಚೆಲುವೇ,
ೆನಿನ್ನ ಒಲವೇ
ನನಗೆ ಸಂದಾಗ
ಭಾದಿಸಲಾರದು
ಇನ್ಯಾವುದೇ
ಸೋಲು ಗೆಲುವು.
42 ಬಂಧನ
-----------
ಎನ್ನ ಮನಸ ಕದ್ದ
ಚಿತ್ತ ಚೋರಿಯ
ಬಂಧಿಸಿಡುವೆನು
ಹೃದಯ ಗೂಡಿನ ಚಿಪ್ಪಿನೊಳಗೆ.
43 ಜಡೆ
-------------
ಮಾರುದ್ದವಿದ್ದರೂ
ಮಾರುವಂತಹುದಲ್ಲ.
44 ಕೋಪ
-------------
ಬೇಕಾದಾಗ ಬರದು
ವಿದ್ಯುತ್ ದೀಪದಂತೆ
ಬೇಡವಾದಾಗ ಬರುವುದು
ಕರೆಂಟ್ ಬಿಲ್ನಂತೆ.
45 ಚಳಿ
--------------
ಸೂಜಿ ಮದ್ದಿನಿಂದಲೂ
ಶಮನವಾಗದ್ದು
ಕಂಬಳಿ ಹೊದ್ದು ಮಲಗಿದಾಗ
ಶಯನವಾಗಿತ್ತು.
46 ಕೊಂಡಿದ್ದಲ್ಲ
----------------
ಹೊಸದೊಂದು
ಮನೆಯ ಮಾಡಿದೆ
ಇನಿಯಳ
ಹೃದಯ ಮಂಟಪದಲ್ಲಿ.
47 ಅದೃಷ್ಟ
------------
ಲೆಖ್ಖ ಬರದವರೂ
ರೊಕ್ಕ ಮಾಡುವರು
ಹೆಕ್ಕಿ ನೋಡಿದರೆ..........
ರೊಕ್ಕ ಮಾಡಲು ಹೋಗಿ
ಲೆಖ್ಖ ಬಂದವರೂ
ಸಿಕ್ಕಿ ಬೀಳುವರು.
48 ಮೂಗು
------------
ಚೋಟುದ್ದವಿದ್ದರೂ
ಬೆಳೆಯುವಂತಹುದಲ್ಲ.
49 ಪರಿವರ್ತನೆ
--------------
ಹರೆಯದಲಿ ಹೊತ್ತಿದ್ದ
ಸಂಸಾರ ಭಾರದ ಹೊರೆ
ಮುದಿತನದಲಿ ಆಗಿದ್ದ
ಮನೆ ಮಂದಿಗೆಲ್ಲಾ ಒಂದು 'ಹೊರೆ.
50 ಸಂಚು
-----------
ಕಣ್ಮನ ನಿಮಿರುವ ಕೋಲ್ಮಿಂಚು
ಅವಳುಟ್ಟ ಜರತಾರೀ ಅಂಚು
ಇದೆಲ್ಲ
ಎನ್ನ ಸೆಳೆಯುವ ಸಂಚು
ಎಂದರಿವಾಗುವುದರೊಳಗೆ
ವ್ಯಾಪಿಸಿಬಿಟ್ಟಿದ್ದೆ ಇಂಚಿಂಚೂ.
51 ಚಿರಂಜೀವಿ
----------------
ಸಾಲ ಮಾಡಿದವ
ಸಾಯಬಹುದು
ಸಾಲ ನೀಡಿದವ
ಸಾಯಬಹುದು
ಆದರೆ
ಎಂದಿಗೂ ಸಾಯದು
ಈ ಸಾಲ.
52 ಸಾಹಸ
------------
ಅವಳಿಗರಿಯದ ಹಾಗೆ
ಆರಾಧಿಸಿದೆ
ಇದಕಿಲ್ಲ ಆಧಾರ
ಅವಳಿಗರಿಯದ ಹಾಗೆ
ರೋಧಿಸಿದೆ
ಇದೂ ನಿರಾಧಾರ
ಅವಳಿಗರಿಯುವ ಹಾಗೆ
ಹಾಕಿದೆ
ಮೂರುದಾರವೆಂಬ ಮೂಗುದಾರ
ಇದಕ್ಕಿದೆ
ನಾವಿರಾರು ಜನರ ಆಧಾರ.
53 ದಂತ ಭಗ್ನಂ
---------------
ಬಾಯಿಗಿಟ್ಟ ಗುಂಡ
ಶತಗಟ್ಟಿಯೆಂದು
ಬದಿಗಿಟ್ಟ ಚಕ್ಕುಲಿಯೊಂದ
'ಕಟಂ'ಎಂಬ ಸದ್ದು ಬಾಯಿಯಿಂದ
ಮುರಿದದ್ದು ಚಕ್ಕುಲಿಯಾಗಿರಲಿಲ್ಲ
ಗುಂಡನ 'ದಂತ.'
54 ಆಪ್ಯತೆ
-----------
ನನ್ನ ಅವರ ಸಂಬಂಧ
ತೀರಾ ಸನಿಹದ್ದು
ಆದರದು ಹೆಸರಿಗಷ್ಟೇ
ಸೀಮಿತದ ಸರಹದ್ದು
ನಾನು ದ ರಾ ಕಂಠಿ
ಅವರು ದ ರಾ ಬೇಂದ್ರೆ.
55 ಬೇರು
----------
ಯಾರೋ ಬೆದರಿಸಿದರೂಂತ
ನೀನೇಕೆ ಬೆದರುವೆ
ಬೆಡಗಿ;
ನಿನ್ನ ನನ್ನ ಒಲವು
ಹೃದಯಾಂತರಾಳದಲ್ಲಿ
ಬೇರೂರಿರುವಾಗ.
56 ಅಸಾಧ್ಯವಾದದ್ದು
----------------
ಕಾರು ಬಾರ್ನಲ್ಲಿ ಕುಳಿತೇ
ಬರೆದೆನೊಂದು ಕಾದಂಬರಿ
ವಷರ್ಾನುಗಟ್ಟಲೆ ಯೋಚಿಸಿದರೂ
ಬರೆಯದಾದೆ
ಅದಕ್ಕೊಂದು ಪರಿವಿಡಿ.
57 ಹಾಟರ್್ಫೇಲ್
--------------
ಇಳಿ ವಯಸ್ಸಿನಲ್ಲಿ
ಇಡದಿರಿ
ಅಪರಿಮಿತ ವಿಶ್ವಾಸ
ಆರೋಗ್ಯದ ಬಗ್ಗೆ
ಹೃದಯದ ಒತದತಡದಿ
ನಿಂತೀತು
ಸ್ವಾಸೋಛ್ವಾಸದ ಬುಗ್ಗೆ.
58 ಹೆಣ್ಣಿಗೆ
--------------
ವರದಕ್ಷಿಣೆ
ವಿಛ್ಛೇಧನ
ಭ್ರೂಣಹತ್ಯೆೆ
ಮೂಢನಂಬಿಕೆ
ಕಾಡುತಿಹವು
ದೆವ್ವ
ಭೂತ
ಪಿಶಾಚಿ
ಬ್ರಹ್ಮರಾಕ್ಷಸರುಗಳಾಗಿ.
59 ನಿದ್ದೆ ಮಾತ್ರೆ ಲಭ್ಯ
------------------
ದುಗುಡ ದುಮ್ಮಾನ
ವಿರಹ ವೇದನೆಗಳನ್ನು
ದೂರೀಕರಿಸಲು
ನಮ್ಮಿಂದ ಮಾತ್ರ ಸಾಧ್ಯ.
60 ಮಹಾಕವಿಗಳು!
--------------
ವ್ಯಾಸ
ಬರೆದ ಮಹಾಭಾರತವನ್ನು
ತಿರುಚಿ ಮರುಚಿ
ಬರೆಯುವುದೇ ಇವರ
ಹವ್ಯಾಸ.
61 ಅಂದು
-----------
'ಅಡಿಕೆ ಯುಗ'
ದರ ಸತ್ತು ಹೆಚ್ಚಿತ್ತು
ಸಾಲದ ಕಂತು,
'ವೆನಿಲ್ಲಾ ಯುಗ'
ದರವೇನೋ ಬಂತು
ಆದರೆ ಹೆಚ್ಚಿತ್ತು
ಜೀವ ಭಯದ ಜಂತು.
62 ನಾ ಪಾಸು?
-------------
ನೋಡಿಕೊಂಡೇ ಬರೆದೆ
ಪರೀಕ್ಷೆಯಲ್ಲಿ
ಆಸುಪಾಸು,
ಆದರೂ ರಿಸಲ್ಟ ಮಾತ್ರ
ನಪಾಸು.
63 ಸಹಬಾಳ್ವೆ
------------
ಕೋಮು ಧ್ವೇಶದಕಿಡಿ
ಸುಟ್ಟೀತು ಊರನ್ನೇ ಇಡೀ
ಅದೇ ಕಿಡಿ
ಸ್ನೇಹ ಸೌಹಾರ್ಧವಾಗಿ ಬೆಳಗಿಸಿದರೆ......
ನಮ್ಮ ದೇಶಕ್ಕೇ ಸಿರಿ.
64 ಜಲ ಮಾಲಿನ್ಯ
---------------
ಪುಣ್ಯ ಕ್ಷೇತ್ರಗಳಲ್ಲಿ
ತೀರ್ಥ ಸ್ನಾನದ ಹರಕೆ
ಇದಾಗಿತ್ತು ನನ್ ಬಯಕೆ
ಪೂರೈಸಿದ ಬಳಿಕ
ಮೈಯೆಲ್ಲಾ ತುರಿಕೆ.
65 ಎಚ್ಚರಿಕೆ
------------
ನಲ್ಲೇ
ತಾಳಿ ಕಟ್ಟಲು
ಯಾರು ಬಂದರೂ
ಕೊಡದಿರು ಕತ್ತು,
ಕೊಟ್ಟರೆ
ನಮ್ಮ ಪ್ರೀತಿಗೆ ಬಂದೀತು
ಕುತ್ತು.
66 ರಾಮಕೃಷ್ಣ ಹೆಗಡೆ
----------------
ಈ ಧುರೀಣನ ನಿಧನಕ್ಕೆ
ಕಂಬನಿಗೈಯುತ್ತಿದ್ದರು
ಕಾಲೇಜಿನ ಆಸುಪಾಸು,
ಏಕೆಂದರೆ
ಆ ಮುತ್ಸಧ್ಧಿಯೇ
ಜಾರಿಗೆ ತಂದ ವ್ಯವಸ್ಥೆ
ಬಸ್ ಪಾಸ್.
67 ಮನವಿ
--------------
ಎನ್ನ
ಮನಸ ಕದ್ದ ಕಳ್ಳಿ
ಅದನ್ನ ಹಿಂತಿರುಗಿಸದಿರು
ಎಂಬುದೆನ್ನ ಕಳಕಳಿ.
68 ಸಾಗುವುದು
-------------
ಬರುವತನಕ
ಮರಣ
ಜೀವನದ
ಪಯಣ
69 ಸಾಹುಕಾರ
-------------
ಬಡತನಕೆ
ಸಾವು
ಬಂದಾಗ.
70 ಸದಾ ಓದು
-------------
ಜೀವಿತಾದ್ಯಂತ ನೀನಾಗಿರು
ಗ್ರಂಥಾಲಯ ಮಿತ್ರ,
ಇಲ್ಲದಿರೆ ನೀ
ಲಯ ಮಾತ್ರ.
71 ಕೊಂಡು ಓದಿ
-------------
ಓದಿನಲಿ ಅಭಿವ್ಯಕ್ತಿ
ಇರುವುದು ಸಹಜ
ಆದರದನು
ಕೊಂಡು ಓದುವವನೇ
ನಿಜ ಮನುಜ.
72 ಜ್ಞಾನವೃಧ್ಧಿಗೆ
------------
ಓದಿ ಓದಿ ಪುಸ್ತಕ
ತುಂಬಿಸಿ ಕೊಳ್ಳಿ ಜ್ಞಾನದಿಂದ
ನಿಮ್ಮಯ ಮಸ್ತಕ.
73 ಕಲಿ ಮಹಿಮೆ
--------------
ಕಲಿಗಾಲವೆಂದರೆ
ಕೆಲ ಜನರಿಗಾಗಾ
ಏಕೆಂದರೆ
ಕೆಲ ಜನರಿಗೆ ಯೋಗ
ಕೆಲ ಜನರಿಗೆ ಲಾಗಾ.
74 ಸಾಠಿ
---------
ಮದುವೆ ಮುಂಜಿ
ಸಭೆ ಸಮಾರಂಭಗಳಲ್ಲೆಲ್ಲಾ
ನೀನೇ ಸ್ವೀಟಿ
ಸ್ವೀಟಲ್ಲಿ ಇಲ್ಲಾ
ನಿನಗಾರೂ ಸರಿಸಾಟಿ.
75 ಹರೆಯ
-----------
ಹದಿ ಹರೆಯಕೆ
'ಬಯಕೆ'ಗಳೇ
ಹೊದಿಕೆ ತಡಿಕೆ ಎಲ್ಲಾ.
76 ಗಂಡಾಂತರ
-------------
ಗಂಡ ಹೆಂಡತಿಯರ
ನಡುವೆ ಇದ್ದರೆ
ಅಂತರ.
77 ಬದಲಾವಣೆ
-------------
ಮನಷ್ಯನ ವಯಸ್ಸು
ಬದಲಾದ ಹಾಗೇ
ಬದಲಾಗುತ್ತದೆ
ಮನಸ್ಸು,
ಜೊತೆಗೆ
ಕನಸೂ ಕೂಡ.
78 ಸಹಕಾರ
---------------
ಹೆಸರಲ್ಲಿ ಮಾತ್ರ 'ಕಾರ'
ಒಳಗಡೆ ಸಿಹಿಯಾದ ತತ್ವ
ಇದನ್ನರಿತು ಬಾಳಿದಲಿ
ನಾವಾಗುವೆವು
ಸಾಹುಕಾರ.
79 ನಿಜವೆ?
-----------
ಜೀವನ ಎಂಬುದು
ಬರೀ
ಅಂತೆ ಕಂತೆಗಳ
ಸಂತೆಯಂತೆ.
80 ಮಕ್ಕಳಿಗೆ
-----------
ಕಲಿಸಿದರೂ ಕಲಿಯದಿದ್ದರೆ
ಬದುಕು
ಹಿಡಕೊಂಡು ನಾಲ್ಕು
ತದುಕು,
81 ನಾ(ಲಾ)ಯಕ
---------------
ಪಕ್ಷದಿಂದ ಪಕ್ಷಕ್ಕೆ ನೆಗೆಯುವ
ನಾಯಕರು
ಅಧಿಕಾರಕ್ಕೆ ಬರಲು
ನಾಲಾಯಕರು.
82 ಕಾಖರ್ಾನೆ
--------------
ಅಂದು
ಚಳುವಳಿಗಾರರು
ಸ್ವಾತಂತ್ರ್ಯಯೋಧರಾಗಿ ಬಂದ
ಬಂಧೀಖಾನೆ,
ಇಂದು
ಪುಂಡ ಪೋಕರಿಗಳು
ರಾಜಕಾರಣಿಗಳಾಗಿ ಬದಲಾಗುವ
ಕಾಖರ್ಾನೆ.
83 ಎದೆಗಾರಿಕೆ
--------------
ತುತ್ತು ಇಕ್ಕವಳು
ಮುತ್ತು ನೀಡುವವಳು
ಪ್ರೀತಿಯಿಂದಿದ್ದರೆ
ಅಕ್ಕ ಪಕ್ಕ
ಕಷ್ಟವಾದರೂ ಎದುರಿಸಬಹುದು
ಈ ಬದುಕ.
84 ಎಚ್ಚರಿಕೆ
-------------
ಕಲಿಯಾಕಿಲ್ಲ ಸಾಲೀ ಗೀಲಿ
ಬೇಕಿಲ್ಲ ಕಟ್ಟುಪಾಡುಗಳ ಬೇಲಿ
ಆರಾಮಾಗಿರ್ತೀನಿ ಜಾಲಿ
ಎಂದವ ಕೊನೆಗೆ
ಮಾಡಿ ಬದುಕಬೇಕಾದೀತು
ಕೂಲಿ ನಾಲಿ.
85 ಬಯಕೆ
-----------
ಬಯಸಿದಷ್ಟೂ
ಬಹಳ
ಆಸೆಗಳ ಆಳ'
86 ಸತ್ಯ
---------
ಬದುಕಿನುದ್ದಗಲಕ್ಕೂ
ಆಡಿದ್ದೆಷ್ಟೋ ಆಟ
ಅಂತಿಮದಲ್ಲಿ ಮಾತ್ರ
ಆರಡಿ ಮೂರಡಿಯೇ
ದಿಟ.
87 ದೈವದೊಲವು
---------------
ಬೋರ್ಗರೆದುಕ್ಕುವ ಪ್ರವಾಹದಂತೆ
ಪ್ರತಿ ಮನುಷ್ಯನ ಮನಸ್ಸು
ಆಧ್ಯಾತ್ಮಿಕತೆಯತ್ತ ಒಲವು
ದೈವೀ ಶಕ್ತಿಯ ಬಲವು
ಇದ್ದರೆ ಬರುವುದು
ಪ್ರವಾಹ ಪ್ರತಿಬಂಧಿಸುವ ಛಲವು.
88 ಕನಸು
----------------
ಹಲವಾರು ಕನಸು ಬೀಳುವವು
ದಿನನಿತ್ಯ
ಅವುಗಳಲ್ಲೊಂದೂ
ಸತ್ಯ.
89 ಬದಲಾವಣೆ
------------
ಇದು ಕಲಿಗಾಲ
ಕುಲ ಕುಲ ಕುಲ
ಎನ್ನುವವನೇ
ಕೇವಲ.
90 ವ್ಯತ್ಯಾಸ
-------------
ಊಟ ಆಟೋಟಗಳನ್ನು
ಮಿತಗೊಳಿಸಿಕೊಂಡರೆ
ಆರೋಗ್ಯ,
ತೀರಾ ಕಡಿತಗೊಳಿಸಿದರೆ
ವೈರಾಗ್ಯ.
91 ಆಸೆ
----------
ನೀನೊಂದು ತೀರ
ನಾನೊಂದು ತೀರ
ಅಂತಿದ್ದ
ನಮ್ಮನ್ನು ಸೇರಿಸಿತ್ತು
ನಮ್ಮಾಸೆಗಳ ಮಹಾಪೂರ.
92 ಅಪರಾವತಾರ
---------------
ಮಡಿ ಮೈಲಿಗೆ
ಶುದ್ಧ ನಿಶುದ್ಧಗಳು
ಬುದ್ಧಿವಂತ ಜನರ
ಸಮಯಕ್ಕೆ ಸ್ಪಂದಿಸುವ
ಅಪರಾವತಾರಗಳು.
93 ಚಂಚಲೆ
-----------
ಕಣ್ಣಂಚಿನಲ್ಲಿಯೇ
ಸಂಚು
ಮಾಡುವವಳು.
94 ಜೀವಂತ ರಂಬೆ
------------------
ಕೊಂಡಿದ್ದಲ್ಲ, ಕದ್ದಿದ್ದಲ್ಲ
ದಕ್ಕಿದ್ದಲ್ಲ, ಮಿಕ್ಕಿದ್ದಲ್ಲ
ಆದರೂ ಆಗೊಂಬೆ
ಯನ್ನ ಸ್ವಂತದ್ದೆಂಬೆ.
95 ವಾಸ್ತವ
-----------
ದೇಶದಲ್ಲೆಲ್ಲ ಬರ
ಸಾಲ ಬಲು ಭಾರ
ಅಡವಿಟ್ಟಾದರೂ ಸರ
ತುಂಬಲೇಬೇಕಲ್ಲ ಕರ.
96 ನೀರಿನ ವಿಧ
---------------
ಕೆರೆ ನೀರು
ಮನೆಯಲ್ಲಿದ್ದು
ವ್ಯವಸಾಯ ಮಾಡಿಕೊಂಡಿರುವವ,
ಹೋಳೆ ನೀರು
ಊರಿಂದೂರಿಗೆ
ವರ್ಗವಾಗಿ ಸಂಚರಿಸುತ್ತಲಿರುವ
ಸಕರ್ಾರಿ ನೌಕರ,
ಸಮುದ್ರ ನೀರು
ಇಡೀ ಇಂಡಿಯಾವನ್ನೇ
ವ್ಯಾಪಿಸಿರುವ
ಬ್ರಷ್ಠಾಚಾರ ಪೀಡಿತ
ರಾಜಕಾರಣಿಗಳು.
97 ಕಿವಿಮಾತು
------------
ಮುಂಜಾನೆ
ಮನೆಮಂದಿಯನ್ನು
ತಟ್ಟಿ ತಟ್ಟೀ ಎಬ್ಬಿಸಿ,
ಇಲ್ಲದಿರೆ
ಆರಿಹೋದೀತು
ಬೆಡ್ ಕಾಫಿ ಬಿಸಿ.
98 ಹಠ
------------
ಬೆಳ್ಳಗಿನ ಮೈಬಣ್ಣದ
ಹುಡುಗಿಯೇ ಬೇಕೆಂದು
ಆಸೆ ಪಟ್ಟ ವರ ಮಹಾಶಯನಿಗೆ
ಕೊನೆಗೆ ದಕ್ಕಿದ್ದು
ಬಳಿ ಹುಡುಗಿಯಲ್ಲ
ಬಿಳಿ ಕೂದಲಿನ ಹುಡುಗಿ.
99 ವಿಪಯರ್ಾಸ
---------------
ಅಂತರಿಕ್ಷಯಾನ
ಮಾಡಿಯೇ ತೀರಬೇಕೆಂದು
ಕನಸ ಹೊತ್ತಿದ್ದನೊಬ್ಬ
ಪುಣ್ಯಾತ್ಮ,
ಆದರೆ ದುರಂತವೊಂದರಿಂದ
ಅಂತರಿಕ್ಷಕ್ಕೇ ನೆಗೆದಿತ್ತು
ಅವನಾತ್ಮ.
100 ಅಜ್ಜಿಯ ಅಡಿಗೆ
----------------
ಮನೆಯ ಹಿತ್ತಲಿನಲ್ಲಿಯೇ
ಮಾಡಿ ಹಾಕಿದಳು ನನ್ನಜ್ಜಿ
ಮೂರ್ಹೊತ್ತೂ ಬದನೇಕಾಯಿ ಬಜ್ಜಿ
ಈಗ ಮನೆ ಜನರಿಗೆಲ್ಲಾ
ಮೈ ತುಂಬಾ ಕಜ್ಜಿ.
101 ವಿಂಗಡನೆ
--------------------
ಚನ್ನಾಗಿ ಮೂಡಿ ಬಂದಲ್ಲಿ
ಸಚಿತ್ರ ವರದಿ
ಚಿತ್ರ ಅಸ್ಪಷ್ಟವಾಗಿದ್ದಲ್ಲಿ
ವಿಚಿತ್ರ ವರದಿ
ಎಲ್ಲಾ ತಪ್ಪಿದರೆ
ಸೀದಾ ರದ್ದಿ.
102 ಅ_ ಬಾವ
---------------------
ಮಾವನ ಮನೆ ಮಂದಿಗೆ
ಆ ಊರ ಜನಕೆಲ್ಲ
ನಾನಾದೆ ಬಾವ
ನನಗೆ ಮಾತ್ರ
ಬಾವನದೇ ಅಭಾವ.
103 ವೇಶ್ಯೇ
-----------------
ಕಟ್ಟೋದಿಲ್ಲ
ಅವಳ್ಯಾರಿಗೂ ರಾಖಿ
ಏಕೆಂದರೆ
ತಪ್ಪಿ ಹೋಗುತ್ತದಲ್ಲ
ಗಿರಾಕಿ.
104 ಕೊಳೆರಾಯ
--------------------
ಹೊಯ್ಯೋ ಹೊಯ್ಯೋ ಮಳೆರಾಯಾ
ಎಂದು ಒದರುವುದೇಕೆ?
ನಿಮ್ಮ ಕರೆಗೆ ಓಗೊಟ್ಟು
ಭಾರೀ ಮಳೆ ಸುರಿದರೆ
ಅಡಿಕೆ ಮರಗಳಿಗೆ
ಕೊಳೆರಾಯ ಗಂಟು ಬಿದ್ದಾನು
ಜೋಕೆ.
105 ಆಳು ಗೋಳು
-------------------
ಆಳು ಮಾಡಿದ್ದು ಹಾಳು
ಇದು ಬಹಳ ಹಳೆಯ ಗಾದೆ ಕೇಳು
ಈಗ ಆಳಿಲ್ಲದವನ ಬಾಳು
ಗಾಢಾಂಧಕಾರದ ಬೀಳು.
106 ದಂಪತಿಗಳಲ್ಲಿ
್ಟ---------------------
ವಿಫುಲವಾಗಿದ್ದರೆ
ಪ್ರೀತಿಯ ಒರತೆ
ಬೇರೇನೂ ಬಾಧಿಸಲಾರದು
ಕುಂದು ಕೊರತೆ.
107 ಗಿಡ ನೆಡಿ
---------------------
ಕಷ್ಟವಾದರೂ ಸರಿ
ಊರಿರಿ
ಪುಟ್ಟದೊಂದು ಸಸಿ
ಮುಂದೊಂದು ದಿನ
ಗಿಡವಾಗಿ, ಮರವಾಗಿ
ಹೂವು ಹಣ್ಣು ಕಾಯಿ ಬಿಟ್ಟಾಗ
ತಡೆಯಲಾಗದು ಖುಷಿ.
108 ಕೆಟ್ಟ ಬಳಿಕ ಬಂದ ಬುದ್ಧಿ
-----------------------
ಬಹಿರಂಗದ ಸೌಂದರ್ಯಕೆ
ಮನಸೋತು
ಅವಳಿಗೆ ಮಾರು ಹೋದೆ
ಅಂತರಂಗದ ಒಳತಿರುಳ
ಕಲ್ಮಶ ಕಂಡಾಗ
ಮಾರು ದೂರ ಬಂದೆ.
109 ನಾಯಿಕೊಡೆಗಳಂತೆ
---------------------
ಕನಸುಗಳು
ಚಿಗುರುತ್ತವೆ
ಮತ್ತೆ ಮತ್ತೆ ಕಮರುತ್ತವೆ
ಮತ್ತೆ ಮರುಕಳಿಸುತ್ತವೆ.
110 ಸತಿಪತಿಗಳೇ
-----------------
ಮಾಡದೆಯೇ ಅಪಹಾಸ್ಯ
ಮಾತನಾಡುತ್ತ ಹಾಸ್ಯ
ಕೆಡಿಕೊಳ್ಳದೆ ಸ್ವಾಸ್ಥ್ಯ
ಹಂಚಿಕೊಂಡರೆ ಸ್ವಾರಸ್ಯ
ಜೀವನದಿ ಮೂಡುವುದು
ಸಾಮರಸ್ಯ.
111 ಬಲ್ಲೆಯಾ?
--------------------
ಪ್ರೀಯೇ
ಪುನಃ ಪುನಃ
ಹೋಟೆಲ್ಲು ಸಿನೇಮ ಪಾಕರ್ುಗಳನ್ನು
ಅಲೆದಾಡಿಸುವಲ್ಲಿ ನಾನಾಗಿರಬಹುದು
ಜಿಪುಣ,
ಆದರೆ ಪ್ರೀತಿಯ
ಮಹಾಪೂರ ಹರಿಸುವಲ್ಲಿ
ಮಾತ್ರ ನಾ ನಿಪುಣ.
112 ಭಗ್ನ ಪ್ರೇಮಿ
------------------
ಅವ ಬಳಲಿ ಬೆಂಡಾದ
ವಿರಹದಿ,
ಏಕೆಂದರೆ ನೋಡಿದ್ದ ಪತ್ರಿಕೆಯಲ್ಲಿ
ನಲ್ಲೆಯ ವಿವಾಹದ
ವರದಿ.
113 ಅಜೀರ್ಣ
-------------------
ಹಲಸಿನ ಸೊಳೆ ಹಳಸುತ್ತದೆ
ಎಂದು ಮಾಡಿ ಹಾಕಿದಳೆನ್ನಾಕೆ
ಸೆಳೆಯದೇ ಹುಳಿ ಸಾರು ಪಲ್ಲೆ ಬಜ್ಜಿ,
ಈಗದನ ತಿಂದ ಬಳಿಕ
ಹೊಟ್ಟೆಯೆಲ್ಲಾ ತೊಳಸುತ್ತದೆ.
114 ಬೇಸಿಗೆಯಲ್ಲಿ
--------------------
ಜೋಗದ ಗುಂಡಿಯ
ಕಂಡೆ,
ಅಲ್ಲಿರುವುದು ಬರೀ ರಾಶಿ
ಕಲ್ಲುಗಳ ಬಂಡೆ.
115 ಸಾಹಸಿ
----------------
ಸಾಲು ಮರದ ತಿಮ್ಮಕ್ಕನ ಹೆಸರು
ಸದಾ ಅಮರ,
ಏಕೆಂದರೆ
ಅವಳೇ ಸ್ವತಃ ನೆಟ್ಟು ಬೆಳೆಸಿದ್ದಳು
ಸಾಲು ಮರ.
116 ದಂತ ಭಗ್ನ
-------------------
ಹುಡುಗಿಯೊಬ್ಬಳು
ಉದುರಿಸಿದ್ದಳು
ಅವನ ದಂತ,
ಹಾಗಾಗಿ ಆ ಪೋಲಿ ಛೇಡಿಸಿದ್ದು
ಅದೇ ಅಂತಿಮ ಹಂತ.
117 ಮರೆವು
----------------
ರಮಿಸುವುದರಲ್ಲಿಯೇ
ನಿರತರಾದ
ಸತಿ ಪತಿಗಳು,
ವಿರಮಿಸುವುದ ಮರೆತರು.
118 ವಿಪಯರ್ಾಸ
--------------------
ಸಕರ್ಾರಕ್ಕೇನೋ
ಅಧಿಕ ಆದಾಯ ತರುವುದು
ಅಬಕಾರಿ,
ಆದರೆ ಇದೇ
ಬಡ ಜನರನ್ನು ಆಗಿಸುತ್ತದೆ
ಭಿಕಾರಿ.
119 ಯೌವನದಲ್ಲಿ
------------------
ಪ್ರೀತಿ ಪ್ರೇಮದ ಹಸಿವು
ಹುಲ್ಲು ಮೇಯ್ದಂತೆ ಹಸುವು
ಇವಕೆ
ಕನಸುಗಳೇ ಕಸುವು.
120 ಶಿಕ್ಷಣ
--------------
ದಡ್ಡ ಮಕ್ಕಳನು
ತಿದ್ದಿ ತೀಡಿ, ಶಿಕ್ಷೆಗೆ ಒಳಪಡಿಸಿ
ಕಲಿಸುವುದು ಶಿಕ್ಷಣ,
ಅದುವೇ ಶಿಕ್ಷಕರ
ಲಕ್ಷಣ.
121 ವ್ಯತ್ಯಾಸ
------------------
ಸ್ವಾತಂತ್ರ್ಯ ಸಂಗ್ರಾಮದಲ್ಲಿ
ಜೀವತೆತ್ತವರು
ಹುತಾತ್ಮರು,
ಅನೈತಿಕ ಚಟುವಟಿಕೆಗಳಲಿ
ಸತ್ತವರು
ದುರಾತ್ಮರು.
122 ತಪರಾಕಿ
---------------
ಪ್ರಿಯಕರನೇ
ಕಟ್ಟಲು ಬಂದಿದ್ದ
ಅವಳಿಗೆ ರಾಖಿ.
ಕೋಪದಿಂದ ಕೊಟ್ಟಳವಗೆ
ತಪರಾಕಿ.
123 ಮುಂಜಾಗ್ರತೆ
----------------------
ಹೊಡೆಯುವ ಮೊದಲು
ಪಟಾಕಿ,
ತುಂಬಿಕೊಂಡಿದೆಯೋ ಇಲ್ಲವೋ
ಮನೆಯ ನೀರಿನ ಟಾಕಿ.
124 ಆಘಾತ
----------------
ಸಂತೋಷದಿ ವರಿಸಿದೆ
ಸಂಗೀತ ಕಲಿತ ಸಂಗಾತಿಯ
"ಸಂಗೀತದ ಖ್ಯಾತಿಯೇ ನನ್ನ ಸಂತತಿ"
ಎಂದು ಸತಿ
ಸತ್ಯ ಸಂಗತಿ
ತಿಳಿಸಿದಾಗ
ಭರಿಸಲಾಗದ ಘಾತಿ,
125 ಹೋರಾಟ
----------------
ಸತಿ ಪತಿಗಳಿಬ್ಬರೂ
ಅಪ್ರತಿಮ ಹೋರಾಟಗಾರರು
ಅವನ ಹೋರಾಟ
ಕನ್ನಡಕ್ಕಾಗಿ.
ಅವಳು ಹಾರಾಡುವುದು
ಕನ್ನಡಿಗಾಗಿ,
126 ..................ದೊಣ್ಣೆಗೆ ನಿಮಿಷ
------------------------
ಆಡದ ಮಗುವಿಗೇಕೆ
ಆಟಿಕೆ?
ಹಾಳುಗೆಡವೀತು
ಹೊಡೆಯುವುದರೊಳಗಾಗಿ
ಚಿಟಿಕೆ.
127 ದರ ಏರಿಕೆ
------------------
ಸ್ವಲ್ಪವೂ ಇಲ್ಲ
ಖರೀದಿಸುವ ಖಯಾಲಿ,
ಏಕೆಂದರೆ
ಜೇಬೆಲ್ಲ ಖಾಲಿ ಖಾಲಿ.
128 ಧನಿಕ
----------------
ಆಧುನಿಕ ಉಪಕರಣಗಳಿಗೆ
ಮಾರು ಹೋಗುವವ.
129 ಎದೆ ಹಾಲು
----------------------
ಮಗು
ಹೇಗೆ ಆದೀತು
ಮೃತ?
ತಪ್ಪದೇ ಕುಡಿಸಿದರೆ
ಅಮೃತ.
129 ಕನ್ನಡದ ಕಲಿ
----------------------
ದುಡಿದುಣ್ಣುವ ದಿನಗೂಲೀ
ಎಂದೆನ್ನುವೆಯೇಕೆ
ತಲೆಯೆಲ್ಲಾ ಖಾಲಿ?
ಕಲಿತರೆ ನೀ ಸಾಲಿ
ನೀನೊಬ್ಬ ಕನ್ನಡದ ಕಲಿ.

130 ಪರಿವರ್ತನೆ
-----------------
ಚುನಾವಣೆಯ ವೇಳೆ
ಕಿರುದನಿಯಲಿ ಪಿಸುಗುಟ್ಟಿದರೂ
ಕೇಳುವುದು
ಬಡವರ ಕೂಗು,
ಆರಿಸಿ ಬಂದ ನಂತರ
ಆರ್ತನಾದದಿ
ಮಾರ್ದನಿ ಮೊಳಗಿಸಿದರೂ
ಕೇಳದು 'ಹೋಗು'

131 ಕೊನೆಗುಳಿವುದು
---------------------
ಮೃತನ ಹಿಂಬಾಲಿಸುವ
ಜನ ಸಮೂಹ
ಚಿತಾಗಾರದವರೆಗೆ ಮಿತ್ರ,
ನಂತರ ಹಿಂಬಾಲಿಸುವುದು
ಪಾಪ ಪುಣ್ಯಗಳ ಕಡತಗಳು
ಮಾತ್ರ.

132 ಎಚ್ಚರಿಕೆ
------------------
ಜಮೀನು ಜಾಮೀನು ಇರುವಾಗ
ಮಾಡಲೇನು ಅಡ್ಡಿ?
ಎಂದುಕೊಂಡು
ಕಂಡ ಕಂಡಲ್ಲಿ
ಮಾಡಿದರೆ ಸಾಲ,
ಹರಿದುಕೊಂಡರೂ ಚಡ್ಡಿ
ತೀರಿಸಲಾಗದು
ಬಡ್ಡಿ ಚಕ್ರಬಡ್ಡಿ.

133 ಸಹಿ ಕಹಿ
-----------------
ಮುಂದದು
ನುಂಗಲಾರದ ಕಹಿ,
ಸಾಲಗಾರನ ಮಾತಿಗೆ
ಮರುಳಾಗಿ ಹಾಕಿದರೆ
ಜಾಮೀನಿನ ಸಹಿ.

134 ಒತ್ತು
------------------
ನಾನೋ ಕೊಟ್ಟೆ
ಅಧರದ ಸಿಹಿ ಮುತ್ತಿಗೆ,
ಆದರವಳು ಮಾತ್ರ
ಭಾರೀ ವೆಚ್ಚದ
ಹವಳದ ಮುತ್ತಿಗೇ
ಕೊಟ್ಟಳು.

135 ಖಾಲೀ ಅಂಬರ
---------------------
ಮೋಡಗಳು ಮನೆ ಮಾಡಿರದ
ಅಂಬರ,
ಭೂ ಜಲಚರಗಳಿಗೆ
ತಪ್ಪದ ಬರ.

136 ಇರುಳಿನಲ್ಲಿ
------------------
ನನ್ನವಳ
ಕೋರಿಕೆ ಹಾಗೂ ಕನವರಿಕೆ
ಜೊತೆಗೆ ಡರ್..........ಎನ್ನುವ ಗೊರಕೆ
ನನಗೆ ನಿದ್ದೆಯಾಯಿತು
್ತಮರೀಚಿಕೆ.

137 ನೀರಾ ವ್ಹರಿ
----------------
ವ್ಯವಸಾಯಕೆ
ಇಲ್ಲದಿದ್ರೂ ಪರವಾಗಿಲ್ಲ
ನೀರಾವರಿ,
'ನೀರಾ' ಒಂದಿದ್ದರೆ ಸಾಕು,
ಮಾಡಿಕೊಳ್ಳುವುದಿಲ್ಲ ವ್ಹರಿ.

138 ಶಾಸಕ ಸಂಸದರಿಗೆ
-----------------------
ಬೆಣ್ಣೆಯಲ್ಲಿನ ಕೂದಲು ತೆಗೆದಂತೆ
ನಯವಾಗಿ ಮಾತನ್ನಾಡಿ
ಸಂದಿಗ್ಧತೆಯಲ್ಲೂ ನುಣುಚಿಕೊಳ್ಳುವ
ಹುನ್ನಾರ,
ಇಂತವರ ಸ್ವಾಗತೆಕ್ಕೇಕೋ
ತುರಾಯಿ ಹಾರ?

139 (ಸ)ಸುತ್ತೋಲೆ
-----------------------
ಜನಪ್ರತಿನಿಧಿಗಳಿಗೆ
ನಾಗರಿಕರು ಕೊಡುವರು
ಆಗಬೇಕಾದ ಕೆಲಸಕಾರ್ಯಗಳ
ಸುತ್ತೋಲೆ,
ಈಡೇರಿಸದಿದ್ದಲ್ಲಿ
ಅವು ಸತ್ತೋಲೆ.

140 ಹವ್ಯಕ ಜನತೆ
-------------------
ಮಾನ ಮಯರ್ಾದೆಗೆ ಮಾನ್ಯತೆ
ಸಹಕಾರದಲ್ಲಿ ಸಮನ್ವಯತೆ
ಅಧಿಕಾರದಲ್ಲಿ ನೈಪುಣ್ಯತೆ
ಐಶ್ವರ್ಯದಲ್ಲಿ ಸ್ವಾಯತ್ತತೆ
ದಾನ ಧರ್ಮ ದಯೆಯಲ್ಲಿ ಪ್ರಾಧಾನ್ಯತೆ
ಅಳವಡಿಸಿಕೊಂಡಿರುವ
ಇದೇ ಹವ್ಯಕ ಜನತೆ.

141 ರೈತರು
-------------------
ದುಡಿಮೆಯ ಸಾಮಥ್ರ್ಯ
ಉತ್ಪನ್ನದ ಮಿತಿ
ಮೀರಿ
ದೊಡ್ಡ ಸಾಲದ ಮೊತ್ತಕ್ಕೆ
ಹಾಕಿದರೆ ಗುನ್ನ,
ಸಾಇದ ಬಡ್ಡಿ ಚಕ್ರ ಬಡ್ಡಿ ಸೇರಿ
ಕುತ್ತಿಗೆ ಮಟ ಬಂದಾಗ
ಬೊಬ್ಬೆ ಹೊಡೆವರು ರೈತರು
ಮಾಡಿರೆಂದು
ಸಾಲಾ ಮನ್ನಾ.

142 ಬೀಗ
---------------
ಲಕ್ಷ ರುಪಾಯಿ
ವರದಕ್ಷಿಣೆ ಬಾಬ್ತು ಕೇಳಿದ್ದ
ಬಾವೀ ಬೀಗ,
ವಧುವು ತಾನು
ಪೊಲೀಸ್ ಅಧಿಕಾರಿಣಿಯೆಂದಾಗ
ಬಾವೀ ಬೀಗರ ಬಾಯಿಗೆ
ಬಿದ್ದಿತಾಗ ಬೀಗ.

143 ನಿಜವಾದ ಸಿರಿ
------------------
ನಿಮಗೊಲಿಯಬೇಕೇ
ಹರಿ?
ಆಧ್ಯಾತ್ಮ ಚಿಂತನೆಗಳ
ರೂಡಿಸಿರಿ,
ದಕ್ಕುವುದಾಗ
ನೆಮ್ಮದಿ ಮನಶಾಂತಿಯೆಂಬ
ಸಿರಿ,
ಜೊತೆಗೆ ಹರಿ.

144 ಮರೀಚಿಕೆ
---------------------
ಅವಳು
ನಿದ್ರಿಸಿದರೆ ಗೊರಕೆ,
ಎಬ್ಬಿಸಿದೆನಾದರೆ
ಪೊರಕೆ ಬಡಿತದ ಹೆದರಿಕೆ,
ಹೀಗಾಗಿ
ಮುದುಡಿ ಕಮರಿ ಹೋಗುತ್ತಿದೆ
ನನ್ನೆಲ್ಲಾ ಬಯಕೆ
ಈಗ ಬರೀ ಕನವರಿಕೆ.

145 ದುಂಬಿ
-----------------
ಅವು ಮಧುವನ್ನು
ಸಂಗ್ರಹಿಸಿಟ್ಟಿರುವುದ
ನಂಬಿ,
ಕಿಟ್ಟಿದರೆ ಹಬ್ಬಿಸಿಬಿಟ್ಟಾವು
ದೊಂಬಿ.

146 ಕಾಗರ್ಿಲ್ ಕದನ
-------------------------
ಕೇಳಿ ಬರುತ್ತಲಿದೆ
ಮದ್ದು ಗುಂಡುಗಳ
ಸುರಿಮಳೆಯ ಸದ್ದು,
ಏಕೆಂದರೆ
ಅದು ನಮ್ಮ ದೇಶದ
ಸರಹದ್ದು.

147 ಇದು ಗೊತ್ತಾ?
-------------------
ಇರುಳಿನಲ್ಲಿ
ಕಿವಿಯ ಬಳಿ ಬಂದು
ಗುಯ್ ಎಂದು ಹಾಡುವ
ಸೊಳ್ಳೆಗೆ
ನಾವೇ ಶ್ರೋತ್ರುಗಳು,
ಸೊಳ್ಳೆರಾಗದಿ ನಿದ್ರಾಭಂಗ ಪಡಿಸಿದವೇ
ನಮಗಾಗ ಶತ್ರುಗಳು.

148 ಸಲೀಸು
-------------------
ಕುಡತೆ ನೀರ
ಗುಟುಕರಿಸಿದಂತೆ
ಕವಿಗೆ
ಚುಟುಕು ಬರೆಯುವುದು.

149 ಸಾಮಿಪ್ಯತೆ
--------------------
ಧರ್ಮ ಕರ್ಮ ಮರ್ಮದೊಳು
ಪ್ರವೇಶಿಸಿದರೆ
ರಾಜಕಾರಣ,
ಸುಂದರ ಪರಿಸರದೊಳ್
ಪಸರಿಸಿದಂತೆ
ವಿಷ ವಿಕೀರಣ.

150 ವಾಸ್ತವಿಕತೆ
--------------------
ವಿವಾಹ ಬಂಧನ
ಗಂಡು ಹೆಣ್ಣು
ಒಬ್ಬರಿಗೊಬ್ಬರು ಆಗಲೆಂದು
ಆಸರೆ,
ಆದರೀಗ ಆಗುತಿಹ ಗಂಡು
ಹೆಣ್ಣಿನ ಕೈಸೆರೆ.


151 ಚಿರಂಜೀವಿ
-------------------
ಜನನವಿದೆ
ೆಮರಣವಿಲ್ಲ
ಕವಿ ಗೀಚಿದ ಕವಿತೆಗೆ,
ಸಾವಿದೆ ಕವಿಗೆ
ಸಾವಿಲ್ಲ ಕವಿತೆಗೆ.

152 ಬರ
---------------
ಮುಂಗಾರು ಮಳೆಯ ಮೇಲೆ
ಕವಿತೆ ಬರೆಯ ಹೊರಟೆ,
ಸ್ಪೂತರ್ಿಯೇ ಇಲ್ಲಾ
ಕಾರಣ
ಮಳೆಯೇ ಇರಲಿಲ್ಲ.

153 ಎಚ್ಚರಿಕೆ
---------------
ಕಪ್ಪೆ
ನಿರುಪದ್ರವಿಯೆಂದು
ಧೈರ್ಯದಿಂದ ಹೆಜ್ಜೆ ಇಡಬೇಡಿ,
ಮರೆಯಲ್ಲಿ
ಕಪ್ಪೆಯನ್ನು ನುಂಗಲು ಬಂದ
ಹಾವಿರಬಹುದು.

154 ಹೆಣ್ಣಿಗೆ
----------------
ವಾಂತಿ ಬಂದರೆ
ಶಾಂತಿಯಿಲ್ಲ.

155 ಕಾಮರ್ಿಕರು
------------------
ಬೇಸಿಗೆಯಲ್ಲಿ
ಹೆಚ್ಚು ನೀರು ಕುಡಿಯುತ್ತಾರೆ
ಆದರೂ
ಮೂತ್ರ ಬಾಧೆ ಕಡಿಮೆ ಇರುತ್ತದೆ,
ಮಳೆಗಾಲದಲ್ಲಿ
ನೀರು ಕುಡಿಯದಿದ್ದರೂ
ಒಪ್ಪತ್ತಿಗೆ ಹತ್ತಾರು ಬಾರಿ
ಮೂತ್ರಖಾನೆಗೆ ಹೋಗುವರು.

156 ಮುಂಗಾರು ಮಳೆ
------------------------
ರಣ ಬೇಸಿಗೆಯ
'ಬರ'ದ ಬೇಗೆಯಲ್ಲಿ
ಬಸವಿಳಿದ ರೈತರ ಮನಕೆ
ಹೊಂಗನಸ ಬಿತ್ತುವುದು.

157 ಸಾಲುಮರ ಮತ್ತು ರಸ್ತೆ
-------------------------
ರಸ್ತೆ ಅಂಚಿಗೆ
ಗಿಡ ನೆಟ್ಟು ಬೆಳೆಸಿದರೆ
ಮುಂದದು ಮರವಾಗಿ
ದಾರಿ ಹೋಕರಿಗೆ ನೆರಳು ನೀಡುತ್ತದೆ,
ಜೊತೆಗೆ
ಹೂವು ಕಾಯಿ ಹಣ್ಣುಗಳನ್ನೂ ನೀಡಬಹುದು,
ಆದರೆ
ಮರದಿಂದ ಬೀಳುವ
ನೀರಿನ ಹನಿಯಿಂದಾಗಿ
ರಸ್ತೆ ಮಾತ್ರ ನಾಮಾವಶೇಷಗೊಳ್ಳುತ್ತದೆ.

158 ಕವಿತೆ
------------------------
ಸಾಹಿತ್ಯೋಧ್ಯಾನದಲ್ಲಿ
ಬಾಡದ ಹೂವು
ಕವಿ ರಚಿಸಿದ ಕವಿತೆ,
ಅಲ್ಲಿ ಚಿಗುರಿನಿಂತ
ಗಿಡಗಳೇ ಕವಿಗಳು.

159 ನಾಚಿಕೆ
-----------------
ಹೆಣ್ಣಿಗೆ
ಉಸಿರಿರುವವರೆಗೂ
ಉರುಳದ ಪೇಟ.

160 ತದ್ವಿರುದ್ಧ
-----------------
ಅಂದು
ಕೆಲಸದ ವೇಳೆ
ಕೂಲಿಯ ಬೆವರಿಳಿಯುತ್ತಿತ್ತು,
ಇಂದು
ಕೂಲಿ ಕೊಡುವವನದೇ
ಬೆವರಿಳಿಯುತ್ತದೆ.

161 ಬೇ- ಸರ
-----------------
ನನಗ್ಯಾಕೋ
ಅವನ ಮೇಲೆ ಬಲು
ಬೇಸರ,
ನಾ ಮಾಡಿ ಹಾಕಿದ್ದನ್ನು
ಮೂರ್ಹೊತ್ತೂ
ಸುರಿಯುತ್ತಾನೆ
ಸರಪರ,
ಆದರೆ ನಾನು ಕೇಳಿದ್ದ
ಒಂದೇ ಒಂದು
ಚಿನ್ನದ ಸರ
ಕೊಡಿಸಲಿಲ್ಲ
ಅದೇ ಬೇಸರ.

162 ಆಶಾಜೀವಿ
------------------
ಸ್ವಾಥರ್ಿಯ ಮನಸ್ಸು
ಕುದಿಯುವ ಕುಲುಮೆ
ಆಶಾಜೀವಿಯ ಮನಸ್ಸು
ಚಿಮ್ಮುವ ಚಿಲುಮೆ.

163 ಜೋಕೆ
----------------
ಸಿಗರೇಟು ಬೀಡಿ
ಸೇವನೆಯಿಂದ
ಹೊಗೆ ಬರುತ್ತದೆ
ಮಜಾ ಸಿಗುತ್ತದೆ
ಜೊತೆಗೆ
ದಮ್ಮು ಕೆಮ್ಮೂ ಕ್ಯಾನ್ಸರೂ
ಬರುತ್ತದೆ.

164 ಕಿವುಡಿ
-----------------
ನನ್ನ ನಿರರ್ಗಳ
ಪ್ರೇಮ ಸಲ್ಲಾಪ
ನಿರಂತರ ಸಾಗಿದರೂ
ಆಕೆಗೆ ನೀರಸವಿನಿಸಲಿಲ್ಲ
ಅತಿಯಾದ
ಮಧುರ ಮಾತ್ಗಳ ಆಲಿಕೆಯಿಂದ
ಆಕಳಿಸಲಿಲ್ಲ
ಆಕೆ ಕಿವುಡಿ ಎಂಬ ವಿಚಾರ
ಮೊದಲಿಗೇಕೆ ಹೇಳಲಿಲ್ಲ
ಪ್ರೀತಿ
ಬಹುಕಾಲ ಬಾಳಲಿಲ್ಲ.

165 ಬಂಧನ
-----------------
ಮೇಲೆಂದರೆ ಆಕಾಶದಲ್ಲಲ್ಲ
ಕೆಳಗೆಂದರೆ ಪಾತಾಳದಲ್ಲಲ್ಲ
ಮಧ್ಯದ ಭೂಮಿಯ ಮೇಲೂ ಅಲ್ಲ
ಆಕೆಯ ಇರುವಿಕೆ
ಎನ್ನ ಹೃದಯ ಮಂದಿರದ
ಗೂಡಿನ ಚಿಪ್ಪೊಳಗೆ
ಬೆಚ್ಚಗೆ ಬಂಧಿಯಾಗಿದ್ದಾಳೆ.

166 ಧಾರಾವಾಹಿ
------------------
ಗಾಳೀ ಪಟ
ಹಾರಿದ ಹಾಗೇ
ನೂಲು ಜೋಡಿಸುವ
ದಾರದ ಉಂಡೆಯಂತೆ.

167 ಬೀಡಿ ಬಿಡಿ
-----------------
ಗುರುವೆಂದ
ದುವ್ರ್ಯಸನಗಳ ಬಿಡಿ,
ಶಿಷ್ಯ ಎಲ್ಲಾ ಬಿಟ್ಟು
ಬೀಡಿ
ರೂಢಿಸಿಕೊಂಡ.

168 ಆಸೆಗಳು
-------------------
ತಳವಿಲ್ಲದ ಬಾವಿಯಲ್ಲಿ
ತಾವಾಗಿಯೇ ತುಂಬಿ ಕೊಂಡಿವೆ
ಆಳದಲ್ಲಿ ಅವಿತುಕೊಂಡಿವೆ
ಕಣಕಣದಲ್ಲೂ ಬೆರೆತು ಹೋಗಿದೆ
ನರನಾಡಿಗಳಲೂ ಕಲೆತು ಹೋಗಿವೆ.

169 ಕಲಬೆರಿಕೆ
------------------
ವಿಷ ಕುಡಿದರೆ
ನಾವು ಸಾಯೋದಿರಲಿ
ಹೊಟ್ಟೆಯೊಳಗಿನ
ಜಂತೂ ಸಾಯಲಿಕ್ಕಿಲ್ಲ.

170 ಭಾವನೆ
----------------
ಆತ ಅಪರಾಧಿಯಲ್ಲ
ಅಮಾಯಕನೆಂಬುದು
ನನ್ನ ಭಾವನೆ'
ಏಕೆಂದರೆ
ಆತ ನನ್ನ
ಖಾಸಾ 'ಭಾವ'ನೇ

171 ಸ್ಮಾರಕ
----------------
ನಾನು ಬದುಕಿದ್ದಾಗ
ಹೊಲವೆಂದರೆ ಅಚ್ಚುಮೆಚ್ಚು
ಹಾಗಾಗಿ ಈಗ

ಹೊಲದಲ್ಲಿ ನಿಲ್ಲಿಸಿದ್ದಾರೆ
ನನ್ನದೇ ಬೆಚರ್ು.

172 ಮನದ ಕೊಳೆ
----------------------
ಮನೆಯ ಕಸವ
ಬಳಿಯಲು ಬೇಕು
ಕಸಬರಿಕೆ,
ಮನದ ಕೊಳೆಯ ತೊಳೆಯಲು
ಹೊರಳಬೇಕು
ಆಧ್ಯಾತ್ಮದ ಕಡೆಗೆ.

173 ಸಾಮಿಪ್ಯ
--------------
ಪ್ರತಿ ಇರುಳಲಿ
ಇನಿಯನ
ಇರುವಿಕೆಯಿದ್ದಲ್ಲಿ
ನಾರಿಯ ನರಳುವಿಕೆಯೆಲ್ಲಿ?

174 ನಗಾರಿ
----------------
ನನ್ನೆದೆಯೊಳು
ನಗಾರಿ ಭಾರಿಸುತ್ತಿದೆ
ನಾರೀ,
ನಿನ್ನ ಸೆರಗು ಬಾರಿ ಬಾರಿ
ಬೀಳುವಾಗ ಜಾರಿ.

175 ಊಹೆ
----------------
ಹೂವಿನಂತ ಮನಸ್ಸು
ಹಾವಿನಂತ ಮನಸ್ಸು
ಮನುಷ್ಯನೊಬ್ಬನಲ್ಲಿರುವುದು.

176 ಅಹಂಭಾವ
------------------
ಅಹಂಕಾರವೆಂಬ
ಶೂಲ,
ಇರಿಯುತ್ತಿದೆ
ಸ್ಥೂಲ ವರ್ಚಸ್ಸಿನ
ಶೀಲ.

177 ಕನಸು
----------------
ಒಂದೊಂದು ವಯಸ್ಸಿನಲ್ಲಿಯೂ
ಒಂದೊಂದು ಮನಸು,
ಒಂದೊಂದು ಮನಸ್ಸಿನಲ್ಲಿಯೂ
ವಿಭಿನ್ನ ಕನಸು,
ಕೆಲವು ಗೆಣಸು
ಕೆಲವು ಮೆಣಸು
ಕೆಲವು ಹೂಕೋಸು.

178 ನಿಜ
-------------
ಮನಸಿರದ
ಮನಸು
ಖಾರದಂತೆ
ಮೆಣಸು.

179 ವೃದ್ಧ
----------------
ಹರೆಯದ
ಪುಟಗಳನ್ನು
ಹರಿದು ಹಾಕಿದವ.

180 ಅಸಹ್ಯ
----------------
ಸಂತೆಗೆ ಹೋಗಲು
ಬಲು ಬೇಜಾರು,
ಕಾರಣ
ಗಬ್ಬು ನಾರುತಿದೆ
ಬಾಜಾರು.

181 ಹಣ್ಣು
--------------------
ಕಳಿತರೆ ರುಚಿ
ಅದೇ
ಕೊಳೆತರೆ ಛೀ.

182 ಹೆಂಗಸರು
---------------------
ಮೀಸೆ
ಬೇಕಾದರೂ ಬಿಟ್ಟಾರು
ಆಸೆಯನ್ನೆಂದೂ ಬಿಡರು.

183 ಅಡಿಕೆ
---------------
ಅಷ್ಟಷ್ಟು ದಿನಕ್ಕೆ
ತಿರುವಿ ಒಣಗಿಸಲು
ಮಗುಚದಿದ್ದರೆ ಮಗ್ಗಲು,
ಹೆಚ್ಚು ಹೊತ್ತು ಬೇಡ
ಮುಗ್ಗಲು.

184 ಕಾವ್ಯ ಜನನ
------------------
ಕಾವ್ಯೋದ್ಭವಕ್ಕೆ
ಪ್ರೇರಣೆಯೇ ಮೂಲ
ಕಲ್ಪನೆಯೇ ಬಾಲ.

185 ಕಾಯುವಿಕೆ
--------------------
ಕಾಯುವುದರಲ್ಲಿ
ನಿನ್ನನ್ನೇ ಮೀರಿಸಿ ಬಿಟ್ಟೇನು
ಶಬರೀ,
ಏಕೆಂದರೆ ನನ್ನ ನಲ್ಲೆ
ನಿನ್ನಂತೆ ವೃದ್ಧೆಯಲ್ಲ
ಸುಂದರಿ ಸುರಸುಂದರಿ.

186 ನಮ್ಮ ದೇಶ
-----------------
ವಿಭಿನ್ನ, ವಿಚಿತ್ರ, ವಿಶಿಷ್ಠ
ವಿನೂತನವಾದದ್ದು ನಮ್ ದೇಶ,
ಇಲ್ಲಿ ಬಡವ
ಬಡವನಾಗ್ತಾ ಹೋಗುತ್ತಾನ,ೆ
ಶ್ರೀಮಂತ
ಸಿರಿವಂತನಾಗ್ತಾ ಹೋಗುತ್ತಾನೆ,
ದುಡಿಯುವವ
ದುಡಿಯುತ್ತಲೇ ಇರುತ್ತಾನೆ,
ದುಡಿಯದವನೂ
ಆರಾಮಾಗಿರುತ್ತಾನೆ.

187 ವಿಭಿನ್ನತೆ
------------------
ಹಿಂದಿನವರಿಗೆ
ಮಕ್ಕಳೇ ಆಸ್ತಿ
ಅದನ್ನೇ ಜಾಸ್ತಿ ಮಾಡುತ್ತಿದ್ದರು,
ಈಗಿನವರಿಗೆ
ಆಸ್ತಿಯೇ ಮಕ್ಕಳು,
ಮಕ್ಕಳಿದ್ದರೂ ಇರದಿರೂ
ಮಾಡಿದ ಆಸ್ತಿಗೆ ಲೆಖ್ಖವಿಲ್ಲ.

188 ಗುದ್ದೆ
---------------
ಭತ್ತದ ಗದ್ದೆಗಳು
ರೈತರ ಪಾಲಿಗೆ
ಕಟ್ಟಿಕೊಂಡ
'ಗುದ್ದೆ'ಗಳು.

189 ಮಹಿಳೆ
----------------
ಇಳೆಗೆ
ಮಳೆ, ಬೆಳೆ, ಹೊಳೆಯೇ
ಕಳೆ,
ಮನೆಗೆ
ಮಳೆ, ಬೆಳೆ ಕಳೆ ಎಲ್ಲಾ
ಅವಳೇ.

190 ಗ್ಯಾರೆಂಟಿ
-----------------
ಕಷ್ಟದಲೂ, ನಷ್ಟದಲೂ
ಇಷ್ಟ ಹೆಜ್ಜೇ ಇಟ್ಟರೆ
ಸ್ಪಷ್ಟ ಜಯಮಾಲೆ
ನಮ್ಮ ಕೊರಳಿಗೆ.

191 ವಾಸ್ತವ
-----------------
ಕಣ್ಣು ಹಣ್ಣಾಗುತ್ತದೆ
ಮನದೊಳಗಿನ ಕಲ್ಮಶ
ಕೊಳೆತು ಹುಣ್ಣಾಗುತ್ತದೆ
ಬಣ್ಣ ಬಯಲಾಗುತ್ತದೆ
ಉರಿ ತಣ್ಣಗಾಗುತ್ತದೆ
ಮಣ್ಣೊಳಗೆ ಮಣ್ಣಾಗುತ್ತದೆ
ಮಧಾಂದನ ಮಹತ್ವಾಕಾಂಕ್ಷೆ.

192 ಆಳ
----------------
ಅವಳ
ಹೃದಯಾಂತರಾಳದಲ್ಲಿ
ನುಗ್ಗಿದಾಗಲೆಲ್ಲ
ಭಾವನೆಗಳೇ ಬಹಳ.

193 ರಸಿಕ
--------------
ಭಾವನೆಗಳು
ಬತ್ತಿ ಹೋದ
ಬರಡೆದೆಯ ಭೂಮಿಯಲ್ಲಿಯೂ
ಆಸೆಗಳ ಬೀಜ ಬಿತ್ತುವವ.

194 ವ್ಯಯ-ಸಾಯ
-----------------------
ವ್ಯವಸಾಯ
ಮಣ್ಣಿನ ಮಕ್ಕಳಿಗೆ
ವ್ಯಯ ಸಾಯವಾಗಿ
ಪರಿಣಮಿಸಿದೆ.

195 ಬೊಕ್ಕಸ
-------------------
ಧನ, ಕನಕ
ವಜ್ರ ವೈಢೂಯರ್ಾದೆಗಳಿಂದ
ತುಂಬಿಕೊಂಡಿದ್ದರೆ
ಮಾತ್ರವದು ಬೊಕ್ಕಸ,
ಬರಿದಾಗಿದ್ದರೆ ಅಲ್ಲಿರುವುದು
ಬರೀ ಕಸ.

196 ಶ್!!!
---------------
ಕಾಲು ಹಾದಿಯಲ್ಲಿ
ಒಮ್ಮೆಲೆ ಎದೆ ಧಸ್!
ಬಹುಷಃ
ಹಾದಿ ಮಧ್ಯೆ
ಹಾವೊಂದು ಭುಸ್!!!

197 ವ್ಯತ್ಯಾಸ
-----------------
ಮಂತ್ರ ಶಾಸ್ತ್ರ ಕಲಿತ ಆಕೆ
ವೈಧಿಕಳಾಗಿ
ದೇವರ ಪೂಜೆ ಮಾಡಿದರೆ
ಪೂಜಾರಿಣಿ,
ಹೀಗಿದ್ದೂ
ಅನೈತಿಕ ಚಟುವಟಿಕೆಗಳಲ್ಲಿ
ಭಾಗಿಯಾದರೆ
ಫೂ...........ಜಾರಿಣಿ.

198 ಮಂತ್ರಿಗಿರಿ ಆಕಾಂಕ್ಷಿ
----------------------
ಕೋಠಿ ರೂಪಾಯಿ
ನಿಮ್ಮ ಖಚರ್ಿಗಿರಲಿ
ಖುಚರ್ಿ ಮಾತ್ರ
ನನಗಿರಲಿ.

199 ಅಸತ್ಯ
------------------
ಹಳ್ಳಿಗರಿಗೆ
ಅಕ್ಷರ ಪಥ್ಯ
ಇದು
ಅಕ್ಷರಷಃ ಅಸತ್ಯ.

200 ನ(ಗ)ರ
--------------
ದಿನೇ ದಿನೇ ಸಮರೋಪಾದಿಯಲ್ಲಿ
ಬೆಳೆಯುತ್ತಿರಬಹುದು
ನಗರ,
ಒಂದು ನಗರ ಬೆಳೆಯಲು
ಸಾವಿರಾರು ಹಳ್ಳಿಗಳೇ
ಮೂಲ ನರ.

201 ಪೋಸ್ಟ್
-------------------
ಲೇಟಾಗಿ ಬಂದರೆ ಪೋಸ್ಟು
ಯಾರಿಗೂ ಬೇಡವಾದ ವೇಸ್ಟು
ಲಘು ಬಂದರೆ ಮಾತ್ರ ಲೇಟೆಸ್ಟು

202 ಕೂಲಿಕಾರರು
---------------------
ಮಕ್ಕಳ
ಭವಿಷ್ಯ ರೂಪಿಸಿದ
ಕೂಲಿಕಾರರು
ಭವಿಷ್ಯದ ಕಲಾಕಾರರು.

203 ಮೀಸೆ
----------------
ನವ ಯುವಕನ ಮನದಲ್ಲಿ
ಒಸರಿತ್ತು ನಿರಾಸೆ,
ಇದ ಕಂಡು
ಕುದಿಯತೊಡಗಿತ್ತು,
ಆತನ ದಷ್ಟಪುಷ್ಠ
ಮೀಸೆ.

204 ರಾಸಾಯನಿಕ ಬಳಕೆ
-------------------------
ರಾಸಾಯನಿಕ ಗೊಬ್ಬರ,ಔಷಧಿ ಬಳಸಿ
ಅಧಿಕ ಫಸಲು ತರುವುದು
ಕ್ಷಣಿಕ ಹಿತ,
ಪರಿಣಾಮ
ಮಣ್ಣಿನಲ್ಲಿ ಅಡಗಿರುವ
ಕೋಟ್ಯಾನುಕೋಟಿ
ಸೂಕ್ಷ್ಮ ಜೀವಿಗಳು ಹತ.

205 ಜ್ಞಾನ ತೃಷೆ
-----------------
ಜ್ಞಾನಾಂಮೃತವ
ತುಂಬಿಸಿಕೊಳ್ಳಿ
ಪುಸ್ತಕದಿಂದ
ಮಸ್ತಕದ ತುಂಬ.

206 ಹೊಸಗಾದೆ
----------------
ವಿದೇಶದಲ್ಲಿ
ಆಳಾಗಿ ದುಡಿ,
ಸ್ವದೇಶದಲ್ಲಿ
ಅರಸನಾಗಿ ಉಣ್ಣು.

207 ಬೆವರು
-------------------
ಮಳೆಗಾಲದಲ್ಲಿ
ಮಳೆ ಸುರಿಯೆ
ಮೈಮೇಲೆಲ್ಲ ನೀರು,
ಬೇಸಿಗೆಯಲ್ಲಿನ
ರಣ ಬಿಸಿಲಿನ ಝಳ ಬೀಳೆ
ಮೈತುಂಬಾ ಬೆವರು.

208 ಬುತ್ತಿ
-----------------
ಬರಿದಾಗಿದ್ದರೆ
ನೆತ್ತಿ,
ಗ್ರಂಥಾಲಯಕ್ಕೆ ಹೋಗಿ
ತುಂಬಿಸಿಕೊಳ್ಳಿ
ಬುತ್ತಿ.

209 ಯಾಚನೆ
---------------
ನಲ್ಲ
ನಾ ಬೇಡನಲ್ಲ,
ಆದರೂ ಯಾಚಿಸುವೆ
ನಿನ್ನಲ್ಲಿ ಮಾತ್ರ
ಪ್ರೇಮ ಭಿಕ್ಷೆ,
ನೀಡಿದರೆ ನಮ್ಮ
ಪ್ರೀತಿಗೆೆ ಶ್ರೀರಕ್ಷೆ,
ಸಂಸಾರಕೆ ನಕ್ಷೆ.

210 ಆಸೆಗಳ ಆಳ
------------------
ಬತ್ತಿದ ಭಾವನೆಗಳು
ಹೊರ ಚಿಮ್ಮಲು
ಆಸೆಗಳೇ ಬಂಡವಾಳ.

211 ದಂತಕ್ಷಯ
-------------------
ಮಿಠಾಯಿ ಅಂಗಡಿ
ಎದುರಿಗೆ ಸಾಗುವಾಗ
ಕಂದನ ಬಾಯಲ್ಲಿ
ಸುರಿವುದು ಜೊಲ್ಲು,
ಅಪ್ಪನ ಮೊಗ ಸಿಂಡರಿಸಿತ್ತು
ಕಾರಣ
ಕಂದನ ಬಾಯ್ತುಂಬಾ
ಹುಳುಕು ಬಲ್ಲು.

212 ವಿಪಯರ್ಾಸ
----------------------
ಹಟ ಮಾಡಿಕೊಂಡು
ನಾಪತ್ತೆಯಾದ ವಿಟ
ಕೊನೆಗೆ ಪತ್ತೆಯಾದ ಜಾಗ
ಮಠ.

213 ಪರಿಸ್ಥಿತಿ
----------------
ಬರೆಯಲು ಸ್ಪೂತರ್ಿ ಬಂದಾಗ
ಹಾಳೆಯಿದ್ದೂ ಪೆನ್ನಿರದಿದ್ದರೆ.........
ಯುದ್ಧಕ್ಕೆ ಹೊರಟ
ಯೋಧನ ಕೈಲಿ ಆಯುಧವಿರದಾಗ
ಉಂಟಾಗುವ ಪರಿಸ್ಥಿತಿಯೇ
ಕವಿಯದೂ ಕೂಡಾ .

214 ವಿದ್ಯೆ
---------------
ಅಕ್ಷರಾಭ್ಯಾಸ ಹೊಂದಿದರೆ
ಖಂಡಿತಾ ಮಾಯ
ಅಜ್ಞಾನದ ಗಾಯ.

215 ಅಸಡ್ಡೆಯಾದ ಕೃಷಿ
-------------------------
ಹಳ್ಳಿ ಹುಡುಗರು
ಮೊದಲಿನಂತಿಲ್ಲ
ತುಂಬಾ ಸುಧಾರಿಸಿದ್ದಾರೆ,
ಜಾಣರಾಗಿದ್ದಾರೆ
ಪೇಟೆಗೆ ಹೋಗ್ತಾರೆ
ಆಚಾರಿ, ಗಾವಡಿ,ಹೋಟೆಲ್,ಫ್ಯಾಕ್ಟರಿ,
ಈ ಎಲ್ಲಾ ಕೆಲಸಗಳನ್ನೂ ಮಾಡ್ತಾರೆ
ಕೃಷಿ ಕಾರ್ಯ ಒಂದನ್ನು ಬಿಟ್ಟು.

216 ಅಮರ
----------------
ನೀವು ಸತ್ತ ಮೇಲೂ
ಆಗಬೇಕೆ ಅಮರ,
ಹಾಗಾದರೆ
ನೆಟ್ಟು ಬೆಳೆಸಿ
ಒಂದು ಮರ.

217 ಕೀ(ರೀ)ಟ
-----------------
ರಾಜನಾದ ಬಳಿಕ
ಶಿರ ಅಲಂಕರಿಸಿದ್ದು
ರಾಜ ಕಿರೀಟ,
ಅದೇ ರಾಜನ
ತಲೆಗೆ ಹೊಕ್ಕ ಹೇನು
ರಾಜ ಕೀಟ.

218 ಕಸ ರಸ
-----------------
ಕಸದಿಂದ ರಸ ತೆಗೆವವ
ಆದಾನು ಅರಸ,
ಅದೇ ಕಸ
ಅಕ್ಕ ಪಕ್ಕದ ಮನೆ ಜನರಿಗೆ
ತಂದಿಟ್ಟಿತ್ತು ವಿರಸ.

219 ಅಳುಕು
----------------
ಬೆದರಿಸದಿದ್ದರೂ
ಬೆವರುವವನು
ತಪ್ಪೆಸಗಿದವನು.

220 ಧನದಾಹ
-----------------
ಹೆತ್ತು ಹೊತ್ತು ಸಾಕಿ ಸಲಹಿದ
ಮುದ್ದು ಮುಖದ ಕಂದನ
ಮಾರುವುದೇಕೆ ಗೊತ್ತೇ?
'ಕಂ' ಧನ.

221 ವಿಚಿತ್ರ
----------------
ಹೆಣ್ಣು ಜಾರಿದರೆ
ಜಾರಿಣಿಯೆಂಬ ಚಟ್ಟ,
ಅದೇ ಗಂಡು ಜಾರಿದರೆ
ರಸಿಕ ಮಹಾಶಯನೆಂಬ ಪಟ್ಟ.

222 ಹೆತ್ತೊಡಲು
-------------------
ಹೆತ್ತ ಮಗುವಿಗೆ
ಒಂದು ವೇಳೆ
ಜನಕನಿರದಿರೂ,
ಧನ ಕನಕವಿರದಿರೂ,
ಮಾತೃವಾತ್ಸಲ್ಯವೇ ಜನಕ
ಅದುವೇ ಆಮ್ಲಜನಕ.

223 ಮುಖವಾಡ
----------------
ನೋವು, ದುಃಖ, ಕಷ್ಟನಷ್ಟಗಳು
ಮನದಲ್ಲಿ ಮನೆ ಮಾಡಿದರೂ
ಧರಿಸದಿರು ಮನುಜಾ
ನಗು ಮುಖದ ಮುಖವಾಡ,
ಅದು ಮುಂದೆ ಮತ್ತೂ
ಸಂಕಷ್ಟದ ಆಖಾಢ.

224 ಅನಾವೃಷ್ಠಿ
----------------
ಮಳೆಗಾಲದ ಅವಧಿ
ಮಳೆ ಬರದಿರೆ ಬೇಗುಧಿ,
ಮಳೆ ವಿಪರೀತವಾದರೆ
ಹೊಲ ನೆಲವೆಲ್ಲಾ ಶರಧಿ.

225 ಕಣ್ಣೀರು
---------------
ಹೊಸದಾಗಿ ನಿಮರ್ಿಸಿದ
ಆ ಆಣೆಕಟ್ಟು ಭತರ್ಿಯಾಗಿದ್ದು,
ಹಿನ್ನೀರು ತುಂಬಿದ್ದು
ಮಳೆ ನೀರಿನಿಂದ ಮಾತ್ರವಲ್ಲ
ಮನೆ, ಮಠ, ಆಸ್ತಿಪಾಸ್ತಿ,
ತೊರೆದ ತ್ಯಾಗಿಗಳ
ಕಣ್ಣೀರೂ ಇದೆ.

226 ಹಳ್ಳೀ ಹವಾ
-----------------
ಶಹರದ ಗಾಳಿ ಸೇವಿಪಗೆ
ರೋಗ ಬರುತ್ತದೆ,
ಹಳ್ಳಿಯ ಹವಾ ಸೇವಿಪಗೆ
ಜೀವ ಬರುತ್ತದೆ.

227 ಮಳೆ
-------------
ಬಂದರೆ ವರ
ಬರದಿರೆ ಬರ.

228 ಕವಿಯೊಳಗೆ
-------------------
ಕವಿತೆ ಹುಟ್ಟುವುದು
ಸರಳ,
ಓದುಗನ ಮನ ಮುಟ್ಟುವುದು
ಮಾತ್ರ ವಿರಳ.

229 ಸಾರಾಯಿ ಸಹವಾಸ
------------------------
ಹೆಂಡ ಕುಡಿದರೆ
ಬರಬಹುದು ಮತ್ತು,
ಹೋಗುವುದು ಕಿಮ್ಮತ್ತು.

230 ಆಶಾವಾದಿ
-----------------
ಎಂದೂ ಬತ್ತಿಲ್ಲ
ಮುಂದೂ ಬತ್ತುವುದಿಲ್ಲ
ಏಕೆಂದರೆ ನಾ ಆಶಾವಾದಿ,
ನಿರಾಸೆಯ ಬೀಜ ಬಿತ್ತಿಲ್ಲ
ಕರಗಿಲ್ಲ ಆಸೆಯ ಬುತ್ತಿ
ಕನಸಿನ ಬೀಜದಲಿ ಜೊಳ್ಳಿಲ್ಲ.

231 ಕುಡಿತ
-----------------
ಪರಲೋಕಕ್ಕೆ ಧಾವಿಸುವೆ
ಸೀದಾ,
ಕುಡಿದರೆ ಸಾರಾಯಿ
ಸದಾ.

232 ಮೂಢನಂಬಿಕೆ?
-------------------
ಹೇರಳವಾಗಿ
ತುಂಬಿ ತುಳುಕಿದ್ದರೂ
ಉಗ್ರಾಣ,
ತಿನ್ನಬಾರದು ಹಿಡಿದುಕೊಂಡಾಗ
ಗ್ರಹಣ.

233 ಹಣ್ಣು
---------------
ಹಕ್ಕಿಗಳಿಗೆ
ಎಂದು ತಪ್ಪದು ಬುತ್ತಿ,
ಹೇಗೆಂದರೆ
ನೆಟ್ಟು ಬೆಳೆಸಿರುವೆ
ತೋಟದ ಸುತ್ತಲೂ 'ಅತ್ತಿ'

234 ನಂಬಿಕೆ
----------------
ಆರದ್ರಾ ಮಳೆ
ಆರದೇ ಹೊಯ್ದರೆ
ಬೆಳೆ ಕಳೆ ಭದ್ರ,
ಆರಿ ಆರಿ ಹೊಯ್ದರೆ
ಆ ಬಾರಿ ಅದ್ರ.

235 ಸನ್ಮಾನ?
----------------
ಸದಾ ಸೇವಿಸಿದರೆ
ಸಾರಾಯಿ,
ಸ್ವಾಗತಿಸುತ್ತದೆ
ಯಮರಾಯನ ಆಸ್ಥಾನದಲ್ಲಿ
ಹಾರ ತುರಾಯಿ.

236 ಚಿಂತೆ
-----------------
ಲವಲವೇಶವೂ
ಚಿಂತೆ ಇರದ ಮನ
ಅರಳುತಿರುವ ಕುಸುಮ,
ಚಿಂತೆ ಆವರಿಸಿದರೆ
ಹೃದಯ ಚಿತೆಯಂತೆ
ಭಸ್ಮ .

237 ಅವ-ಲಕ್ಕಿ
----------------
ನೆರೆ ಸಂತ್ರಸ್ತರ ಪೈಕಿ
ಎಲ್ಲರಿಗಿಂತ ಆತ ಬಹಳ
ಲಕ್ಕಿ,
ಪರಿಹಾರ ವಿತರಣೆಯ ವೇಳೆ
ಬಚ್ಚಿಟ್ಟುಕೊಂಡು ಬಿಟ್ಟಿದ್ದ
ಒಂದು ಮೂಟೆ ಅವಲಕ್ಕಿ.

238 ವೆನಿಲ್ಲಾ
----------------
ಮಾಡಲು ತಿಳಿಯದವ
ಪರಾಗ ಸ್ಪರ್ಶ,
ಅವನು ವೆನಿಲ್ಲಾ ಸಂಕುಲಕ್ಕೆ
ಅಸ್ಪರ್ಶ.

239 ಮಾಡಿದುಣ್ಣೋ.........
---------------------
ಸಸಾರ ಪ್ರಶ್ನೆ ಕೇಳಿರೆಂದು
ಮೇಸ್ಟ್ರಿಗೇ ಹಾಕಿದ್ದ
ದಮಕಿ,
ಆ ಪೋರ
ಪರೀಕ್ಷೆಯಲ್ಲಿ ಹೊಡೆದ
ಡುಮಕಿ.

240 ಪಂಚರ್
------------------
ಮಧ್ಯ ಹಾದಿಯಲ್ಲಿ ನಿಂತರೆ
ಚಲಿಸುತ್ತಿರುವ ಬಸ್
ಬಹುಷಃ ಅಂದಿರಬೇಕು
ಟಾಯರಿನ ಗಾಳಿ ಟುಸ್.

241 ಢಾಂಬಿಕತೆ
--------------------
ನಾಸ್ತಿಕತೆ,ಆಸ್ತಿಕತೆಗಳಿಗೆ
ಎಲ್ಲಿದೆ ವಾಸ್ತವಿಕತೆ?
ಎಲ್ಲಿದೆ ಸಮನ್ವಯತೆ?
ಎಲ್ಲಾ ಬರಿ ಢಾಂಬಿಕತೆ.

242 ವೈಮನಸ್ಯ
------------------
ಮುನಿಸಿಕೊಂಡಾಗ
ಮಡದಿ,
ನಾ ಬಳಲಿ ಬೆಂಡಾಗುವೆ
ವಿರಹದಿ.

243 ರಾಮಬಾಣ
---------------------
ಆತ ಮುನಿಸಿಕೊಂಡಾಗ
ಗರಿಗೆದರುವುದು
ಆಕೆಯ ವೈಯ್ಯಾರ ಬಿನ್ನಾಣ,
ಆತನ ಗಂಟು ಮೊಗವ
ನಗಿಸಲದೇ ರಾಮಬಾಣ.

244 ಸಾಕಣೆ
----------------
ನಾನು ಸಾಕಿದ್ದು
ಎರಡು ಕರುಗಳನ್ನು
ಎರಡು ವರ್ಷ,
ಅವು ಹಸುಗಳಾಗಿ
ಎಂಟು ಜನರನ್ನು
ಎಂಟು ವರ್ಷ
ಸಾಕಿದವು.

245 ವಾಸ್ತವ
----------------
ನಲ್ಲೇ
ನೆಚ್ಚಿಕೊಂಡಿದ್ದರೆ
ನಿನ್ನ ಅಧರ,
ತುಂಬುವುದಿಲ್ಲ
ನಮ್ಮ ಉದರ.

246 ವ್ಯವಧಾನ
----------------
ವ್ಯವಸಾಯಕ್ಕೆ ಬೇಕು
ವ್ಯವಧಾನ,
ಅನುಭವವಿರದಿರೆ
ಆಗುವುದು ಅಧ್ವಾನ.

247 ವ್ಯತ್ಯಾಸ
---------------
ಚುನಾವಣೆಗೆ ಮುನ್ನ
ರಾಜಕಾರಣಿಗಳಿಗೆ
ಮತದಾರನೇ ದೇವರು,
ನಂತರ ಮತದಾರನಿಗೆ
ವಿಜೇತ ಅಭ್ಯಥರ್ಿಯೇ ದೇವರು.

248 ನಿಧಿ
--------------
ಮೌನ, ಮಾನವತೆ
ಮಾನವನಿಗೆ
ಇರಬೇಕಾದ
ಮಹಾ ನಿಧಿ.

249 ಓದುಗರು
----------------
ಪುಸ್ತಕ
ವಿದ್ಯಾವಂತನಿಗೆ
ಅತ್ಯಾಪ್ತ ಸಂಗಾತಿ,
ಓದುಗರಿರದಿರೆ
ಪುಸ್ತಕದ ಸಂತತಿಗೆ
ಒದಗುವುದು ಅವನತಿ.

250 ಯಜಮಾನ
-----------------
ಮನೆ ಮಂದಿಯ
ಕಷ್ಟ ನಷ್ಟ
ನೋವು ನಲಿವುಗಳಲ್ಲಿ
ಪಾಲುದಾರಿಕೆಯ ಬಾದ್ಯತೆ
ವಹಿಸಿಕೊಳ್ಳುವವನಿಗಿದೆ
ಸಂಸಾರದ ಸೂತ್ರಧಾರನಾಗುವ
ಅರ್ಹತೆ.

251 ಚಹರೆ
-----------------
ಅವಳ ಮೊಗ
ತುಸು ಕಪ್ಪು
ಹಾಗಾಗಿ ಮಾಡಿಕೊಳ್ಳುವಳು
ಮೇಕಪ್ಪು.

252 ಕನ್ನ
---------------------
ರನ್ನ, ಚಿನ್ನ ಎಂಬ
ಮುದ್ದಿನಿಂದ ಇಟ್ಟ ಹೆಸರೇ
ಮುಳುವಾಯಿತಲ್ಲ!
ಮಗಳ ಮಾವನ ಮಗ ಮದನ
ಹಾಕಿ ಬಿಟ್ಟ ಕನ್ನ.

253 ಅಪರಾಧಿ
------------------
ಅಂಜದೆ ಅಳುಕದೆ
ತಿರುಚಿರಿ ಅವನ ಕೈಕಾಲು,
ಕಾನೂನನ್ನೇ ತಿರುಚುವುದಾಗಿತ್ತು
ಅವನ ಅಹವಾಲು.

254 ವಿರಕ್ತಿ
------------------
ಬದುಕಿನ ನೋವು,
ದುಃಖ,ನಷ್ಠಗಳನ್ನು
ಎದುರಿಸಲಾಗದ ಹೇಡಿಗೆ
ನುಣುಚಿಕೊಳ್ಳಲು ಒಂದು ಯುಕ್ತಿ.

255 ಪರಿತಪಿತ
----------------
ಕಸಬರಿಕೆಯಿದ್ದೂ
ಗುಡಿಸಲಾಗಲಿಲ್ಲ,
ಮನದೊಳು ಮನೆಮಾಡಿದ
ಕಲ್ಮಶಗಳ ರಾಶಿಯ.

256 ಕೇಶರಾಶಿ
------------------
ಹೇನು, ಹೈರಣೆ, ಹೊಟ್ಟುಗಳು
ಅಡಗಿದ್ದರೆ ಅದು
ಕ್ರಿಮಿಕೀಟಗಳ ಕೂಟ,
ಜಾಜಿ, ಮಲ್ಲಿಗೆ, ಸಂಪಿಗೆ
ಮುಡಿದಿದ್ದರೆ
ಹೂವಿನ ತೋಟ.

257 ಕವಿಗೆ
----------------
ಅವನು ಆರೋಗ್ಯದಿಂದಿದ್ದರೆ
ಸೌಖ್ಯ,.
ಹೃದಯಾಂತರಾಳದ ಶೆಲೆಯಿಂದ
ಒಸರಿ ಬರಬಹುದು
ಕಲಾತ್ಮಕ ವಾಕ್ಯ.

258 ಕವನ
----------------
ನೋವು ನಲಿವಿಗಳಿಗೆ
ತಾಯಿ ಬೇರು,
ಆದರೆ ಆಲಿಸಲು
ಬಲು ಬೋರು.

259 ಬೆಳವಣಿಗೆ
--------------------
ಕನ್ನಡದ ಅಸ್ಥಿತ್ವ
ಗುರುತಿಸಿದರದೇ
ಕನ್ನಡಮ್ಮನ ಸ್ವಾಸ್ಥ್ಯ .

260 ಸಕರ್ಾರಿ ಕಚೇರಿ
--------------------
ಕೇವಲ ಸಿಕ್ಕಾ ಹಾಕೋಕೂ
ತಗೋತಾರಲ್ಲ ಶುಲ್ಕ,
ಆ ಜನರ ಗುಣ
ಬಾಳಾ ಹಲ್ಕಾ.

261 ಕಾವ್ಯ ಜನನ
-----------------
ನಾಡಿನವಕೆ ಹೆದರಿ
ಕಾಡಿನಲ್ಲಿ ಅವಿತೆ,
ಆಗ ಮನದಿ ಮೂಡಿ ಬಂತು
ಒಂದಿಷ್ಟು ಕವಿತೆ.

262 ಪಲಾಯನವಾದಿ
----------------------
ಮಾಡದವ
ಹೊಲ ಮನೆ ದನಕರುಗಳ
ಚಾಕರಿ,
ಮಾಡ ಬಯಸುತ್ತಾನೆ
ಮೈ ಮುರಿದು ದುಡಿಯದ
ಬೆವರ ಹನಿ ಇಳಿಯದ
ನೌಕರಿ.

263 ವ್ಯಾಟ್
-----------------
ಈ ಒಪ್ಪಂದದಿಂದ
ಪ್ರತೀ ವಸ್ತುಗಳ ಮೇಲೂ
ವಿಧಿಸುವರಂತೆ ಕರ,
ಇವರಿಗೆ
ಜನಸಾಮಾನ್ಯರ ಮೇಲೆ
ಒಂದಿನಿತೂ ಇಲ್ಲವೇ
ಕನಿಕರ?

264 ಜಾತ್ಯಾತೀಯತೆ
-----------------------
ವಿವಿಧ ಜಾತಿ ಧರ್ಮಗಳ
ಕೂಡಿಸಿ ಬೆಸೆದರೆ ಕಸಿ,
ಭಾರತದ ಜನತೆಯೆಂದರೆ
ಅದೆಷ್ಟು ಖುಷಿ.

265 ಬೆಡ್ ರೆಸ್ಟ್
----------------
ಶಾಂತಿ ಸಮಾಧಾನ ನೆಮ್ಮದಿ
ನೀಡದ ಶ್ರೀಮಂತಿಕೆ
ಇದ್ದರೆಷ್ಟು ಬಿಟ್ಟರೆಷ್ಟು
ರೋಗ ಬಂದರೆ
ಪ್ರಾಯದಲ್ಲಿಯೇ
ಬ್ರೆಡ್ಡೂ-ರೆಸ್ಟೂ.........

266 ಅಲಂಕಾರ
--------------
ಹದ್ದು ಬಸ್ತಿನಲ್ಲಿ
ಇಟ್ಟುಕೊಂಡರೆ
ಅಹಂಕಾರ,
ಅದೇ
ಮನುಷ್ಯನ ನಿಜವಾದ
ಅಲಂಕಾರ.

267 ಸ್ಪಧರ್ೆಯಲ್ಲಿ
----------------
ಗೆದ್ದವನಿಗೆ
ಹೊಗಳಿಕೆಯೆಂಬ
ಪಟ್ಟ,
ಪಾಪ
ಸೋತವನ ಮುಖ ಮಾತ್ರ
ಸೊಟ್ಟ.

268 ಅಧ್ವಾನ
----------------
ಹಿಂದೂಸ್ತಾನದ
ಅಡ್ವಾಣಿ,
ಪಾಕಿಸ್ತಾನದಲ್ಲಿ
ಅಡ್ಡ-ವಾಣಿಿ .

269 ಹೊಸದು
----------------
ಅಂಗಡಿಯಲ್ಲಿ
ದರ ಹೆಚ್ಚಾದರೂ
ಹೊಸದು,
ಅದೇ ಪುಟ್ಬಾತ್ ನಲ್ಲಿ
ಅರ್ಧ ದರಕ್ಕೆ ಕೊಂಡದ್ದು
ಮಾತ್ರ ಹೊಸದ್ದು.

270 ಸೋಲು ಗೆಲುವು
---------------------
ಸೋತವರಿಗೆ
ಇದ್ದೇ ಇದೆ
ಗೆಲುವಿನಾ ಘಟ್ಟ,
ಗೆಲುವಿನ ಅಮಲೇರಿದವರಿಗೆ
ಕಟ್ಟಿಟ್ಟ ಬಿತ್ತಿ
ಸೋಲೆಂಬ ಚಟ್ಟ.

271 ಅಂಜಿಕೆ
---------------
ಬಣ್ಣಕ್ಕಿದೆ
ಮಾಸುವ ಅಂಜಿಕೆ,
ಬಣ್ಣ ಬಣ್ಣದ ಕನಸಿಗೆ
ಹೊಂಗನಸಿಗೆ
ಯಾವ ಬೆದರಿಕೆ?

272 ಮನಸ್ಸು
------------------
ಕನಸಿಗೂ ಮನಸಿಗೂ
ಅವಿನಾಭಾವ ಸಂಬಂಧ,
ಒಳ್ಳೆಯ ಮನಸಿಗೆ
ಸುಂದರ ಕನಸು
ಒಲ್ಲದ ಮನಸಿಗೆ
ಬೀಳಲಿದೆ
ಕೆಟ್ಟ ಕನಸು.

273 ಕಲಿಗಾಲ
-----------------
ನಂಬಿಪನ
ನಿಂದಿಪನು
ದುಷ್ಟ,
ನಿಂದಿಪನ
ನಂಬುವುದು ಕಷ್ಟ.

274 ಮರಳಿ ಮಣ್ಣಿಗೆ
---------------------
ಅಧಿಕಾರ, ಪ್ರತಿಷ್ಠೆ,
ಧನ ಕನಕಗಳೊಡೆಯನು
ರಾಜವೈಭೋಗ
ಕಂಡರೂ ಕಣ್ಣಿಗೆ,
ಮುಂದೆ
ತೆರೆಯ ಮರೆ ಸರಿದಾಗ
ಎಲ್ಲಾ ನುಣ್ಣಗೆ
ಮರಳಲೇ ಬೇಕು
ಮಣ್ಣಿಗೆ.

275 ನದಿ ಮತ್ತು ಮನಸ್ಸು
-----------------------
ಇವೆರಡೂ ಹರಿಯುತ್ತವೆ,
ಕೆಟ್ಟ ಮನಸ್ಸು
ಇರಿಯುತ್ತದೆ,
ಬರಗಾಲದಿ
ನದಿ ಬಿರಿಯುತ್ತದೆ.

276 ಭೀತಿ
--------------
ಕನಸು ಕಾಣಲು
ಕಾಸಿಲ್ಲ ನಿಜ,
ಒತ್ತಾಸೆಯ ಕನಸುಗಳಿಗ
ಕಲಸು ಮೇಲೋಗರವಾಗುವ
ಭೀತಿ.

277 ಮಧ್ಯವತರ್ಿಗಳು
--------------------
ಬಂದಾಗ
ಹೊಸ ವಸ್ತು
ಮಾರುಕಟ್ಟೆಗೆ,
ಅಲ್ಪ ಸ್ವಲ್ಪ ಮಾತ್ರವೇ
ಉತ್ಪಾದಕರ ತಟ್ಟೆಗೆ
ಅವರ ಹೊಟ್ಟೆ ಬಟ್ಟೆಗೆ,
ಉತ್ಪಾದನೆಯ ಬಹುಪಾಲು ಲಾಭಾಂಶ
ದಲ್ಲಾಳಿಗಳ ಪೆಟ್ಟಿಗೆಗೆ.

278 ನೆಗಡಿಗೆ ಮೂಲ
--------------------
ಎಳೆ ಸೌತೆಕಾಯಿ ಹಶಿ
ಅಂದ್ರೆ ನನಗೆ ಬಹಳ ಖುಷಿ,
ತಿಂದ ಮಾರನೇ ದಿನ
ಮೂಗು ತುಂಬಾ ಆ.....ಕ್ಷಿ.

279 ಕಂಪು
-----------------
ಕುಸುಮ
ಕಾಡಿನಲ್ಲಿ ಅರಳಿದರೂ
ನಾಡಿನಲ್ಲಿ ಅರಳಿದರೂ
ಕುಂದುಂಟಾಗದು
ಸುವಾಸನೆಗೆ.

280 ಫಸಲು
----------------
ಕನಸು ಕಾಣಲು
ಕಂಜೂಸಿತನವೇಕೆ?
ಕವಿಗೂ ಒಂದೇ
ಕಾಮರ್ಿಕನಿಗೂ ಒಂದೇ
ಕನಸು
ನಿದ್ದೆ ಬಲ್ಲವನ
ಭರಪೂರ ಫಸಲು.

281 ದಾಳಿಕೋರರು
-----------------------
ತುಂಬಬೇಕು
ದಾಳಿಕೋರರ ಜೋಳಿಗೆ,
ಅದಿಲ್ಲವಾದರೆ
ಶುರುಮಾಡಿಬಿಡುವರು
ನ್ಯಾಯ-ಅನ್ಯಾಯದ ವಿರುದ್ಧ
ದಾಳಿಗೆ.

282 ಪರಿಣಾಮ
------------------
ತಿಂದರೆ
ವಯಾಗ್ರಾ,
ದೂರವಾದೀತು
ವೈರಾಗ್ಯ.
ಹಾಗೇ ದೂರವಾಗುವುದು
ಆರೋಗ್ಯ.

283 ಪರಿವರ್ತನೆ
-------------------
ಹಿಂದೆ
"ಏ ಬಾರೋ ನಮ್ಮನೆ ಕೆಲಸಕ್ಕೆ"
"ಬಂದೇ ಬಿಟ್ಟೆ ಒಡೆಯಾ"
ಇಂದು
"ಸ್ವಲ್ಪ ಕೆಲಸವಿತ್ತು.ನಾಳೆ ಬಿಡುವಿದೆಯೆ?"
"ನಮ್ಮನೆ ಕೆಲಸ ನೀವು ಮಾಡುವಿರಾ?"

284 ಹುಳುಕು
----------------
ರಾಯರು
ಪಕ್ಕದ ಮನೆಯ
ಶುಭಕಾರ್ಯಕ್ಕೋಸ್ಕರ
ತಮ್ಮನೆಯ
ಅಂಗಳ, ಕೊಠಡಿ,ಬಚ್ಚಲು, ಪಾಯಖಾನೆಗಳನು
ಬಿಟ್ಟು ಕೊಟ್ಟಿದ್ದರು,
ಆದರೆ
ತಮ್ಮ ಮನೆ ಕಾಂಪೌಂಡಿನೊಳಗೆ
ನಾಯಿಯನ್ನು ಮಾತ್ರ ಕಟ್ಟಿ ಹಾಕಲು
ಮರೆತಿದ್ದರು.

285 ರೈತ
-----------------
ದಿನವಿಡೀ
ನೀರು ಕುಡಿದರೂ
ಉಚ್ಚೆ ಹೊಯ್ಯುವುದೇ
ಅಪರೂಪ.

286 ಕೃಷಿಕನ ಜೋಡು
---------------------
ದಾರಿಯಲ್ಲಿ ಸಾಗುವಾಗ
ಕಾಲಿಗೆ
ಕಲ್ಲು ತಾಗುತ್ತದೆಂದು
ರೈತನ ಚಪ್ಪಲಿ
ಹಾಕಿಕೊಂಡೀರಿ ಜೋಕೆ,
ಅವನ ಜೋಡಿಗೆ
ಚುಚ್ಚಿಕೊಂಡಿರಬಹುದು
ಹತ್ತಾರು ಮುಳ್ಳುಗಳು.

287 ರಭಸ
----------------
ಬಲಿತ ಬಾಲೆಗೆ
ರಭಸದ ಬಯಕೆ,
ಛೇಧಿಸಿ ಬಂದೀತು
ಅವಳುಟ್ಟ ಬಿಗಿ ರವಿಕೆ.

288 ಮನುಜನ ಮನಸ್ಸು
-------------------------
ಬೆಳಕು ಹೋಗದ ಕಡೆ
ಗಾಳಿ ನುಸುಳಬಹುದು,
ಗಾಳಿ, ಬೆಳಕು ಸಾಗದ ಕಡೆ
ನೀರು ಒಸರಬಹುದು,
ಈ ಮೂರೂ ಹೋಗದ ಜಾಗಕ್ಕೆ
ಸಾಗುತ್ತದೆ
ಮನುಜನ ಮನಸ್ಸು.

289 ಮೌನ ಮಾತಾಗಲು
-------------------------
ಬಯಕೆಗಳು
ಬಿರಿಯಬೇಕು.
ಆಸೆಗಳು
ಚಿಮ್ಮಬೇಕು,
ಕನಸುಗಳು
ಕರೆಯಬೇಕು
ಮನಸುಗಳು
ಒಂದಾಗಬೇಕು
ಆಗ ಮೌನ ಮುರಿಯುತ್ತದೆ.

290 ರೈತ-ನಕ್ಷತ್ರ
------------------
ಪ್ರಪಂಚಕ್ಕೆ
ನಿಜವಾದ ಸೂರ್ಯ
ರೈತ,
ಜಗತ್ತು ಅವನನ್ನು ನೋಡುತ್ತಿರುವುದು
ನಕ್ಷತ್ರವಾಗಿ
ಮಿಣುಕು ಹುಳುವಾಗಿ.

291 ಪ್ರೇಮಿಗೆ
----------------
ಚಂದಿರನ ಹಂದರದೊಳು
ಮಂದಿರವ ನಾ ಕಾಣೆ
ಎನ್ನ ಹೃದಯ ಮಂದಿರದೊಳು
ರೂಪಾಯಿಗೆ ನೀ ಹದಿನಾರಾಣೆ.

292 ಮರೀಚಿಕೆ
-----------------
ಆಗ ಆ ಬಾಲಿಕೆ
ನನಗೆ ಕಾವ್ಯ ಕನ್ನಿಕೆ
ನಂತರ ಆಕೆ,ನನ್ನಾಕೆಯಾಗಿ
ನನ್ನ ಆಯ್ಕೆ
ಈಗ ನನಗೆ ಕಾವ್ಯ
ಮರೀಚಿಕೆ.

293 ಕವಿತೆ
----------------
ಒಳ್ಳೊಳ್ಳೆ ಹೂಗಳ
ಕೊಯ್ದು ಆಯ್ದು
ಒಂದೊಂದಾಗಿ ಪೋಣಿಸಿ
ಹೂ ಮಾಲೆ ಕಟ್ಟುವಂತೆ
ಕಟ್ಟುವನು ಕವಿ.

294 ಆಸೆ
-----------------
ಅಂದು
ದಿಗಂತದಲ್ಲಿ ಹಾರಾಡುವ ಆಸೆಯಿತ್ತು
ಜೀವಂತವಾಗಿದ್ದಾಗ,
ಇಂದು
ದಿಗಂತದಲ್ಲಿ ಹಾರಾಡುತ್ತಿದ್ದೇನೆ
ದಿವಂಗತನಾಗಿ,
ಆದರೆ ಈಗ
ಭೂಮಿಯ ಮೇಲೆ
ನಡೆದಾಡುವ ಆಸೆಯಾಗಿದೆ
ಭುವಂಗತನಾಗಿ.

295 ಹಣೆ ಬರಹ
---------------------
ಬದಲಾಯಿಸಿದೆ ಮನೆಯ ಮಡದಿಯ
ಬದಲಾಯಿಸಿದೆ ಮನಸ ಕನಸ
ಬದಲಾಯಿಸಿದೆ ಉಡುಗೆ ತೊಡುಗೆ
ಬದಲಾಯಿಸಿದೆ ಭಗವಂತನ
ಆದರೆ ಬದಲಾಯಿಸಲಾಗಲಿಲ್ಲ
ನನಗೆ ನನ್ನ ಹಣೆ ಬರಹವ.

296 ಆಗ-ಈಗ
-------------------
ಅಡಿಕೆಗೆ ಹೋದ ಮಾನ
ಆನೆ ಕೊಟ್ಟರೂ ಬರದು
ಅಡಿಕೆ ರೇಟು ನೋಡಿ
ಕೊಂಡ ಸಾಲ ಈಗ
ತೋಟ ಮಾರಿದರೂ ತೀರದು.

297 ಸಾರ
----------------
ಸಕ್ಕರೆಯ ಸಿಹಿ ಇರುವುದು
ಕಬ್ಬಿನ ರಸದಲ್ಲಿ,
ಸಂಸಾರದ ಸಾರ ಉಳಿವುದು
ಸಮರಸದಲ್ಲಿ.

298 ಅಡಿಕೆ ಜ್ವರ
------------------
ಕೊಂಚ ಏರಿದರೂ
ಅಡಿಕೆ ದರ
ಇಳಿವುದು ಅಡಿಕೆ
ಬೆಳೆಗಾರನಿಗೆ ಬಂದ ಜ್ವರ.

299 ರೈತ
----------------
ಸಾಲದಲ್ಲಿಯೇ ಹುಟ್ಟಿ
ಸಾಲದಲ್ಲಿಯೇ ಬೆಳೆದು
ಸಾಲದಲ್ಲಿಯೇ ಸಾಯುವವನಿಗೆ
ರೈತನೆಂದು ಕರೆಯಬಹುದು.

300 ವೆನಿಲ್ಲಾ
----------------
ಏ ನೀಲಾ! ಏ ನೀಲಾ !
ಎಂದು ಕೂಗದಿರು ನಲ್ಲಾ
ವೆನಿಲಾ! ವೆನಿಲಾ!
ಅಂದುಕೊಂಡು
ಮುತ್ತಿಬಿಟ್ಟಾರು ಎಲ್ಲಾ.

301 ತಿಳಿಯದಿರಲಿ
---------------------
ನಾ ಮೆಚ್ಚಿದ್ದು
ಅವಳ ಕೇಶ ರಾಶಿ ನೋಡಿ ಅಲ್ಲ,
ರೂಪ ರಾಶಿ ನೋಡಿ ಅಲ್ಲ
ರೂಪಾಯಿ ರಾಶಿ ನೋಡಿ.

302 ಕಾಮರ್ೋಡ
--------------------
ಕಾರು ಕಾರುತ್ತ
ಹೋಗುವುದು ಮುಂದೆ
ಕಾರಿದ್ದು ಹಾರುತ್ತ
ಹೋಗುವುದು ಮೇಲೆ
ಅದುವೆ ಕಾರ್ಮೋಡ.

303 ದೇವರ ನಾಮ
---------------------
ದಿ ಪೂತರ್ಿ ದುಡಿಯುವವನ
ಯೋಗ್ಯತೆ ಚೆಂದ
ರೆಂಬೆ ಕೊಂಬೆಗಳ ತುಂಬಾ ಎಲೆಗಳಿರುವ
ಮರ ಚೆಂದ
ಬಾಯಿ ತುಂಬಾ ಭಜಿಸಲು
ದೇವರ ನಾಮ ಅಂದ.

304 ತಿಗಣೆಗಳು
-----------------
ಸಕರ್ಾರಿ ಆಫೀಸುಗಳಿಗೆ ಹೋದರೆ
ಅಲ್ಲಿರುವುದು
ಬರೀ ಕಾಗದ ಪತ್ರಗಳ ಕಡತ
ಬಿಟ್ಟರೆ
ರಕ್ತ (ಲಂಚ) ಹೀರುವ
ತಿಗಣೆಗಳ ಕಡಿತ.

305 ಯೌವನ
------------------
ಮದ ಮೋಹ ಮತ್ಸರ
ದ್ವೇಶಾಸೂಯೆಗಳೆಂಬ
ಕಾಡು ಪ್ರಾಣಿಗಳಿಂದ
ತುಂಬಿರುವ ವನ.

306 ಸಾಕ್ಷಿ
-----------------
ಕೃತಿ ಚೌರ್ಯವೆಸಗಿರುವ
ಕವಿ ನಾನು,
ಹೇಗಂತೀರಾ?
ಯಾರೋ ಬರೆದ
ಅಆ ದಿಂದ ಳಕ್ಷಜ್ಞ ವರೆಗಿನ
ಅಕ್ಷರಗಳನ್ನೇ ನನ್ನ ಕೃತಿಗಳಲ್ಲಿ
ಬಳಸಿಕೊಂಡಿರುವುದೇ ಸಾಕ್ಷಿ.

307 ಆತ್ಮ ಕಥೆ
----------------
ಕಲಾತ್ಮಕತೆ ಹೆಣೆದು
ಕಥೆ ಬರೆಯಬೇಕೆಂದುಕೊಂಡೆ,
ಬರೆದೆ, ನಂತರ ಓದಿದೆ,
ಕಲಾತ್ಮಕತೆಯೇನೋ ಹೊಂದಿತ್ತು
ಆದರದು ಕಥೆಯಾಗಿರದೇ
ನನ್ನಾತ್ಮ ಕಥೆಯಾಗಿಬಿಟ್ಟಿತ್ತು..

308 ಕುಂಚ
----------------
ಬಿಳಿ ಹೊಲದ ತುಂಬೆಲ್ಲಾ
ಇಂಚಿಂಚೂ ಬಿಡದಂತೆ
ಅಂಚಂಚಿಗೂ ತೆರಳಿ
ಕೊಂಚವೂ ಬೆದರದೆ
ಅಡ್ಡಾಡಿತ್ತು.

309 ಕರಾರು
--------------------
ಪ್ರಿಯಕರಾ!
ನನ್ನ ಮದುವೆಯಾದ ಮೇಲೆ
ನೀನು ಬೀರು ಬಾರಿಗೆ ಹೋಗಲು
ನನ್ನದಿಲ್ಲ ತಕರಾರು,
ಆದರೆ
ತಿಂಗಳ ಪೂತರ್ಿ ಸಂಬಳ ಮಾತ್ರ
ನನ್ನ ಕೈಗೆ ಕೊಡಬೇಕೆನ್ನುವುದೇ
ನನ್ನ ಕರಾರು.

310 ಉಳಿಸಿದ ಗಂಟು
-------------------
ನಾನವನ ಜೊತೆ ಓಡಾಡಿದ್ದಕ್ಕೆ
ಗುಟ್ಟು ಉಂಟು,
ಅಂತೆಯೇ ಬೆಳೆಸಿದೆ
ಪ್ರೇಮದಾ ನಂಟು'
ಸ್ವಲ್ಪ ದಿನದಲ್ಲಿ ಬಿತ್ತು
ನನ್ ಕೊರಳಿಗೆ ಮೂರ್ಗಂಟು,
ಅಂತೂ ಇಂತೂ ಉಳಿಸಿದೆ
ನಮ್ಮಪ್ಪನ ವರದಕ್ಷಿಣೆ ಗಂಟು.

311 ಮುತ್ತು
----------------
ಒಡಿಯಾ!
ನಿಮ್ಮ ಅಪ್ಪೋರು ಕೊಟ್ಟಿದ್ದು
ತುತ್ತಿಗಾತು,
ಅಮ್ಮೋರು ನೀಡಿದ್ದು
ಬಟ್ಟೆಗಾತು,
ನೀವು ಕೊಟ್ಟಿದ್ದು(ಮುತ್ತು) ಮಾತ್ರ
ನನ್ ಕುತ್ಗೆಗೇ ಬಂತು.

312 ಪುಸ್ತಕ
------------------
ಸಂತತಿ ಬೆಳೆಯಲು
ಸಂಗಾತಿ ಬೇಕು,
ಗ್ರಂಥಾಲಯ ಬೆಳೆಯಲು
ಪುಸ್ತಕ ಬೇಕು.

313 ಕಚೇರಿ
----------------
ತಟ್ಟಿದ್ದಕ್ಕೆ ಮುಟ್ಟಿದ್ದಕ್ಕೆಲ್ಲಾ
ಫೀಸು,
ಅದೇ ಸಕರ್ಾರಿ
ಆಫೀಸು.

314 ಸಖ್ಯ
-----------------
ರಾಜಕಾರಣಿಗಳಿಗೆ ಅಧಿಕಾರವೇ
ಮುಖ್ಯ,
ಹಾಗಾಗಿ
ಯಾವ ಪಕ್ಷದ ಜೊತೆಗಾದರೂ
ಬೆಳೆಸುತ್ತಾರೆ
ಸಖ್ಯ.

315 ಸಾಹಿತಿಯ ಪೆನ್ನು
-------------------------
ಇರಬಹುದು
ಹತ್ತು ಪೆನ್ನುಗಳು
ಸಾಹಿತಿಗಳಲ್ಲಿ,
ಆದರೆ
ಒಂದೂ ಹತ್ತವು
ಇವುಗಳಲ್ಲಿ.

316 ಹೊಟ್ಟೆ ತುಂಬಿದ ಬಳಿಕ
-----------------------
ಹಸಿದ ಹೊಟ್ಟೆಯಲ್ಲಿ
ಮಾಡುತ್ತಿದ್ದ ಹಾಗೇ ಊಟ
ಅಮೃತದಂತಹ ಸ್ವೀಟ,
ಉಂಡ ಮೇಲೆ ಕಂಠ ಮಟ
ಊಟದ ಮೇಲೆಯೇ ಬಂದಿತ್ತು
ಜಿಗುಪ್ಸೆಯ ನೋಟ.

317 ನುಸಿ ಪೀಡೆ
-----------------
ಓ ನಾರೀ........ಕೇಳ
ನೋಡಿ ಕುಡಿ
ನಾರಿಕೇಳ
ಕೀಟ ಏರೈತಿ ಬಾಳ.

318 ದರ ಏರಿದಾಗ
------------------
ಕಂಡೋರು ಕೇಳಿದೋರು
ಎಲ್ಲಾರೂ ಬೆಳಿತಾರೆ
ವೆನಿಲ್ಲಾ,
ಕದ್ದು ಕೊಂಡೋದರೆ ಮಾತ್ರ
ಏನೂ ಇಲ್ಲಾ.

319 ಪೋಷಣೆ
---------------------
ಇಂಗ್ಲೀಷಿನ
ಬೀಜ ಬಿತ್ತಿ ಹೋದವರು
ಬ್ರಿಟೀಷರು,
ಅದಕೆ ನೀರು ಗೊಬ್ಬರ ಹಾಕಿ
ಪೋಷಿಸಿದವರು
ಭಾರತೀಯರು.

320 ಪುರಸ್ಕಾರ
-----------------
ಸ್ವಾತಂತ್ರ್ಯ ಯೋಧರ
ಚಳುವಳಿ,
ಇಂದಿನ ಪೀಳಿಗೆಗದು
ಬಳುವಳಿ.

321 ಕಳ್ಳಿ (ಮಾನಸ)
---------------------
ಮೊದಲ ನೋಟದಲ್ಲಿ
ಕದ್ದಳೆನ್ನ ಮನಸು,
ಅವಳೇ
ಕೆರೆತೋಟದ ಕೂಸು.

322 ಗುಂದದ ಕುಡಿ
---------------------
ದಟ್ಟ ಕಾನನದೊಳವಿತಿರುವ
ಹೆಣ್ಣೊಂದ
ಅಭಯಾರಣ್ಯ ಗುಂದದಲಿ
ನಾ ಕಂಡೆ,
ಥಳುಕು ಬಳುಕಿನಾ
ಈ ಸುಗಂಧದ ಕುಡಿಯು
ಹಬ್ಬೂತಲಿಹುದು
ಉಂಚಳ್ಳಿಯ ಕಡೆಗೆ.

323 ಸಂಕಟ
--------
ಭಾವನೆಗಳು
ಬಾಧಿಸಿದಾಗ
ನೋವುಗಳು
ನತರ್ಿಸುತ್ತವೆ.
------------------------------------------------------------------------------------------------------ ಕವಿ-ದತ್ತಗುರು ಕಂಠಿ,
ಪೊ-ಉಂಚಳ್ಳಿ
ತಾ-ಸಿರಸಿ, ಜಿ-ಉತ್ತರ ಕನ್ನಡ, 581318. ಮೊ-9483648230.
======================================================================================================
------------------------------------------------------------------------------------------------------ - ಹನಿಗವನ ರಚನೆಕಾರ--ದತ್ತಗುರು ಕಂಠಿ.
ಪೊ- ಉಂಚಳ್ಳಿ.
ತಾ-ಸಿರಸಿ, ಜಿ-ಉತ್ತರ ಕನ್ನಡ, 581318, ಮೊ-9483648230.
======================================================================================================


ಹನಿಹವನಗಳು (ದತ್ತಗುರು ಕಂಠಿ)
-----------------------------------------------------
151 ಚಿರಂಜೀವಿ
-------------------
ಜನನವಿದೆ
ೆಮರಣವಿಲ್ಲ
ಕವಿ ಗೀಚಿದ ಕವಿತೆಗೆ,
ಸಾವಿದೆ ಕವಿಗೆ
ಸಾವಿಲ್ಲ ಕವಿತೆಗೆ.

152 ಬರ
---------------
ಮುಂಗಾರು ಮಳೆಯ ಮೇಲೆ
ಕವಿತೆ ಬರೆಯ ಹೊರಟೆ,
ಸ್ಪೂತರ್ಿಯೇ ಇಲ್ಲಾ
ಕಾರಣ
ಮಳೆಯೇ ಇರಲಿಲ್ಲ.

153 ಎಚ್ಚರಿಕೆ
---------------
ಕಪ್ಪೆ
ನಿರುಪದ್ರವಿಯೆಂದು
ಧೈರ್ಯದಿಂದ ಹೆಜ್ಜೆ ಇಡಬೇಡಿ,
ಮರೆಯಲ್ಲಿ
ಕಪ್ಪೆಯನ್ನು ನುಂಗಲು ಬಂದ
ಹಾವಿರಬಹುದು.

154 ಹೆಣ್ಣಿಗೆ
----------------
ವಾಂತಿ ಬಂದರೆ
ಶಾಂತಿಯಿಲ್ಲ.

155 ಕಾಮರ್ಿಕರು
------------------
ಬೇಸಿಗೆಯಲ್ಲಿ
ಹೆಚ್ಚು ನೀರು ಕುಡಿಯುತ್ತಾರೆ
ಆದರೂ
ಮೂತ್ರ ಬಾಧೆ ಕಡಿಮೆ ಇರುತ್ತದೆ,
ಮಳೆಗಾಲದಲ್ಲಿ
ನೀರು ಕುಡಿಯದಿದ್ದರೂ
ಒಪ್ಪತ್ತಿಗೆ ಹತ್ತಾರು ಬಾರಿ
ಮೂತ್ರಖಾನೆಗೆ ಹೋಗುವರು.

156 ಮುಂಗಾರು ಮಳೆ
------------------------
ರಣ ಬೇಸಿಗೆಯ
'ಬರ'ದ ಬೇಗೆಯಲ್ಲಿ
ಬಸವಿಳಿದ ರೈತರ ಮನಕೆ
ಹೊಂಗನಸ ಬಿತ್ತುವುದು.

157 ಸಾಲುಮರ ಮತ್ತು ರಸ್ತೆ
-------------------------
ರಸ್ತೆ ಅಂಚಿಗೆ
ಗಿಡ ನೆಟ್ಟು ಬೆಳೆಸಿದರೆ
ಮುಂದದು ಮರವಾಗಿ
ದಾರಿ ಹೋಕರಿಗೆ ನೆರಳು ನೀಡುತ್ತದೆ,
ಜೊತೆಗೆ
ಹೂವು ಕಾಯಿ ಹಣ್ಣುಗಳನ್ನೂ ನೀಡಬಹುದು,
ಆದರೆ
ಮರದಿಂದ ಬೀಳುವ
ನೀರಿನ ಹನಿಯಿಂದಾಗಿ
ರಸ್ತೆ ಮಾತ್ರ ನಾಮಾವಶೇಷಗೊಳ್ಳುತ್ತದೆ.

158 ಕವಿತೆ
------------------------
ಸಾಹಿತ್ಯೋಧ್ಯಾನದಲ್ಲಿ
ಬಾಡದ ಹೂವು
ಕವಿ ರಚಿಸಿದ ಕವಿತೆ,
ಅಲ್ಲಿ ಚಿಗುರಿನಿಂತ
ಗಿಡಗಳೇ ಕವಿಗಳು.

159 ನಾಚಿಕೆ
-----------------
ಹೆಣ್ಣಿಗೆ
ಉಸಿರಿರುವವರೆಗೂ
ಉರುಳದ ಪೇಟ.

160 ತದ್ವಿರುದ್ಧ
-----------------
ಅಂದು
ಕೆಲಸದ ವೇಳೆ
ಕೂಲಿಯ ಬೆವರಿಳಿಯುತ್ತಿತ್ತು,
ಇಂದು
ಕೂಲಿ ಕೊಡುವವನದೇ
ಬೆವರಿಳಿಯುತ್ತದೆ.

161 ಬೇ- ಸರ
-----------------
ನನಗ್ಯಾಕೋ
ಅವನ ಮೇಲೆ ಬಲು
ಬೇಸರ,
ನಾ ಮಾಡಿ ಹಾಕಿದ್ದನ್ನು
ಮೂರ್ಹೊತ್ತೂ
ಸುರಿಯುತ್ತಾನೆ
ಸರಪರ,
ಆದರೆ ನಾನು ಕೇಳಿದ್ದ
ಒಂದೇ ಒಂದು
ಚಿನ್ನದ ಸರ
ಕೊಡಿಸಲಿಲ್ಲ
ಅದೇ ಬೇಸರ.

162 ಆಶಾಜೀವಿ
------------------
ಸ್ವಾಥರ್ಿಯ ಮನಸ್ಸು
ಕುದಿಯುವ ಕುಲುಮೆ
ಆಶಾಜೀವಿಯ ಮನಸ್ಸು
ಚಿಮ್ಮುವ ಚಿಲುಮೆ.

163 ಜೋಕೆ
----------------
ಸಿಗರೇಟು ಬೀಡಿ
ಸೇವನೆಯಿಂದ
ಹೊಗೆ ಬರುತ್ತದೆ
ಮಜಾ ಸಿಗುತ್ತದೆ
ಜೊತೆಗೆ
ದಮ್ಮು ಕೆಮ್ಮೂ ಕ್ಯಾನ್ಸರೂ
ಬರುತ್ತದೆ.

164 ಕಿವುಡಿ
-----------------
ನನ್ನ ನಿರರ್ಗಳ
ಪ್ರೇಮ ಸಲ್ಲಾಪ
ನಿರಂತರ ಸಾಗಿದರೂ
ಆಕೆಗೆ ನೀರಸವಿನಿಸಲಿಲ್ಲ
ಅತಿಯಾದ
ಮಧುರ ಮಾತ್ಗಳ ಆಲಿಕೆಯಿಂದ
ಆಕಳಿಸಲಿಲ್ಲ
ಆಕೆ ಕಿವುಡಿ ಎಂಬ ವಿಚಾರ
ಮೊದಲಿಗೇಕೆ ಹೇಳಲಿಲ್ಲ
ಪ್ರೀತಿ
ಬಹುಕಾಲ ಬಾಳಲಿಲ್ಲ.

165 ಬಂಧನ
-----------------
ಮೇಲೆಂದರೆ ಆಕಾಶದಲ್ಲಲ್ಲ
ಕೆಳಗೆಂದರೆ ಪಾತಾಳದಲ್ಲಲ್ಲ
ಮಧ್ಯದ ಭೂಮಿಯ ಮೇಲೂ ಅಲ್ಲ
ಆಕೆಯ ಇರುವಿಕೆ
ಎನ್ನ ಹೃದಯ ಮಂದಿರದ
ಗೂಡಿನ ಚಿಪ್ಪೊಳಗೆ
ಬೆಚ್ಚಗೆ ಬಂಧಿಯಾಗಿದ್ದಾಳೆ.

166 ಧಾರಾವಾಹಿ
------------------
ಗಾಳೀ ಪಟ
ಹಾರಿದ ಹಾಗೇ
ನೂಲು ಜೋಡಿಸುವ
ದಾರದ ಉಂಡೆಯಂತೆ.

167 ಬೀಡಿ ಬಿಡಿ
-----------------
ಗುರುವೆಂದ
ದುವ್ರ್ಯಸನಗಳ ಬಿಡಿ,
ಶಿಷ್ಯ ಎಲ್ಲಾ ಬಿಟ್ಟು
ಬೀಡಿ
ರೂಢಿಸಿಕೊಂಡ.

168 ಆಸೆಗಳು
-------------------
ತಳವಿಲ್ಲದ ಬಾವಿಯಲ್ಲಿ
ತಾವಾಗಿಯೇ ತುಂಬಿ ಕೊಂಡಿವೆ
ಆಳದಲ್ಲಿ ಅವಿತುಕೊಂಡಿವೆ
ಕಣಕಣದಲ್ಲೂ ಬೆರೆತು ಹೋಗಿದೆ
ನರನಾಡಿಗಳಲೂ ಕಲೆತು ಹೋಗಿವೆ.

169 ಕಲಬೆರಿಕೆ
------------------
ವಿಷ ಕುಡಿದರೆ
ನಾವು ಸಾಯೋದಿರಲಿ
ಹೊಟ್ಟೆಯೊಳಗಿನ
ಜಂತೂ ಸಾಯಲಿಕ್ಕಿಲ್ಲ.

170 ಭಾವನೆ
----------------
ಆತ ಅಪರಾಧಿಯಲ್ಲ
ಅಮಾಯಕನೆಂಬುದು
ನನ್ನ ಭಾವನೆ'
ಏಕೆಂದರೆ
ಆತ ನನ್ನ
ಖಾಸಾ 'ಭಾವ'ನೇ

171 ಸ್ಮಾರಕ
----------------
ನಾನು ಬದುಕಿದ್ದಾಗ
ಹೊಲವೆಂದರೆ ಅಚ್ಚುಮೆಚ್ಚು
ಹಾಗಾಗಿ ಈಗ
ಹೊಲದಲ್ಲಿ ನಿಲ್ಲಿಸಿದ್ದಾರೆ
ನನ್ನದೇ ಬೆಚರ್ು.

172 ಮನದ ಕೊಳೆ
----------------------
ಮನೆಯ ಕಸವ
ಬಳಿಯಲು ಬೇಕು
ಕಸಬರಿಕೆ,
ಮನದ ಕೊಳೆಯ ತೊಳೆಯಲು
ಹೊರಳಬೇಕು
ಆಧ್ಯಾತ್ಮದ ಕಡೆಗೆ.

173 ಸಾಮಿಪ್ಯ
--------------
ಪ್ರತಿ ಇರುಳಲಿ
ಇನಿಯನ
ಇರುವಿಕೆಯಿದ್ದಲ್ಲಿ
ನಾರಿಯ ನರಳುವಿಕೆಯೆಲ್ಲಿ?

174 ನಗಾರಿ
----------------
ನನ್ನೆದೆಯೊಳು
ನಗಾರಿ ಭಾರಿಸುತ್ತಿದೆ
ನಾರೀ,
ನಿನ್ನ ಸೆರಗು ಬಾರಿ ಬಾರಿ
ಬೀಳುವಾಗ ಜಾರಿ.

175 ಊಹೆ
----------------
ಹೂವಿನಂತ ಮನಸ್ಸು
ಹಾವಿನಂತ ಮನಸ್ಸು
ಮನುಷ್ಯನೊಬ್ಬನಲ್ಲಿರುವುದು.

176 ಅಹಂಭಾವ
------------------
ಅಹಂಕಾರವೆಂಬ
ಶೂಲ,
ಇರಿಯುತ್ತಿದೆ
ಸ್ಥೂಲ ವರ್ಚಸ್ಸಿನ
ಶೀಲ.

177 ಕನಸು
----------------
ಒಂದೊಂದು ವಯಸ್ಸಿನಲ್ಲಿಯೂ
ಒಂದೊಂದು ಮನಸು,
ಒಂದೊಂದು ಮನಸ್ಸಿನಲ್ಲಿಯೂ
ವಿಭಿನ್ನ ಕನಸು,
ಕೆಲವು ಗೆಣಸು
ಕೆಲವು ಮೆಣಸು
ಕೆಲವು ಹೂಕೋಸು.

178 ನಿಜ
-------------
ಮನಸಿರದ
ಮನಸು
ಖಾರದಂತೆ
ಮೆಣಸು.

179 ವೃದ್ಧ
----------------
ಹರೆಯದ
ಪುಟಗಳನ್ನು
ಹರಿದು ಹಾಕಿದವ.

180 ಅಸಹ್ಯ
----------------
ಸಂತೆಗೆ ಹೋಗಲು
ಬಲು ಬೇಜಾರು,
ಕಾರಣ
ಗಬ್ಬು ನಾರುತಿದೆ
ಬಾಜಾರು.

181 ಹಣ್ಣು
--------------------
ಕಳಿತರೆ ರುಚಿ
ಅದೇ
ಕೊಳೆತರೆ ಛೀ.

182 ಹೆಂಗಸರು
---------------------
ಮೀಸೆ
ಬೇಕಾದರೂ ಬಿಟ್ಟಾರು
ಆಸೆಯನ್ನೆಂದೂ ಬಿಡರು.

183 ಅಡಿಕೆ
---------------
ಅಷ್ಟಷ್ಟು ದಿನಕ್ಕೆ
ತಿರುವಿ ಒಣಗಿಸಲು
ಮಗುಚದಿದ್ದರೆ ಮಗ್ಗಲು,
ಹೆಚ್ಚು ಹೊತ್ತು ಬೇಡ
ಮುಗ್ಗಲು.

184 ಕಾವ್ಯ ಜನನ
------------------
ಕಾವ್ಯೋದ್ಭವಕ್ಕೆ
ಪ್ರೇರಣೆಯೇ ಮೂಲ
ಕಲ್ಪನೆಯೇ ಬಾಲ.

185 ಕಾಯುವಿಕೆ
--------------------
ಕಾಯುವುದರಲ್ಲಿ
ನಿನ್ನನ್ನೇ ಮೀರಿಸಿ ಬಿಟ್ಟೇನು
ಶಬರೀ,
ಏಕೆಂದರೆ ನನ್ನ ನಲ್ಲೆ
ನಿನ್ನಂತೆ ವೃದ್ಧೆಯಲ್ಲ
ಸುಂದರಿ ಸುರಸುಂದರಿ.

186 ನಮ್ಮ ದೇಶ
-----------------
ವಿಭಿನ್ನ, ವಿಚಿತ್ರ, ವಿಶಿಷ್ಠ
ವಿನೂತನವಾದದ್ದು ನಮ್ ದೇಶ,
ಇಲ್ಲಿ ಬಡವ
ಬಡವನಾಗ್ತಾ ಹೋಗುತ್ತಾನ,ೆ
ಶ್ರೀಮಂತ
ಸಿರಿವಂತನಾಗ್ತಾ ಹೋಗುತ್ತಾನೆ,
ದುಡಿಯುವವ
ದುಡಿಯುತ್ತಲೇ ಇರುತ್ತಾನೆ,
ದುಡಿಯದವನೂ
ಆರಾಮಾಗಿರುತ್ತಾನೆ.

187 ವಿಭಿನ್ನತೆ
------------------
ಹಿಂದಿನವರಿಗೆ
ಮಕ್ಕಳೇ ಆಸ್ತಿ
ಅದನ್ನೇ ಜಾಸ್ತಿ ಮಾಡುತ್ತಿದ್ದರು,
ಈಗಿನವರಿಗೆ
ಆಸ್ತಿಯೇ ಮಕ್ಕಳು,
ಮಕ್ಕಳಿದ್ದರೂ ಇರದಿರೂ
ಮಾಡಿದ ಆಸ್ತಿಗೆ ಲೆಖ್ಖವಿಲ್ಲ.

188 ಗುದ್ದೆ
---------------
ಭತ್ತದ ಗದ್ದೆಗಳು
ರೈತರ ಪಾಲಿಗೆ
ಕಟ್ಟಿಕೊಂಡ
'ಗುದ್ದೆ'ಗಳು.

189 ಮಹಿಳೆ
----------------
ಇಳೆಗೆ
ಮಳೆ, ಬೆಳೆ, ಹೊಳೆಯೇ
ಕಳೆ,
ಮನೆಗೆ
ಮಳೆ, ಬೆಳೆ ಕಳೆ ಎಲ್ಲಾ
ಅವಳೇ.

190 ಗ್ಯಾರೆಂಟಿ
-----------------
ಕಷ್ಟದಲೂ, ನಷ್ಟದಲೂ
ಇಷ್ಟ ಹೆಜ್ಜೇ ಇಟ್ಟರೆ
ಸ್ಪಷ್ಟ ಜಯಮಾಲೆ
ನಮ್ಮ ಕೊರಳಿಗೆ.

191 ವಾಸ್ತವ
-----------------
ಕಣ್ಣು ಹಣ್ಣಾಗುತ್ತದೆ
ಮನದೊಳಗಿನ ಕಲ್ಮಶ
ಕೊಳೆತು ಹುಣ್ಣಾಗುತ್ತದೆ
ಬಣ್ಣ ಬಯಲಾಗುತ್ತದೆ
ಉರಿ ತಣ್ಣಗಾಗುತ್ತದೆ
ಮಣ್ಣೊಳಗೆ ಮಣ್ಣಾಗುತ್ತದೆ
ಮಧಾಂದನ ಮಹತ್ವಾಕಾಂಕ್ಷೆ.

192 ಆಳ
----------------
ಅವಳ
ಹೃದಯಾಂತರಾಳದಲ್ಲಿ
ನುಗ್ಗಿದಾಗಲೆಲ್ಲ
ಭಾವನೆಗಳೇ ಬಹಳ.

193 ರಸಿಕ
--------------
ಭಾವನೆಗಳು
ಬತ್ತಿ ಹೋದ
ಬರಡೆದೆಯ ಭೂಮಿಯಲ್ಲಿಯೂ
ಆಸೆಗಳ ಬೀಜ ಬಿತ್ತುವವ.

194 ವ್ಯಯ-ಸಾಯ
-----------------------
ವ್ಯವಸಾಯ
ಮಣ್ಣಿನ ಮಕ್ಕಳಿಗೆ
ವ್ಯಯ ಸಾಯವಾಗಿ
ಪರಿಣಮಿಸಿದೆ.

195 ಬೊಕ್ಕಸ
-------------------
ಧನ, ಕನಕ
ವಜ್ರ ವೈಢೂಯರ್ಾದೆಗಳಿಂದ
ತುಂಬಿಕೊಂಡಿದ್ದರೆ
ಮಾತ್ರವದು ಬೊಕ್ಕಸ,
ಬರಿದಾಗಿದ್ದರೆ ಅಲ್ಲಿರುವುದು
ಬರೀ ಕಸ.

196 ಶ್!!!
---------------
ಕಾಲು ಹಾದಿಯಲ್ಲಿ
ಒಮ್ಮೆಲೆ ಎದೆ ಧಸ್!
ಬಹುಷಃ
ಹಾದಿ ಮಧ್ಯೆ
ಹಾವೊಂದು ಭುಸ್!!!

197 ವ್ಯತ್ಯಾಸ
-----------------
ಮಂತ್ರ ಶಾಸ್ತ್ರ ಕಲಿತ ಆಕೆ
ವೈಧಿಕಳಾಗಿ
ದೇವರ ಪೂಜೆ ಮಾಡಿದರೆ
ಪೂಜಾರಿಣಿ,
ಹೀಗಿದ್ದೂ
ಅನೈತಿಕ ಚಟುವಟಿಕೆಗಳಲ್ಲಿ
ಭಾಗಿಯಾದರೆ
ಫೂ...........ಜಾರಿಣಿ.

198 ಮಂತ್ರಿಗಿರಿ ಆಕಾಂಕ್ಷಿ
----------------------
ಕೋಠಿ ರೂಪಾಯಿ
ನಿಮ್ಮ ಖಚರ್ಿಗಿರಲಿ
ಖುಚರ್ಿ ಮಾತ್ರ
ನನಗಿರಲಿ.

199 ಅಸತ್ಯ
------------------
ಹಳ್ಳಿಗರಿಗೆ
ಅಕ್ಷರ ಪಥ್ಯ
ಇದು
ಅಕ್ಷರಷಃ ಅಸತ್ಯ.

200 ನ(ಗ)ರ
--------------
ದಿನೇ ದಿನೇ ಸಮರೋಪಾದಿಯಲ್ಲಿ
ಬೆಳೆಯುತ್ತಿರಬಹುದು
ನಗರ,
ಒಂದು ನಗರ ಬೆಳೆಯಲು
ಸಾವಿರಾರು ಹಳ್ಳಿಗಳೇ
ಮೂಲ ನರ.

201 ಪೋಸ್ಟ್
-------------------
ಲೇಟಾಗಿ ಬಂದರೆ ಪೋಸ್ಟು
ಯಾರಿಗೂ ಬೇಡವಾದ ವೇಸ್ಟು
ಲಘು ಬಂದರೆ ಮಾತ್ರ ಲೇಟೆಸ್ಟು

202 ಕೂಲಿಕಾರರು
---------------------
ಮಕ್ಕಳ
ಭವಿಷ್ಯ ರೂಪಿಸಿದ
ಕೂಲಿಕಾರರು
ಭವಿಷ್ಯದ ಕಲಾಕಾರರು.

203 ಮೀಸೆ
----------------
ನವ ಯುವಕನ ಮನದಲ್ಲಿ
ಒಸರಿತ್ತು ನಿರಾಸೆ,
ಇದ ಕಂಡು
ಕುದಿಯತೊಡಗಿತ್ತು,
ಆತನ ದಷ್ಟಪುಷ್ಠ
ಮೀಸೆ.

204 ರಾಸಾಯನಿಕ ಬಳಕೆ
-------------------------
ರಾಸಾಯನಿಕ ಗೊಬ್ಬರ,ಔಷಧಿ ಬಳಸಿ
ಅಧಿಕ ಫಸಲು ತರುವುದು
ಕ್ಷಣಿಕ ಹಿತ,
ಪರಿಣಾಮ
ಮಣ್ಣಿನಲ್ಲಿ ಅಡಗಿರುವ
ಕೋಟ್ಯಾನುಕೋಟಿ
ಸೂಕ್ಷ್ಮ ಜೀವಿಗಳು ಹತ.

205 ಜ್ಞಾನ ತೃಷೆ
-----------------
ಜ್ಞಾನಾಂಮೃತವ
ತುಂಬಿಸಿಕೊಳ್ಳಿ
ಪುಸ್ತಕದಿಂದ
ಮಸ್ತಕದ ತುಂಬ.

206 ಹೊಸಗಾದೆ
----------------
ವಿದೇಶದಲ್ಲಿ
ಆಳಾಗಿ ದುಡಿ,
ಸ್ವದೇಶದಲ್ಲಿ
ಅರಸನಾಗಿ ಉಣ್ಣು.

207 ಬೆವರು
-------------------
ಮಳೆಗಾಲದಲ್ಲಿ
ಮಳೆ ಸುರಿಯೆ
ಮೈಮೇಲೆಲ್ಲ ನೀರು,
ಬೇಸಿಗೆಯಲ್ಲಿನ
ರಣ ಬಿಸಿಲಿನ ಝಳ ಬೀಳೆ
ಮೈತುಂಬಾ ಬೆವರು.

208 ಬುತ್ತಿ
-----------------
ಬರಿದಾಗಿದ್ದರೆ
ನೆತ್ತಿ,
ಗ್ರಂಥಾಲಯಕ್ಕೆ ಹೋಗಿ
ತುಂಬಿಸಿಕೊಳ್ಳಿ
ಬುತ್ತಿ.

209 ಯಾಚನೆ
---------------
ನಲ್ಲ
ನಾ ಬೇಡನಲ್ಲ,
ಆದರೂ ಯಾಚಿಸುವೆ
ನಿನ್ನಲ್ಲಿ ಮಾತ್ರ
ಪ್ರೇಮ ಭಿಕ್ಷೆ,
ನೀಡಿದರೆ ನಮ್ಮ
ಪ್ರೀತಿಗೆೆ ಶ್ರೀರಕ್ಷೆ,
ಸಂಸಾರಕೆ ನಕ್ಷೆ.

210 ಆಸೆಗಳ ಆಳ
------------------
ಬತ್ತಿದ ಭಾವನೆಗಳು
ಹೊರ ಚಿಮ್ಮಲು
ಆಸೆಗಳೇ ಬಂಡವಾಳ.

211 ದಂತಕ್ಷಯ
-------------------
ಮಿಠಾಯಿ ಅಂಗಡಿ
ಎದುರಿಗೆ ಸಾಗುವಾಗ
ಕಂದನ ಬಾಯಲ್ಲಿ
ಸುರಿವುದು ಜೊಲ್ಲು,
ಅಪ್ಪನ ಮೊಗ ಸಿಂಡರಿಸಿತ್ತು
ಕಾರಣ
ಕಂದನ ಬಾಯ್ತುಂಬಾ
ಹುಳುಕು ಬಲ್ಲು.

212 ವಿಪಯರ್ಾಸ
----------------------
ಹಟ ಮಾಡಿಕೊಂಡು
ನಾಪತ್ತೆಯಾದ ವಿಟ
ಕೊನೆಗೆ ಪತ್ತೆಯಾದ ಜಾಗ
ಮಠ.

213 ಪರಿಸ್ಥಿತಿ
----------------
ಬರೆಯಲು ಸ್ಪೂತರ್ಿ ಬಂದಾಗ
ಹಾಳೆಯಿದ್ದೂ ಪೆನ್ನಿರದಿದ್ದರೆ.........
ಯುದ್ಧಕ್ಕೆ ಹೊರಟ
ಯೋಧನ ಕೈಲಿ ಆಯುಧವಿರದಾಗ
ಉಂಟಾಗುವ ಪರಿಸ್ಥಿತಿಯೇ
ಕವಿಯದೂ ಕೂಡಾ .

214 ವಿದ್ಯೆ
---------------
ಅಕ್ಷರಾಭ್ಯಾಸ ಹೊಂದಿದರೆ
ಖಂಡಿತಾ ಮಾಯ
ಅಜ್ಞಾನದ ಗಾಯ.

215 ಅಸಡ್ಡೆಯಾದ ಕೃಷಿ
-------------------------
ಹಳ್ಳಿ ಹುಡುಗರು
ಮೊದಲಿನಂತಿಲ್ಲ
ತುಂಬಾ ಸುಧಾರಿಸಿದ್ದಾರೆ,
ಜಾಣರಾಗಿದ್ದಾರೆ
ಪೇಟೆಗೆ ಹೋಗ್ತಾರೆ
ಆಚಾರಿ, ಗಾವಡಿ,ಹೋಟೆಲ್,ಫ್ಯಾಕ್ಟರಿ,
ಈ ಎಲ್ಲಾ ಕೆಲಸಗಳನ್ನೂ ಮಾಡ್ತಾರೆ
ಕೃಷಿ ಕಾರ್ಯ ಒಂದನ್ನು ಬಿಟ್ಟು.

216 ಅಮರ
----------------
ನೀವು ಸತ್ತ ಮೇಲೂ
ಆಗಬೇಕೆ ಅಮರ,
ಹಾಗಾದರೆ
ನೆಟ್ಟು ಬೆಳೆಸಿ
ಒಂದು ಮರ.

217 ಕೀ(ರೀ)ಟ
-----------------
ರಾಜನಾದ ಬಳಿಕ
ಶಿರ ಅಲಂಕರಿಸಿದ್ದು
ರಾಜ ಕಿರೀಟ,
ಅದೇ ರಾಜನ
ತಲೆಗೆ ಹೊಕ್ಕ ಹೇನು
ರಾಜ ಕೀಟ.

218 ಕಸ ರಸ
-----------------
ಕಸದಿಂದ ರಸ ತೆಗೆವವ
ಆದಾನು ಅರಸ,
ಅದೇ ಕಸ
ಅಕ್ಕ ಪಕ್ಕದ ಮನೆ ಜನರಿಗೆ
ತಂದಿಟ್ಟಿತ್ತು ವಿರಸ.

219 ಅಳುಕು
----------------
ಬೆದರಿಸದಿದ್ದರೂ
ಬೆವರುವವನು
ತಪ್ಪೆಸಗಿದವನು.

220 ಧನದಾಹ
-----------------
ಹೆತ್ತು ಹೊತ್ತು ಸಾಕಿ ಸಲಹಿದ
ಮುದ್ದು ಮುಖದ ಕಂದನ
ಮಾರುವುದೇಕೆ ಗೊತ್ತೇ?
'ಕಂ' ಧನ.

221 ವಿಚಿತ್ರ
----------------
ಹೆಣ್ಣು ಜಾರಿದರೆ
ಜಾರಿಣಿಯೆಂಬ ಚಟ್ಟ,
ಅದೇ ಗಂಡು ಜಾರಿದರೆ
ರಸಿಕ ಮಹಾಶಯನೆಂಬ ಪಟ್ಟ.

222 ಹೆತ್ತೊಡಲು
-------------------
ಹೆತ್ತ ಮಗುವಿಗೆ
ಒಂದು ವೇಳೆ
ಜನಕನಿರದಿರೂ,
ಧನ ಕನಕವಿರದಿರೂ,
ಮಾತೃವಾತ್ಸಲ್ಯವೇ ಜನಕ
ಅದುವೇ ಆಮ್ಲಜನಕ.

223 ಮುಖವಾಡ
----------------
ನೋವು, ದುಃಖ, ಕಷ್ಟನಷ್ಟಗಳು
ಮನದಲ್ಲಿ ಮನೆ ಮಾಡಿದರೂ
ಧರಿಸದಿರು ಮನುಜಾ
ನಗು ಮುಖದ ಮುಖವಾಡ,
ಅದು ಮುಂದೆ ಮತ್ತೂ
ಸಂಕಷ್ಟದ ಆಖಾಢ.

224 ಅನಾವೃಷ್ಠಿ
----------------
ಮಳೆಗಾಲದ ಅವಧಿ
ಮಳೆ ಬರದಿರೆ ಬೇಗುಧಿ,
ಮಳೆ ವಿಪರೀತವಾದರೆ
ಹೊಲ ನೆಲವೆಲ್ಲಾ ಶರಧಿ.

225 ಕಣ್ಣೀರು
---------------
ಹೊಸದಾಗಿ ನಿಮರ್ಿಸಿದ
ಆ ಆಣೆಕಟ್ಟು ಭತರ್ಿಯಾಗಿದ್ದು,
ಹಿನ್ನೀರು ತುಂಬಿದ್ದು
ಮಳೆ ನೀರಿನಿಂದ ಮಾತ್ರವಲ್ಲ
ಮನೆ, ಮಠ, ಆಸ್ತಿಪಾಸ್ತಿ,
ತೊರೆದ ತ್ಯಾಗಿಗಳ
ಕಣ್ಣೀರೂ ಇದೆ.

226 ಹಳ್ಳೀ ಹವಾ
-----------------
ಶಹರದ ಗಾಳಿ ಸೇವಿಪಗೆ
ರೋಗ ಬರುತ್ತದೆ,
ಹಳ್ಳಿಯ ಹವಾ ಸೇವಿಪಗೆ
ಜೀವ ಬರುತ್ತದೆ.

227 ಮಳೆ
-------------
ಬಂದರೆ ವರ
ಬರದಿರೆ ಬರ.

228 ಕವಿಯೊಳಗೆ
-------------------
ಕವಿತೆ ಹುಟ್ಟುವುದು
ಸರಳ,
ಓದುಗನ ಮನ ಮುಟ್ಟುವುದು
ಮಾತ್ರ ವಿರಳ.

229 ಸಾರಾಯಿ ಸಹವಾಸ
------------------------
ಹೆಂಡ ಕುಡಿದರೆ
ಬರಬಹುದು ಮತ್ತು,
ಹೋಗುವುದು ಕಿಮ್ಮತ್ತು.

230 ಆಶಾವಾದಿ
-----------------
ಎಂದೂ ಬತ್ತಿಲ್ಲ
ಮುಂದೂ ಬತ್ತುವುದಿಲ್ಲ
ಏಕೆಂದರೆ ನಾ ಆಶಾವಾದಿ,
ನಿರಾಸೆಯ ಬೀಜ ಬಿತ್ತಿಲ್ಲ
ಕರಗಿಲ್ಲ ಆಸೆಯ ಬುತ್ತಿ
ಕನಸಿನ ಬೀಜದಲಿ ಜೊಳ್ಳಿಲ್ಲ.

231 ಕುಡಿತ
-----------------
ಪರಲೋಕಕ್ಕೆ ಧಾವಿಸುವೆ
ಸೀದಾ,
ಕುಡಿದರೆ ಸಾರಾಯಿ
ಸದಾ.

232 ಮೂಢನಂಬಿಕೆ?
-------------------
ಹೇರಳವಾಗಿ
ತುಂಬಿ ತುಳುಕಿದ್ದರೂ
ಉಗ್ರಾಣ,
ತಿನ್ನಬಾರದು ಹಿಡಿದುಕೊಂಡಾಗ
ಗ್ರಹಣ.

233 ಹಣ್ಣು
---------------
ಹಕ್ಕಿಗಳಿಗೆ
ಎಂದು ತಪ್ಪದು ಬುತ್ತಿ,
ಹೇಗೆಂದರೆ
ನೆಟ್ಟು ಬೆಳೆಸಿರುವೆ
ತೋಟದ ಸುತ್ತಲೂ 'ಅತ್ತಿ'

234 ನಂಬಿಕೆ
----------------
ಆರದ್ರಾ ಮಳೆ
ಆರದೇ ಹೊಯ್ದರೆ
ಬೆಳೆ ಕಳೆ ಭದ್ರ,
ಆರಿ ಆರಿ ಹೊಯ್ದರೆ
ಆ ಬಾರಿ ಅದ್ರ.

235 ಸನ್ಮಾನ?
----------------
ಸದಾ ಸೇವಿಸಿದರೆ
ಸಾರಾಯಿ,
ಸ್ವಾಗತಿಸುತ್ತದೆ
ಯಮರಾಯನ ಆಸ್ಥಾನದಲ್ಲಿ
ಹಾರ ತುರಾಯಿ.

236 ಚಿಂತೆ
-----------------
ಲವಲವೇಶವೂ
ಚಿಂತೆ ಇರದ ಮನ
ಅರಳುತಿರುವ ಕುಸುಮ,
ಚಿಂತೆ ಆವರಿಸಿದರೆ
ಹೃದಯ ಚಿತೆಯಂತೆ
ಭಸ್ಮ .

237 ಅವ-ಲಕ್ಕಿ
----------------
ನೆರೆ ಸಂತ್ರಸ್ತರ ಪೈಕಿ
ಎಲ್ಲರಿಗಿಂತ ಆತ ಬಹಳ
ಲಕ್ಕಿ,
ಪರಿಹಾರ ವಿತರಣೆಯ ವೇಳೆ
ಬಚ್ಚಿಟ್ಟುಕೊಂಡು ಬಿಟ್ಟಿದ್ದ
ಒಂದು ಮೂಟೆ ಅವಲಕ್ಕಿ.

238 ವೆನಿಲ್ಲಾ
----------------
ಮಾಡಲು ತಿಳಿಯದವ
ಪರಾಗ ಸ್ಪರ್ಶ,
ಅವನು ವೆನಿಲ್ಲಾ ಸಂಕುಲಕ್ಕೆ
ಅಸ್ಪರ್ಶ.

239 ಮಾಡಿದುಣ್ಣೋ.........
---------------------
ಸಸಾರ ಪ್ರಶ್ನೆ ಕೇಳಿರೆಂದು
ಮೇಸ್ಟ್ರಿಗೇ ಹಾಕಿದ್ದ
ದಮಕಿ,
ಆ ಪೋರ
ಪರೀಕ್ಷೆಯಲ್ಲಿ ಹೊಡೆದ
ಡುಮಕಿ.

240 ಪಂಚರ್
------------------
ಮಧ್ಯ ಹಾದಿಯಲ್ಲಿ ನಿಂತರೆ
ಚಲಿಸುತ್ತಿರುವ ಬಸ್
ಬಹುಷಃ ಅಂದಿರಬೇಕು
ಟಾಯರಿನ ಗಾಳಿ ಟುಸ್.

241 ಢಾಂಬಿಕತೆ
--------------------
ನಾಸ್ತಿಕತೆ,ಆಸ್ತಿಕತೆಗಳಿಗೆ
ಎಲ್ಲಿದೆ ವಾಸ್ತವಿಕತೆ?
ಎಲ್ಲಿದೆ ಸಮನ್ವಯತೆ?
ಎಲ್ಲಾ ಬರಿ ಢಾಂಬಿಕತೆ.

242 ವೈಮನಸ್ಯ
------------------
ಮುನಿಸಿಕೊಂಡಾಗ
ಮಡದಿ,
ನಾ ಬಳಲಿ ಬೆಂಡಾಗುವೆ
ವಿರಹದಿ.

243 ರಾಮಬಾಣ
---------------------
ಆತ ಮುನಿಸಿಕೊಂಡಾಗ
ಗರಿಗೆದರುವುದು
ಆಕೆಯ ವೈಯ್ಯಾರ ಬಿನ್ನಾಣ,
ಆತನ ಗಂಟು ಮೊಗವ
ನಗಿಸಲದೇ ರಾಮಬಾಣ.

244 ಸಾಕಣೆ
----------------
ನಾನು ಸಾಕಿದ್ದು
ಎರಡು ಕರುಗಳನ್ನು
ಎರಡು ವರ್ಷ,
ಅವು ಹಸುಗಳಾಗಿ
ಎಂಟು ಜನರನ್ನು
ಎಂಟು ವರ್ಷ
ಸಾಕಿದವು.

245 ವಾಸ್ತವ
----------------
ನಲ್ಲೇ
ನೆಚ್ಚಿಕೊಂಡಿದ್ದರೆ
ನಿನ್ನ ಅಧರ,
ತುಂಬುವುದಿಲ್ಲ
ನಮ್ಮ ಉದರ.

246 ವ್ಯವಧಾನ
----------------
ವ್ಯವಸಾಯಕ್ಕೆ ಬೇಕು
ವ್ಯವಧಾನ,
ಅನುಭವವಿರದಿರೆ
ಆಗುವುದು ಅಧ್ವಾನ.

247 ವ್ಯತ್ಯಾಸ
---------------
ಚುನಾವಣೆಗೆ ಮುನ್ನ
ರಾಜಕಾರಣಿಗಳಿಗೆ
ಮತದಾರನೇ ದೇವರು,
ನಂತರ ಮತದಾರನಿಗೆ
ವಿಜೇತ ಅಭ್ಯಥರ್ಿಯೇ ದೇವರು.

248 ನಿಧಿ
--------------
ಮೌನ, ಮಾನವತೆ
ಮಾನವನಿಗೆ
ಇರಬೇಕಾದ
ಮಹಾ ನಿಧಿ.

249 ಓದುಗರು
----------------
ಪುಸ್ತಕ
ವಿದ್ಯಾವಂತನಿಗೆ
ಅತ್ಯಾಪ್ತ ಸಂಗಾತಿ,
ಓದುಗರಿರದಿರೆ
ಪುಸ್ತಕದ ಸಂತತಿಗೆ
ಒದಗುವುದು ಅವನತಿ.

250 ಯಜಮಾನ
-----------------
ಮನೆ ಮಂದಿಯ
ಕಷ್ಟ ನಷ್ಟ
ನೋವು ನಲಿವುಗಳಲ್ಲಿ
ಪಾಲುದಾರಿಕೆಯ ಬಾದ್ಯತೆ
ವಹಿಸಿಕೊಳ್ಳುವವನಿಗಿದೆ
ಸಂಸಾರದ ಸೂತ್ರಧಾರನಾಗುವ
ಅರ್ಹತೆ.

251 ಚಹರೆ
-----------------
ಅವಳ ಮೊಗ
ತುಸು ಕಪ್ಪು
ಹಾಗಾಗಿ ಮಾಡಿಕೊಳ್ಳುವಳು
ಮೇಕಪ್ಪು.

252 ಕನ್ನ
---------------------
ರನ್ನ, ಚಿನ್ನ ಎಂಬ
ಮುದ್ದಿನಿಂದ ಇಟ್ಟ ಹೆಸರೇ
ಮುಳುವಾಯಿತಲ್ಲ!
ಮಗಳ ಮಾವನ ಮಗ ಮದನ
ಹಾಕಿ ಬಿಟ್ಟ ಕನ್ನ.

253 ಅಪರಾಧಿ
------------------
ಅಂಜದೆ ಅಳುಕದೆ
ತಿರುಚಿರಿ ಅವನ ಕೈಕಾಲು,
ಕಾನೂನನ್ನೇ ತಿರುಚುವುದಾಗಿತ್ತು
ಅವನ ಅಹವಾಲು.

254 ವಿರಕ್ತಿ
------------------
ಬದುಕಿನ ನೋವು,
ದುಃಖ,ನಷ್ಠಗಳನ್ನು
ಎದುರಿಸಲಾಗದ ಹೇಡಿಗೆ
ನುಣುಚಿಕೊಳ್ಳಲು ಒಂದು ಯುಕ್ತಿ.

255 ಪರಿತಪಿತ
----------------
ಕಸಬರಿಕೆಯಿದ್ದೂ
ಗುಡಿಸಲಾಗಲಿಲ್ಲ,
ಮನದೊಳು ಮನೆಮಾಡಿದ
ಕಲ್ಮಶಗಳ ರಾಶಿಯ.

256 ಕೇಶರಾಶಿ
------------------
ಹೇನು, ಹೈರಣೆ, ಹೊಟ್ಟುಗಳು
ಅಡಗಿದ್ದರೆ ಅದು
ಕ್ರಿಮಿಕೀಟಗಳ ಕೂಟ,
ಜಾಜಿ, ಮಲ್ಲಿಗೆ, ಸಂಪಿಗೆ
ಮುಡಿದಿದ್ದರೆ
ಹೂವಿನ ತೋಟ.

257 ಕವಿಗೆ
----------------
ಅವನು ಆರೋಗ್ಯದಿಂದಿದ್ದರೆ
ಸೌಖ್ಯ,.
ಹೃದಯಾಂತರಾಳದ ಶೆಲೆಯಿಂದ
ಒಸರಿ ಬರಬಹುದು
ಕಲಾತ್ಮಕ ವಾಕ್ಯ.

258 ಕವನ
----------------
ನೋವು ನಲಿವಿಗಳಿಗೆ
ತಾಯಿ ಬೇರು,
ಆದರೆ ಆಲಿಸಲು
ಬಲು ಬೋರು.

259 ಬೆಳವಣಿಗೆ
--------------------
ಕನ್ನಡದ ಅಸ್ಥಿತ್ವ
ಗುರುತಿಸಿದರದೇ
ಕನ್ನಡಮ್ಮನ ಸ್ವಾಸ್ಥ್ಯ .

260 ಸಕರ್ಾರಿ ಕಚೇರಿ
--------------------
ಕೇವಲ ಸಿಕ್ಕಾ ಹಾಕೋಕೂ
ತಗೋತಾರಲ್ಲ ಶುಲ್ಕ,
ಆ ಜನರ ಗುಣ
ಬಾಳಾ ಹಲ್ಕಾ.

261 ಕಾವ್ಯ ಜನನ
-----------------
ನಾಡಿನವಕೆ ಹೆದರಿ
ಕಾಡಿನಲ್ಲಿ ಅವಿತೆ,
ಆಗ ಮನದಿ ಮೂಡಿ ಬಂತು
ಒಂದಿಷ್ಟು ಕವಿತೆ.

262 ಪಲಾಯನವಾದಿ
----------------------
ಮಾಡದವ
ಹೊಲ ಮನೆ ದನಕರುಗಳ
ಚಾಕರಿ,
ಮಾಡ ಬಯಸುತ್ತಾನೆ
ಮೈ ಮುರಿದು ದುಡಿಯದ
ಬೆವರ ಹನಿ ಇಳಿಯದ
ನೌಕರಿ.

263 ವ್ಯಾಟ್
-----------------
ಈ ಒಪ್ಪಂದದಿಂದ
ಪ್ರತೀ ವಸ್ತುಗಳ ಮೇಲೂ
ವಿಧಿಸುವರಂತೆ ಕರ,
ಇವರಿಗೆ
ಜನಸಾಮಾನ್ಯರ ಮೇಲೆ
ಒಂದಿನಿತೂ ಇಲ್ಲವೇ
ಕನಿಕರ?

264 ಜಾತ್ಯಾತೀಯತೆ
-----------------------
ವಿವಿಧ ಜಾತಿ ಧರ್ಮಗಳ
ಕೂಡಿಸಿ ಬೆಸೆದರೆ ಕಸಿ,
ಭಾರತದ ಜನತೆಯೆಂದರೆ
ಅದೆಷ್ಟು ಖುಷಿ.

265 ಬೆಡ್ ರೆಸ್ಟ್
----------------
ಶಾಂತಿ ಸಮಾಧಾನ ನೆಮ್ಮದಿ
ನೀಡದ ಶ್ರೀಮಂತಿಕೆ
ಇದ್ದರೆಷ್ಟು ಬಿಟ್ಟರೆಷ್ಟು
ರೋಗ ಬಂದರೆ
ಪ್ರಾಯದಲ್ಲಿಯೇ
ಬ್ರೆಡ್ಡೂ-ರೆಸ್ಟೂ.........

266 ಅಲಂಕಾರ
--------------
ಹದ್ದು ಬಸ್ತಿನಲ್ಲಿ
ಇಟ್ಟುಕೊಂಡರೆ
ಅಹಂಕಾರ,
ಅದೇ
ಮನುಷ್ಯನ ನಿಜವಾದ
ಅಲಂಕಾರ.

267 ಸ್ಪಧರ್ೆಯಲ್ಲಿ
----------------
ಗೆದ್ದವನಿಗೆ
ಹೊಗಳಿಕೆಯೆಂಬ
ಪಟ್ಟ,
ಪಾಪ
ಸೋತವನ ಮುಖ ಮಾತ್ರ
ಸೊಟ್ಟ.

268 ಅಧ್ವಾನ
----------------
ಹಿಂದೂಸ್ತಾನದ
ಅಡ್ವಾಣಿ,
ಪಾಕಿಸ್ತಾನದಲ್ಲಿ
ಅಡ್ಡ-ವಾಣಿಿ .

269 ಹೊಸದು
----------------
ಅಂಗಡಿಯಲ್ಲಿ
ದರ ಹೆಚ್ಚಾದರೂ
ಹೊಸದು,
ಅದೇ ಪುಟ್ಬಾತ್ ನಲ್ಲಿ
ಅರ್ಧ ದರಕ್ಕೆ ಕೊಂಡದ್ದು
ಮಾತ್ರ ಹೊಸದ್ದು.

270 ಸೋಲು ಗೆಲುವು
---------------------
ಸೋತವರಿಗೆ
ಇದ್ದೇ ಇದೆ
ಗೆಲುವಿನಾ ಘಟ್ಟ,
ಗೆಲುವಿನ ಅಮಲೇರಿದವರಿಗೆ
ಕಟ್ಟಿಟ್ಟ ಬಿತ್ತಿ
ಸೋಲೆಂಬ ಚಟ್ಟ.

271 ಅಂಜಿಕೆ
---------------
ಬಣ್ಣಕ್ಕಿದೆ
ಮಾಸುವ ಅಂಜಿಕೆ,
ಬಣ್ಣ ಬಣ್ಣದ ಕನಸಿಗೆ
ಹೊಂಗನಸಿಗೆ
ಯಾವ ಬೆದರಿಕೆ?

272 ಮನಸ್ಸು
------------------
ಕನಸಿಗೂ ಮನಸಿಗೂ
ಅವಿನಾಭಾವ ಸಂಬಂಧ,
ಒಳ್ಳೆಯ ಮನಸಿಗೆ
ಸುಂದರ ಕನಸು
ಒಲ್ಲದ ಮನಸಿಗೆ
ಬೀಳಲಿದೆ
ಕೆಟ್ಟ ಕನಸು.

273 ಕಲಿಗಾಲ
-----------------
ನಂಬಿಪನ
ನಿಂದಿಪನು
ದುಷ್ಟ,
ನಿಂದಿಪನ
ನಂಬುವುದು ಕಷ್ಟ.

274 ಮರಳಿ ಮಣ್ಣಿಗೆ
---------------------
ಅಧಿಕಾರ, ಪ್ರತಿಷ್ಠೆ,
ಧನ ಕನಕಗಳೊಡೆಯನು
ರಾಜವೈಭೋಗ
ಕಂಡರೂ ಕಣ್ಣಿಗೆ,
ಮುಂದೆ
ತೆರೆಯ ಮರೆ ಸರಿದಾಗ
ಎಲ್ಲಾ ನುಣ್ಣಗೆ
ಮರಳಲೇ ಬೇಕು
ಮಣ್ಣಿಗೆ.

275 ನದಿ ಮತ್ತು ಮನಸ್ಸು
-----------------------
ಇವೆರಡೂ ಹರಿಯುತ್ತವೆ,
ಕೆಟ್ಟ ಮನಸ್ಸು
ಇರಿಯುತ್ತದೆ,
ಬರಗಾಲದಿ
ನದಿ ಬಿರಿಯುತ್ತದೆ.

276 ಭೀತಿ
--------------
ಕನಸು ಕಾಣಲು
ಕಾಸಿಲ್ಲ ನಿಜ,
ಒತ್ತಾಸೆಯ ಕನಸುಗಳಿಗ
ಕಲಸು ಮೇಲೋಗರವಾಗುವ
ಭೀತಿ.

277 ಮಧ್ಯವತರ್ಿಗಳು
--------------------
ಬಂದಾಗ
ಹೊಸ ವಸ್ತು
ಮಾರುಕಟ್ಟೆಗೆ,
ಅಲ್ಪ ಸ್ವಲ್ಪ ಮಾತ್ರವೇ
ಉತ್ಪಾದಕರ ತಟ್ಟೆಗೆ
ಅವರ ಹೊಟ್ಟೆ ಬಟ್ಟೆಗೆ,
ಉತ್ಪಾದನೆಯ ಬಹುಪಾಲು ಲಾಭಾಂಶ
ದಲ್ಲಾಳಿಗಳ ಪೆಟ್ಟಿಗೆಗೆ.

278 ನೆಗಡಿಗೆ ಮೂಲ
--------------------
ಎಳೆ ಸೌತೆಕಾಯಿ ಹಶಿ
ಅಂದ್ರೆ ನನಗೆ ಬಹಳ ಖುಷಿ,
ತಿಂದ ಮಾರನೇ ದಿನ
ಮೂಗು ತುಂಬಾ ಆ.....ಕ್ಷಿ.

279 ಕಂಪು
-----------------
ಕುಸುಮ
ಕಾಡಿನಲ್ಲಿ ಅರಳಿದರೂ
ನಾಡಿನಲ್ಲಿ ಅರಳಿದರೂ
ಕುಂದುಂಟಾಗದು
ಸುವಾಸನೆಗೆ.

280 ಫಸಲು
----------------
ಕನಸು ಕಾಣಲು
ಕಂಜೂಸಿತನವೇಕೆ?
ಕವಿಗೂ ಒಂದೇ
ಕಾಮರ್ಿಕನಿಗೂ ಒಂದೇ
ಕನಸು
ನಿದ್ದೆ ಬಲ್ಲವನ
ಭರಪೂರ ಫಸಲು.

281 ದಾಳಿಕೋರರು
-----------------------
ತುಂಬಬೇಕು
ದಾಳಿಕೋರರ ಜೋಳಿಗೆ,
ಅದಿಲ್ಲವಾದರೆ
ಶುರುಮಾಡಿಬಿಡುವರು
ನ್ಯಾಯ-ಅನ್ಯಾಯದ ವಿರುದ್ಧ
ದಾಳಿಗೆ.

282 ಪರಿಣಾಮ
------------------
ತಿಂದರೆ
ವಯಾಗ್ರಾ,
ದೂರವಾದೀತು
ವೈರಾಗ್ಯ.
ಹಾಗೇ ದೂರವಾಗುವುದು
ಆರೋಗ್ಯ.

283 ಪರಿವರ್ತನೆ
-------------------
ಹಿಂದೆ
"ಏ ಬಾರೋ ನಮ್ಮನೆ ಕೆಲಸಕ್ಕೆ"
"ಬಂದೇ ಬಿಟ್ಟೆ ಒಡೆಯಾ"
ಇಂದು
"ಸ್ವಲ್ಪ ಕೆಲಸವಿತ್ತು.ನಾಳೆ ಬಿಡುವಿದೆಯೆ?"
"ನಮ್ಮನೆ ಕೆಲಸ ನೀವು ಮಾಡುವಿರಾ?"

284 ಹುಳುಕು
----------------
ರಾಯರು
ಪಕ್ಕದ ಮನೆಯ
ಶುಭಕಾರ್ಯಕ್ಕೋಸ್ಕರ
ತಮ್ಮನೆಯ
ಅಂಗಳ, ಕೊಠಡಿ,ಬಚ್ಚಲು, ಪಾಯಖಾನೆಗಳನು
ಬಿಟ್ಟು ಕೊಟ್ಟಿದ್ದರು,
ಆದರೆ
ತಮ್ಮ ಮನೆ ಕಾಂಪೌಂಡಿನೊಳಗೆ
ನಾಯಿಯನ್ನು ಮಾತ್ರ ಕಟ್ಟಿ ಹಾಕಲು
ಮರೆತಿದ್ದರು.

285 ರೈತ
-----------------
ದಿನವಿಡೀ
ನೀರು ಕುಡಿದರೂ
ಉಚ್ಚೆ ಹೊಯ್ಯುವುದೇ
ಅಪರೂಪ.

286 ಕೃಷಿಕನ ಜೋಡು
---------------------
ದಾರಿಯಲ್ಲಿ ಸಾಗುವಾಗ
ಕಾಲಿಗೆ
ಕಲ್ಲು ತಾಗುತ್ತದೆಂದು
ರೈತನ ಚಪ್ಪಲಿ
ಹಾಕಿಕೊಂಡೀರಿ ಜೋಕೆ,
ಅವನ ಜೋಡಿಗೆ
ಚುಚ್ಚಿಕೊಂಡಿರಬಹುದು
ಹತ್ತಾರು ಮುಳ್ಳುಗಳು.

287 ರಭಸ
----------------
ಬಲಿತ ಬಾಲೆಗೆ
ರಭಸದ ಬಯಕೆ,
ಛೇಧಿಸಿ ಬಂದೀತು
ಅವಳುಟ್ಟ ಬಿಗಿ ರವಿಕೆ.

288 ಮನುಜನ ಮನಸ್ಸು
-------------------------
ಬೆಳಕು ಹೋಗದ ಕಡೆ
ಗಾಳಿ ನುಸುಳಬಹುದು,
ಗಾಳಿ, ಬೆಳಕು ಸಾಗದ ಕಡೆ
ನೀರು ಒಸರಬಹುದು,
ಈ ಮೂರೂ ಹೋಗದ ಜಾಗಕ್ಕೆ
ಸಾಗುತ್ತದೆ
ಮನುಜನ ಮನಸ್ಸು.

289 ಮೌನ ಮಾತಾಗಲು
-------------------------
ಬಯಕೆಗಳು
ಬಿರಿಯಬೇಕು.
ಆಸೆಗಳು
ಚಿಮ್ಮಬೇಕು,
ಕನಸುಗಳು
ಕರೆಯಬೇಕು
ಮನಸುಗಳು
ಒಂದಾಗಬೇಕು
ಆಗ ಮೌನ ಮುರಿಯುತ್ತದೆ.

290 ರೈತ-ನಕ್ಷತ್ರ
------------------
ಪ್ರಪಂಚಕ್ಕೆ
ನಿಜವಾದ ಸೂರ್ಯ
ರೈತ,
ಜಗತ್ತು ಅವನನ್ನು ನೋಡುತ್ತಿರುವುದು
ನಕ್ಷತ್ರವಾಗಿ
ಮಿಣುಕು ಹುಳುವಾಗಿ.

291 ಪ್ರೇಮಿಗೆ
----------------
ಚಂದಿರನ ಹಂದರದೊಳು
ಮಂದಿರವ ನಾ ಕಾಣೆ
ಎನ್ನ ಹೃದಯ ಮಂದಿರದೊಳು
ರೂಪಾಯಿಗೆ ನೀ ಹದಿನಾರಾಣೆ.

292 ಮರೀಚಿಕೆ
-----------------
ಆಗ ಆ ಬಾಲಿಕೆ
ನನಗೆ ಕಾವ್ಯ ಕನ್ನಿಕೆ
ನಂತರ ಆಕೆ,ನನ್ನಾಕೆಯಾಗಿ
ನನ್ನ ಆಯ್ಕೆ
ಈಗ ನನಗೆ ಕಾವ್ಯ
ಮರೀಚಿಕೆ.

293 ಕವಿತೆ
----------------
ಒಳ್ಳೊಳ್ಳೆ ಹೂಗಳ
ಕೊಯ್ದು ಆಯ್ದು
ಒಂದೊಂದಾಗಿ ಪೋಣಿಸಿ
ಹೂ ಮಾಲೆ ಕಟ್ಟುವಂತೆ
ಕಟ್ಟುವನು ಕವಿ.

294 ಆಸೆ
-----------------
ಅಂದು
ದಿಗಂತದಲ್ಲಿ ಹಾರಾಡುವ ಆಸೆಯಿತ್ತು
ಜೀವಂತವಾಗಿದ್ದಾಗ,
ಇಂದು
ದಿಗಂತದಲ್ಲಿ ಹಾರಾಡುತ್ತಿದ್ದೇನೆ
ದಿವಂಗತನಾಗಿ,
ಆದರೆ ಈಗ
ಭೂಮಿಯ ಮೇಲೆ
ನಡೆದಾಡುವ ಆಸೆಯಾಗಿದೆ
ಭುವಂಗತನಾಗಿ.

295 ಹಣೆ ಬರಹ
---------------------
ಬದಲಾಯಿಸಿದೆ ಮನೆಯ ಮಡದಿಯ
ಬದಲಾಯಿಸಿದೆ ಮನಸ ಕನಸ
ಬದಲಾಯಿಸಿದೆ ಉಡುಗೆ ತೊಡುಗೆ
ಬದಲಾಯಿಸಿದೆ ಭಗವಂತನ
ಆದರೆ ಬದಲಾಯಿಸಲಾಗಲಿಲ್ಲ
ನನಗೆ ನನ್ನ ಹಣೆ ಬರಹವ.

296 ಆಗ-ಈಗ
-------------------
ಅಡಿಕೆಗೆ ಹೋದ ಮಾನ
ಆನೆ ಕೊಟ್ಟರೂ ಬರದು
ಅಡಿಕೆ ರೇಟು ನೋಡಿ
ಕೊಂಡ ಸಾಲ ಈಗ
ತೋಟ ಮಾರಿದರೂ ತೀರದು.

297 ಸಾರ
----------------
ಸಕ್ಕರೆಯ ಸಿಹಿ ಇರುವುದು
ಕಬ್ಬಿನ ರಸದಲ್ಲಿ,
ಸಂಸಾರದ ಸಾರ ಉಳಿವುದು
ಸಮರಸದಲ್ಲಿ.

298 ಅಡಿಕೆ ಜ್ವರ
------------------
ಕೊಂಚ ಏರಿದರೂ
ಅಡಿಕೆ ದರ
ಇಳಿವುದು ಅಡಿಕೆ
ಬೆಳೆಗಾರನಿಗೆ ಬಂದ ಜ್ವರ.

299 ರೈತ
----------------
ಸಾಲದಲ್ಲಿಯೇ ಹುಟ್ಟಿ
ಸಾಲದಲ್ಲಿಯೇ ಬೆಳೆದು
ಸಾಲದಲ್ಲಿಯೇ ಸಾಯುವವನಿಗೆ
ರೈತನೆಂದು ಕರೆಯಬಹುದು.

300 ವೆನಿಲ್ಲಾ
----------------
ಏ ನೀಲಾ! ಏ ನೀಲಾ !
ಎಂದು ಕೂಗದಿರು ನಲ್ಲಾ
ವೆನಿಲಾ! ವೆನಿಲಾ!
ಅಂದುಕೊಂಡು
ಮುತ್ತಿಬಿಟ್ಟಾರು ಎಲ್ಲಾ.

301 ತಿಳಿಯದಿರಲಿ
---------------------
ನಾ ಮೆಚ್ಚಿದ್ದು
ಅವಳ ಕೇಶ ರಾಶಿ ನೋಡಿ ಅಲ್ಲ,
ರೂಪ ರಾಶಿ ನೋಡಿ ಅಲ್ಲ
ರೂಪಾಯಿ ರಾಶಿ ನೋಡಿ.

302 ಕಾಮರ್ೋಡ
--------------------
ಕಾರು ಕಾರುತ್ತ
ಹೋಗುವುದು ಮುಂದೆ
ಕಾರಿದ್ದು ಹಾರುತ್ತ
ಹೋಗುವುದು ಮೇಲೆ
ಅದುವೆ ಕಾರ್ಮೋಡ.

303 ದೇವರ ನಾಮ
---------------------
ದಿ ಪೂತರ್ಿ ದುಡಿಯುವವನ
ಯೋಗ್ಯತೆ ಚೆಂದ
ರೆಂಬೆ ಕೊಂಬೆಗಳ ತುಂಬಾ ಎಲೆಗಳಿರುವ
ಮರ ಚೆಂದ
ಬಾಯಿ ತುಂಬಾ ಭಜಿಸಲು
ದೇವರ ನಾಮ ಅಂದ.

304 ತಿಗಣೆಗಳು
-----------------
ಸಕರ್ಾರಿ ಆಫೀಸುಗಳಿಗೆ ಹೋದರೆ
ಅಲ್ಲಿರುವುದು
ಬರೀ ಕಾಗದ ಪತ್ರಗಳ ಕಡತ
ಬಿಟ್ಟರೆ
ರಕ್ತ (ಲಂಚ) ಹೀರುವ
ತಿಗಣೆಗಳ ಕಡಿತ.

305 ಯೌವನ
------------------
ಮದ ಮೋಹ ಮತ್ಸರ
ದ್ವೇಶಾಸೂಯೆಗಳೆಂಬ
ಕಾಡು ಪ್ರಾಣಿಗಳಿಂದ
ತುಂಬಿರುವ ವನ.

306 ಸಾಕ್ಷಿ
-----------------
ಕೃತಿ ಚೌರ್ಯವೆಸಗಿರುವ
ಕವಿ ನಾನು,
ಹೇಗಂತೀರಾ?
ಯಾರೋ ಬರೆದ
ಅಆ ದಿಂದ ಳಕ್ಷಜ್ಞ ವರೆಗಿನ
ಅಕ್ಷರಗಳನ್ನೇ ನನ್ನ ಕೃತಿಗಳಲ್ಲಿ
ಬಳಸಿಕೊಂಡಿರುವುದೇ ಸಾಕ್ಷಿ.

307 ಆತ್ಮ ಕಥೆ
----------------
ಕಲಾತ್ಮಕತೆ ಹೆಣೆದು
ಕಥೆ ಬರೆಯಬೇಕೆಂದುಕೊಂಡೆ,
ಬರೆದೆ, ನಂತರ ಓದಿದೆ,
ಕಲಾತ್ಮಕತೆಯೇನೋ ಹೊಂದಿತ್ತು
ಆದರದು ಕಥೆಯಾಗಿರದೇ
ನನ್ನಾತ್ಮ ಕಥೆಯಾಗಿಬಿಟ್ಟಿತ್ತು..

308 ಕುಂಚ
----------------
ಬಿಳಿ ಹೊಲದ ತುಂಬೆಲ್ಲಾ
ಇಂಚಿಂಚೂ ಬಿಡದಂತೆ
ಅಂಚಂಚಿಗೂ ತೆರಳಿ
ಕೊಂಚವೂ ಬೆದರದೆ
ಅಡ್ಡಾಡಿತ್ತು.

309 ಕರಾರು
--------------------
ಪ್ರಿಯಕರಾ!
ನನ್ನ ಮದುವೆಯಾದ ಮೇಲೆ
ನೀನು ಬೀರು ಬಾರಿಗೆ ಹೋಗಲು
ನನ್ನದಿಲ್ಲ ತಕರಾರು,
ಆದರೆ
ತಿಂಗಳ ಪೂತರ್ಿ ಸಂಬಳ ಮಾತ್ರ
ನನ್ನ ಕೈಗೆ ಕೊಡಬೇಕೆನ್ನುವುದೇ
ನನ್ನ ಕರಾರು.

310 ಉಳಿಸಿದ ಗಂಟು
-------------------
ನಾನವನ ಜೊತೆ ಓಡಾಡಿದ್ದಕ್ಕೆ
ಗುಟ್ಟು ಉಂಟು,
ಅಂತೆಯೇ ಬೆಳೆಸಿದೆ
ಪ್ರೇಮದಾ ನಂಟು'
ಸ್ವಲ್ಪ ದಿನದಲ್ಲಿ ಬಿತ್ತು
ನನ್ ಕೊರಳಿಗೆ ಮೂರ್ಗಂಟು,
ಅಂತೂ ಇಂತೂ ಉಳಿಸಿದೆ
ನಮ್ಮಪ್ಪನ ವರದಕ್ಷಿಣೆ ಗಂಟು.

311 ಮುತ್ತು
----------------
ಒಡಿಯಾ!
ನಿಮ್ಮ ಅಪ್ಪೋರು ಕೊಟ್ಟಿದ್ದು
ತುತ್ತಿಗಾತು,
ಅಮ್ಮೋರು ನೀಡಿದ್ದು
ಬಟ್ಟೆಗಾತು,
ನೀವು ಕೊಟ್ಟಿದ್ದು(ಮುತ್ತು) ಮಾತ್ರ
ನನ್ ಕುತ್ಗೆಗೇ ಬಂತು.

312 ಪುಸ್ತಕ
------------------
ಸಂತತಿ ಬೆಳೆಯಲು
ಸಂಗಾತಿ ಬೇಕು,
ಗ್ರಂಥಾಲಯ ಬೆಳೆಯಲು
ಪುಸ್ತಕ ಬೇಕು.

313 ಕಚೇರಿ
----------------
ತಟ್ಟಿದ್ದಕ್ಕೆ ಮುಟ್ಟಿದ್ದಕ್ಕೆಲ್ಲಾ
ಫೀಸು,
ಅದೇ ಸಕರ್ಾರಿ
ಆಫೀಸು.

314 ಸಖ್ಯ
-----------------
ರಾಜಕಾರಣಿಗಳಿಗೆ ಅಧಿಕಾರವೇ
ಮುಖ್ಯ,
ಹಾಗಾಗಿ
ಯಾವ ಪಕ್ಷದ ಜೊತೆಗಾದರೂ
ಬೆಳೆಸುತ್ತಾರೆ
ಸಖ್ಯ.

315 ಸಾಹಿತಿಯ ಪೆನ್ನು
-------------------------
ಇರಬಹುದು
ಹತ್ತು ಪೆನ್ನುಗಳು
ಸಾಹಿತಿಗಳಲ್ಲಿ,
ಆದರೆ
ಒಂದೂ ಹತ್ತವು
ಇವುಗಳಲ್ಲಿ.

316 ಹೊಟ್ಟೆ ತುಂಬಿದ ಬಳಿಕ
-----------------------
ಹಸಿದ ಹೊಟ್ಟೆಯಲ್ಲಿ
ಮಾಡುತ್ತಿದ್ದ ಹಾಗೇ ಊಟ
ಅಮೃತದಂತಹ ಸ್ವೀಟ,
ಉಂಡ ಮೇಲೆ ಕಂಠ ಮಟ
ಊಟದ ಮೇಲೆಯೇ ಬಂದಿತ್ತು
ಜಿಗುಪ್ಸೆಯ ನೋಟ.

317 ನುಸಿ ಪೀಡೆ
-----------------
ಓ ನಾರೀ........ಕೇಳ
ನೋಡಿ ಕುಡಿ
ನಾರಿಕೇಳ
ಕೀಟ ಏರೈತಿ ಬಾಳ.

318 ದರ ಏರಿದಾಗ
------------------
ಕಂಡೋರು ಕೇಳಿದೋರು
ಎಲ್ಲಾರೂ ಬೆಳಿತಾರೆ
ವೆನಿಲ್ಲಾ,
ಕದ್ದು ಕೊಂಡೋದರೆ ಮಾತ್ರ
ಏನೂ ಇಲ್ಲಾ.

319 ಪೋಷಣೆ
---------------------
ಇಂಗ್ಲೀಷಿನ
ಬೀಜ ಬಿತ್ತಿ ಹೋದವರು
ಬ್ರಿಟೀಷರು,
ಅದಕೆ ನೀರು ಗೊಬ್ಬರ ಹಾಕಿ
ಪೋಷಿಸಿದವರು
ಭಾರತೀಯರು.

320 ಪುರಸ್ಕಾರ
-----------------
ಸ್ವಾತಂತ್ರ್ಯ ಯೋಧರ
ಚಳುವಳಿ,
ಇಂದಿನ ಪೀಳಿಗೆಗದು
ಬಳುವಳಿ.

321 ಕಳ್ಳಿ (ಮಾನಸ)
---------------------
ಮೊದಲ ನೋಟದಲ್ಲಿ
ಕದ್ದಳೆನ್ನ ಮನಸು,
ಅವಳೇ
ಕೆರೆತೋಟದ ಕೂಸು.

322 ಗುಂದದ ಕುಡಿ
---------------------
ದಟ್ಟ ಕಾನನದೊಳವಿತಿರುವ
ಹೆಣ್ಣೊಂದ
ಅಭಯಾರಣ್ಯ ಗುಂದದಲಿ
ನಾ ಕಂಡೆ,
ಥಳುಕು ಬಳುಕಿನಾ
ಈ ಸುಗಂಧದ ಕುಡಿಯು
ಹಬ್ಬೂತಲಿಹುದು
ಉಂಚಳ್ಳಿಯ ಕಡೆಗೆ.

ಸಂಕಟ
--------
ಭಾವನೆಗಳು
ಬಾಧಿಸಿದಾಗ
ನೋವುಗಳು
ನತರ್ಿಸುತ್ತವೆ.
------------------------------------------------------------------------------------------------------ ಕವಿ-ದತ್ತಗುರು ಕಂಠಿ,
ಪೊ-ಉಂಚಳ್ಳಿ
ತಾ-ಸಿರಸಿ, ಜಿ-ಉತ್ತರ ಕನ್ನಡ, 581318. ಮೊ-9483648230.
======================================================================================================�

Sunday, 26 June 2011

ಚುಟುಕುಗಳು

ಹೊಸ ಅಭಿಯಾನ
-----------------
ಅಹಂಕಾರಕೆ ಉದಾಸೀನವೇ ಮದ್ದು
ದೃಢ ಮನಸ್ಸಿನಿಂದ ಮಧರ್ಿಸದನ ಒದ್ದು
ನನ್ನಿಂದ, ನಾನು, ನನ್ನದು ದುರಭಿಮಾನ
ಪ್ರತಿಷ್ಠೆ ಬಿಟ್ಟು ಸಾಗಲಿ ಹೊಸ ಅಭಿಯಾನ.


ಕಪ್ಪು ಹಣ
---------
ರಾಜಕೀಯದಲಿ ಒಂದೇ ಹವಾಗುಣ
ಮೂರು ತಲೆಮಾರು ಕೂತು ತಿನ್ನಲು ಹಣ
ಇದನ ಕೂಡಿಸಲು ನಾನಾ ತರಹದ ಹಗರಣ
ಲೋಕಾಯುಕ್ತರು ಹೊರಗೆಳೆವರದರ ಹೂರಣ.


ಸಾರಾಯಿ ಸಹವಾಸ
-----------------
ಸೇಂದಿ ಸಾರಾಯಿಯಿಂದ ಸರ್ವವೂ ನಾಶ
ಅಣುಅಣುವಾಗಿ ಜೀವ ನುಂಗುವ ವಿಷ
ಹೆಂಡತಿ ಮಕ್ಕಳು ನಿರಂತರ ಉಪವಾಸ
ವ್ಯಸನ ಮುಕ್ತ ಬಾಳು ಎಂದೂ ನವೋಲ್ಲಾಸ.


ದೃಢ ಮನಸ್ಸು
-----------
ಬದುಕೆಂದಿಗೂ ಜೀವಂತಿಕೆಯ ಸಂಕೇತ
ಜೀವನದಿ ಸಾವು ನೋವು ಅಸಂಖ್ಯಾತ
ಆತ್ಮಹತ್ಯೆ ಮನುಜಗೊಲಿದ ಸಸಾರ ವಿದ್ಯೆ
ಮನೋಸ್ಥೈರ್ಯ ದೃಢವಿರಲಿ ಬಾಳಿನ ಮಧ್ಯೆ.


ಆಪತ್ತಿಗಾದವ
-----------
ದಾನದಿಂದ ದೊರೆತುದು ಪವಿತ್ರ ತೃಪ್ತಿ
ದೇವಗೆ ಸಮಾನ ಆಪತ್ತಿಗಾದ ವ್ಯಕ್ತಿ
ಸಮಯಕ್ಕೆ ಸಂದ ಸಹಕಾರ ಸಹಾಯ
ತೀರಿಸಲಾಗದ ಅಪರಿಮಿತ ಆದಾಯ.


ಹೊಸ ಹಾದಿ
----------
ನೆತ್ತಿಗೇರಿದರೆ ಯಶಸ್ಸಿನ ಪಿತ್ತ
ಅಂತವರ ಅಸ್ಥಿತ್ವ ಅಗೋಚರದತ್ತ
ಲೌಕಿಕತೆಯಿಂದ ಪಾರಮಾರ್ಥದ ಕಡೆಗೆ
ಹಾಕಿರೆಲ್ಲ ಆಧ್ಯಾತ್ಮದ ದಿಟ್ಟ ನೆಡಿಗೆ.


ಶಾಶ್ವತ ಶಕ್ತಿ
--------
ಪಂಚೇಂದ್ರಿಯಗಳ ನಿಧರ್ಿಷ್ಠ ನಿಯಂತ್ರಣ
ಭಗವಂತನು ನೆಲೆಸುವ ಸಮೃದ್ಧ ತಾಣ
ಯಶಸ್ಸಿನ ಮೂಲ ಮಂತ್ರವೇ ಭಕ್ತಿ
ಅದೇ ಬಾಳಿನ ಕೊನೆತನಕ ನೆಲೆಸೊ ಶಕ್ತಿ.


ಜಾತಿ ರಹಿತ ಸಮಾಜ
---------------
ಪ್ರೀತಿ ವಿಶ್ವಾಸದಿಂದ ಸಮಾಜವ ಕಟ್ಟಿ
ವ್ಯವಸ್ಥಿತ ರೂಪುಗೊಂಡಾಗ ಬಲು ಗಟ್ಟಿ
ಜಾತಿ ವರ್ಗ ರಹಿತ ಸಮಾಜ ನಿಮರ್ಾಣ
ದೇಶದ ಸಮಗ್ರ ಏಳ್ಗೆಗೆ ರಾಮಭಾಣ.


ನೇಗಿಲಯೋಗಿ
----------
ಉದರ ತೃಷೆ ನೀಗಿಸೋ ಓ ನಮ್ಮ ರೈತ
ದೇಶವೇ ಸಾಲದ ಕೂಪದಲ್ಲಿದೆ ಗೊತ್ತಾ?
ನೀನ್ಯಾಕೆ ಸಾಯ್ತಿ ಜುಜುಬಿ ಸಾಲಕ್ಕೆ ಅಂಜಿ
ನಿವ್ರ್ಯಸನದ ಬಾಳು ಸವೆ ಕುಡಿದಾದರೂ ಗಂಜಿ.


ಅತಿಯಾದಾಗ
--------------
ಗಲ್ಲಿಗಲ್ಲಿಲೊಂದು ಕುಲ ದೇವರ ಗುಡಿ
ಜೊತೆ ಸಂದಿಗೊಂದಿಲೊಂದು ಶೇಂದಿ ಅಂಗ್ಡಿ
ಇವೆರಡೂ ಸಮಾಜದ ಅವಿಭಾಜ್ಯ ಅಂಗ
ಅತಿಯಾದರೆ ಸಾಮಾನ್ಯರ ಶಾಂತತೆಗೆ ಭಂಗ.


ಸಹಕಾರಿ ಸಂಘ
-------------
ಸಹಕಾರಿ ಕ್ಷೇತ್ರ ಸರಕಾರಕ್ಕೂ ಹಿರಿದು
ಬೃಷ್ಟರು ಸೇರಿದರೆ ಅವೆಲ್ಲ ಬರಿದು
ಸಂಘ ಸಂಸ್ಥೆಗಳು ದೇಶದ ದೊಡ್ಡ ಆಸ್ತಿ.
ಅಲ್ಲೂ ನಡೆಯುತ್ತಿದೆ ಕುಚರ್ಿಗಾಗಿ ಕುಸ್ತಿ.


ಮಿತ ಸಂತಾನ
-----------
ಒಂದು ಬುಡದಿ ಒಡಮೂಡಲು ಹಲವು ಟಿಸಿಲು
ಉಗ್ರಾಣ ತುಂಬ ಭರಪೂರ ಫಸಲು
ಈ ಕಲ್ಪನೆ ಬಾಳ ತಪ್ಪು ತಿಳಿ ಮೂಢಾ
ಸಂಸಾರಕ್ಕೂ ಅನ್ವಯಿಸುತ್ತೆ ನೋಡಾ.


ಒಂದೇ ರಕ್ತ
---------
ಧರ್ಮಕ್ಕಾಗಿ ಹೋರಾಟ ಮೂಢರ ಕರ್ಮ
ಕರ್ಮಕ್ಕಾಗಿ ಹೋರಾಟ ನಿಜವಾದ ಧರ್ಮ
ಮನ ಪಂಥ ತೊರೆದ ಬಾಳ್ವೆ, ಮನುಜ ಮತದ ಮರ್ಮ
'ಸ್ವರ್ಣ ವರ್ಣಗೊಡವೆಯೇಕೆ? ನಾವೆಲ್ಲ ಒಂದೇ ಚರ್ಮ.


ಹೆಲ್ಮೇಟು ಧಾರಣೆ
------------
ಬೈಕಿನಿಂದ ಉರುಳಿ ಬಿದ್ದಲ್ಲಿ ತಲೆಗೇಟು
ತಪ್ಪದೇ ಶಿರದಲಿ ಧರಿಸಿರಿ ಹೆಲ್ಮೇಟು
ಬೀದಿ ಪಾಲಾಗುವುದು ನಿಮ್ಮಯ ಸಂಸಾರ
ಆಗ ಏನು ತಾನೇ ಮಾಡೀತು ಸರಕಾರ?


ಸ್ವರ್ಣವಲ್ಲೀ
---------
ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ
ಅದ್ವೈತ ಭಕ್ತರಿಗಿದು ಕೇಂದ್ರ ಸ್ಥಾನ
ಹಿಂದೂ ಸಂಸ್ಕ್ರತಿಯ ಪುನರುಜ್ಜೀವನ
ಶಿಷ್ಯಕೋಟಿ ಜನರ ಜೀವನ ಪಾವನ.


ಸ್ವರ್ಗದ ನಂಟು
------------
ಗುರು ಹಿರಿಯರಿಗೆ ಮಾಡದೆಯೆ ನಿಂದನೆಯ
ರೂಢಿಸಿದರೆ ಪ್ರತಿನಿತ್ಯ ಸಂಧ್ಯಾವಂದನೆಯ
ತುಂಬುವುದು ಪುಣ್ಯದ ಇಡಿ ಗಂಟು
ಜೀವಿತದಿ ಪೂರ್ಣ ಸಗ್ಗ ಸುಖದ ನಂಟು.


ಮನಃಶುದ್ಧಿ
--------
ಮಾಡಿದರೆ ತುಂಬು ಕಂಠದಿ ವೇದಾಧ್ಯಯನ
ಕೇಳಿದರೆ ಎಡಬಿಡದೆ ಪಾಠ ಪ್ರವಚನ
ನಾಸ್ತಿಕನೂ ಬದಲಾಗುವ ಆಸ್ತಿಕನಾಗಿ
ಶೃದ್ಧೆ ಮೂಡುವುದು ಮನಸ್ಸು ಪವಿತ್ರವಾಗಿ.


ಮಧುಮೇಹ
---------
ಬಂದರೂ ಬಂದೀತು ಜೋಕೆ ಮಧುಮೇಹ
ಬಿಟ್ಟು ಬಿಡಿ ಸಿಹಿ ತಿಂಡಿಗಳ ವ್ಯಾಮೋಹ
ದೇಹಕೆ ದಿನವೂ ಬೇಕು ಶ್ರಮದ ಕಾವು
ಆಗಲೂ ಶಮನವಾದಿರೆ ಇದ್ದೇ ಇದೆ 'ಕಹಿ ಬೇವು'.

ಸಂಘ
-------
ಸೇರಿಕೋ ಸ್ತ್ರೀ ಶಕ್ತಿ ಸಂಘಕ್ಕೆ ಅಕ್ಕ
ಪ್ರತಿ ತಿಂಗಳೂ ಹಾಕು ಹನಿಹನಿ ರೊಕ್ಕ
ಸಾಗುವುದು ಸುಗಮದಿ ಸಂಸಾರದ ಹಾದಿ
ದೇಶದ ಆಥರ್ಿಕತೆಗೆ ಭದ್ರ ಬುನಾದಿ.


ಬುಡುಬುಡಿಕೆ
---------
ಕೇಳುಗರ ಕಿವಿಗಳಿಗೊಂದು ಕಾಲಹರಣ
ರಾಜಕೀಯ ನಾಯಕರ ಉದ್ದುದ್ದ ಭಾಷಣ
ಬುಡವಿಲ್ಲ, ಕೊನೆಯಿಲ್ಲ, ಹುರುಳಿಲ್ಲ ಇದಕೆ
ಹೇಳಿದ್ದನ್ನೇ ಹೇಳುವ ಬುಡಬುಡಿಕೆ.


ವಿಧೇಯತೆ
-------
ಗುರು ಹಿರಿಯರಿಗೆ ತೋರಿದರೆ ನೀ ವಿಧೇಯ
ಅದೇ ಕೊನೆಯಲ್ಲಿ ಉಳಿಯುವಾ ಆದಾಯ
ಅಂತರಂಗ ಬಹಿರಂಗದೊಳಗಡೆ ಶುದ್ಧಿ
ಈ ಪ್ರಯತ್ನದ ಫಲವೇ ಗಳಿಸಿದಾ ಸಿದ್ಧಿ.


ಅಶುದ್ಧ ಸಿದ್ಧಾಂತ!
------------
ಮತಾಂಧ ಭಯೋತ್ಪಾದಕರ ಸಿದ್ಧಾಂತ
ಹೇಳಿದವರ್ಯಾರು ಅದನ್ನ ಶುದ್ಧಾಂತ?
ಒಂದಲ್ಲ ಒಂದಿನ ಇದೆ ಅವರುಗೂ ಅಂತ್ಯ
ಇದೂ ಎಲ್ಲದರಂತೆ ಕಾಣುವುದು ಸುಖಾಂತ್ಯ.


ಧಾರವಾಡ ಪೇಡ
-----------
ಅದ್ಯಾವ ಕಜ್ಜಾಯಕೋ ಇಷ್ಟೊಂದು ಡಾಲ್ಡಾ?
ಖರೀದಿಸು ಮತ್ತೆ ಧಾರವಾಡ ಪೇಡಾ
ಹಂಚಿ ತಿಂದಾಗ ನೀ ಕುಣಿದಂತೆ ಘೋಡಾ

ಮಧು ಮೇಹವಿದ್ದರೂ ತಿಂದೀಯಾ ಮೂಢಾ


ಸಂಸಾರದ ಸೊಗಸು
-------------
ಮಾವನಿಂದ ಕೇಳಬೇಡಿ ಕವಡೆ ಕಾಸು
ಮನೆಯ ಜೊತೆ ಮನವನ್ನೂ ತುಂಬುವಳು ಕೂಸು
ಆ ತುಂಬು ಸಂಸಾರ ಅದೆಂತಾ ಸೊಗಸು
ಯಾರೂ ಆಡಿಕೊಳ್ಳಲಾರರು ಗುಸುಗುಸು


ಬೆಂಬಲ ಬೆಲೆ
----------
ಬೆಂಬಲ ಬೆಲೆಯ ನಿವ್ವಳ ಹಣ ಎಣಿಸುವುದು
ಸಂಪೂರ್ಣ ಅಡಿಕೆ ಬೆಳೆಗಾರರ ಕನಸದು
ಸಕರ್ಾರ ಕೊಟ್ಟಂತ ಅಗ್ರ ತಾಂಬೂಲ
ಸೋರಿ ಹೋಗುತಿದೆ ವ್ಯಾಪಾರಸ್ಥರ ಬಿಲ.


ರೋಗ ರಹಿತ ಬಾಳು
-------------
ಮಾಡದಿರಿ ಮಕ್ಕಳೇ ನೂರೆಂಟು ಚಟವ
ಮಾಡಿದರೆ ಚಟ್ಟಕ್ಕೆ ಹಾಕುವಿರಿ ಘಟವ
ಚಟವಿಲ್ಲದಿರೆ ಬಾಳು ಶ್ರೀಮಂತ ನೋಡು
ರೋಗವಿರದ ಕಾಯ ಹೆಜ್ಜೇನಿನ ಗೂಡು.


ಅಧಿಕಾರ
-------
ಅಕ್ಷರ ಜ್ಞಾನವೇ ಬೇಡವೀ ಕೆಲಸ
ಮುದಿತನವು ಮೂಡಿರಲು ಹೋಗದೀ ಸರಸ
ಸತ್ತರೂ ಮನೆ ಬಿಟ್ಟು ಹೋಗದಧಿಕಾರ
ಮನೆ ಒಡತಿ ಕೈಯಲೇ ಕೀಲಿಕೈ ಪೂರ.


ಗುಂಡಿನ ಗಮ್ಮತ್ತು
-----------
ಕತ್ತಲೆಯ ಮಬ್ಬಲ್ಲಿ ಹಂದಿಗಳ ದಂಡು
ಮುರಿದು ತಿನ್ನುತಲಿತ್ತು ಕಬ್ಬಿನಾ ಹಿಂಡು
ಸದ್ದು ಕೇಳಿದ ಒಡೆಯ ಗೋಲೆಯನು ಕಂಡ
ಓಡಿದವು ಹಂದಿಗಳು ಸಿಡಿಸಲವ ಗುಂಡು.


ಕರ್ತವ್ಯ
------
ಅದೆಷ್ಟು ದಿನ ಉಳಿದು ಕೊಂಡಿತೀ ಪ್ರಾಯ
ಅಷ್ಟರೊಳಗೆ ಹಾಕು ಭದ್ರ ಅಡಿಪಾಯ
ಮಣ್ಣಲಿ ಮುರುಟುವುದರೊಳಗೆ ಈ ದೇಹ
ತೀರಿಸಿಕೊ, ದಯ ದಾನ ಧರ್ಮದಾ ದಾಹ.


ಸ್ವದೇಶಿ ಉಳಿಸಿ
--------
ವಿದೇಶೀ 'ಕೊಕಾಕೋಲಾ ಪೆಪ್ಸಿ' ಎತ್ತಂಗಡಿ
ಬಳಸಿ ಸ್ವದೇಶಿ ಎಳನೀರು ಕಲ್ಲಂಗಡಿ
ಬಡ ರೈತರ ಉದ್ಧಾರ ಪುಣ್ಯದ ಕೆಲಸ
ಅದನ್ನರಿತರೆ ನೀ ಆರೋಗ್ಯದಿ ಅರಸ.


ಹಿಂಡುವಿಕೆ
-------
ನುಂಗಲಾರದ ತುತ್ತು ಉದಾರೀಕರಣ
ಹಿಂದುಗಳ ಹಿಂಡುತಿದೆ ವಿದೇಶೀಕರಣ
ಭಾರತೀಯ ದುಡಿದ ಲಾಭದ ಬಹುಪಾಲು
ವಿದೇಶೀ ಬಹು ರಾಷ್ಟ್ರೀಯ ಕಂಪನಿಪಾಲು


ಅಕ್ಷರ ದಾಸೋಹ
-----------
ಅಕ್ಷರ ದಾಸೋಹ ಬಹು ಒಳ್ಳೆಯ ಕೆಲಸ
ಪ್ಲೆವಿನ್ ಲಾಟರಿ ಹಣ ಮಾತ್ರ ಹೊಲಸ
ಜನಪರ ಕೆಲಸದಿ ಶಕುನಾಪಶಕುನ ಸಲ್ಲ
ಒಗ್ಗಟ್ಟಿನಲಿ ಮುಗ್ಗಟ್ಟಿರದಿರೆ ಎಲ್ಲವೂ ಬೆಲ್ಲ.


ನಮ್ಮ ಬಳಗ
--------
ಬಡ ಭಾರತ ದೇಶದ ಉದ್ಧಾರ ಹೆಂಗ?
'ಹಿಂದೂ ಸೇವಾ ಪ್ರತಿಷ್ಠಾನದೊಳಗ
ಬಂಧುಗಳೇ ಸೇರಿರಿ ಈ ಬಳಗದೊಳಗ
ಇದನ ರೂಪಿಸಿದ ಕಮರ್ಿಗೆ ತೊಡಿಸೋಣ ಕಡಗ.


ಸ್ವಾತಂತ್ರ್ಯೋತ್ಸವ
--------------
ಮುಂಜಾನೆ ತ್ರಿವರ್ಣ ದ್ವಜಾರೋಹಣ
ಪಥ ಸಂಚಲನದಿ ಶಾಲಾ ಬಾಲಕರ ಗಣ
ಸಡಗರ ಸಂಭ್ರಮದ ರಾಷ್ಟ್ರೀಯ ಹಬ್ಬ
ಮಿಂಚುವುದು ರಾಜಕಾರಣಿಗಳ ಜುಬ್ಬ


ನನ್ ಬರಹ
----------
ಪತ್ರಿಕೆಗಳಲ್ಲಿ ಬತರ್ಿದ್ರೆ ನನ್ ಬರಹ
ಸಿಕ್ಕಷ್ಟೇ ಸಂತೋಷ, ಸಾವಿರಾರು ವರಹ
ಬರದೇ ಇದ್ರೆ ನೂರಾರು ತರಹದ ವಿರಹ
ಬರೆಯದಿದ್ದರೂ ನಾನಾಗಿ ಬಿಟ್ಟೇನು ವಿಧುರ!



ಚುನಾವಣೆ ಕಾವು
------------
ಸಮೀಪಿಸುತ್ತಿದ್ದ ಹಾಗೆ ಚುನಾವಣೆ
ಸಾರಾಯಿ ರೂಪಾಯಿಗಳ ಚಲಾವಣೆ
ಏರುತಿರಲು ಆಣೆ ಆಶ್ವಾಸನೆಗಳ ಕಾೆವು
ಜನರ ಮೈಮೇಲೆ ಹರಿದಾಡಿದಂತೆ ಹಾವು.


ಅಗೌರವ
---------
ಗುರು ಹಿರಿಯರಿಗೆ ಪ್ರೀತಿ ಆದರ ಗೌರವ
ಕೊಡದಿರೆ ದೊರಕುವುದು ನರಕದಲಿ ರೌರವ
ಮೊಳಕೆಯೊಡೆದು ಚಿಗಿತಾಗ ಪಾಪದ ವೃತ್ತಿ
ಕಮರದಿರದು ಕೂಡಲೇ ಉರಿದಂತೆ ಹತ್ತಿ.


ಧರ್ಮದ ಮರ್ಮ
------------
ಸತ್ಯ, ಸೇವೆ, ನ್ಯಾಯ ನೀತಿ, ದಾನ, ಧರ್ಮ
ಅರಿತು ನಡೆ ಇವೆಲ್ಲದರೊಳಗಿನ ಮರ್ಮ
ಅದರ ಅರಿವು ಇಲ್ಲದ ಮನುಜನ ಬಾಳು
ಬೆಳೆ ಇರದ ಹೊಲದಿ ಕಳೆ ತೆವವನ ಗೋಳು.


ಅಶುದ್ಧ ಸಿದ್ಧಾಂತ!
------------
ಮತಾಂಧ ಭಯೋತ್ಪಾದಕರ ಸಿದ್ಧಾಂತ
ಹೇಳಿದವರ್ಯಾರು ಅದನ್ನ ಶುದ್ಧಾಂತ?
ಒಂದಲ್ಲ ಒಂದಿನ ಇದೆ ಅವರುಗೂ ಅಂತ್ಯ
ಇದೂ ಎಲ್ಲದರಂತೆ ಕಾಣುವುದು ಸುಖಾಂತ್ಯ.


ತಾಂತ್ರಿಕ ವಿಧಾನ
------------
'ಕೂಲಿ ಸಮಸ್ಯೆ' ರೈತಗಂಟಿದ ಬಲವಾದ ತೊಡಕು
ತಂತ್ರಜ್ಞಾನ ಸಲಕರಣೆ ತುತರ್ಾಗಿ ಹುಡುಕು
ಗದ್ದೆ ತೋಟದೊಳಗೂ ನುಗ್ಗಲಿ ಟ್ಯಾಕ್ಟರ್ ರಿಕ್ಷಾ ಗಾಡಿ
ಕೂಲೀ ಸಮಸ್ಯೆ ಬಗೆಹರಿಯುವುದೋ ನೋಡಿ.


ಬೊಗಳೆ
------
ಕಾಂಗ್ರೆಸ್ ಸೊಪ್ಪು, ಅಕೇಶಿಯಾ ಮರವು
ಜನ ಸಾಮಾನ್ಯರ ಸ್ವಾಸ್ಥ್ಯಕ್ಕೆ ಮಾರಣಾಂತಿಕವು
ಇದು ಆಧಾರ ರಹಿತ ಬೊಗಳೆಯೋ ರಂಗ
ಈಗಿವೆರಡೂ ಕೃಷಿಕರಿಗೆ ಅವಿಭಾಜ್ಯ ಅಂಗ.


ಮಕ್ಕಳಲ್ಲಿ
---------
ದೇವರಲಿ ಭಯ ಭಕ್ತಿ ಪೂಜೆ ಪುನಸ್ಕಾರ
ಪರೀಕ್ಷೆಯು ಹತ್ತಿರ ಬಂದಾಗ ಮಾತ್ರ
ಆಟ ತುಂಟಾಟ ಪೋಲಿತನ ವರ್ಷ ಪೂತರ್ಿ ಇಹುದು
ಈ ನಡುವೆ ದೂರವೇ ಉಳಿದಿತ್ತು ಓದು.


ಪ್ರಾಯದಲ್ಲಿ
---------
ಬಿಸಿರಕ್ತದ ಪ್ರಾಯದಲಿ ಉರಿದಿದ್ದೇ ಉರಿದದ್ದು
ವೃದ್ಧಾಪ್ಯದ ಹೊಸ್ತಿಲಲಿ ತಿಂಡಿ ತೀರ್ಥ ಎಲ್ಲಾ ರದ್ದು
ದಿನಕ್ಕೆ ಮೂರ್ಹೊತ್ತೂ ನುಂಗಿದರೆ ಮಾತ್ರೆ
ಹಿಂದಿನ ಪಾಪ ತೊಳೆಯಲು ಮಾಡಬಹುದು ಯಾತ್ರೆ.


ರಾಜಕೀಯ
---------
ಚುನಾವಣೆ ಬಂದಾಗ ಬಹು ಜನರ ದೋಸ್ತಿ
ಗೆದ್ದಾಗ ಅಲ್ಲಿ ಖುಚರ್ಿಗಾಗಿ ಕುಸ್ತಿ
ಆಶ್ವಾಸನೆಗಳೇ ಮತದಾರರಿಗೆ ಆಸ್ತಿ
ಕಾದಿದೆ ಮರು ಇಲೆಕ್ಷನ್ನಲಿ ತಕ್ಕ ಶಾಸ್ತಿ


ಹೋಲಿಕೆ
------------
ಮರದಿಂದ ಮರಕ್ಕೆ ನೆಗೆಯುವಾ ಕೋತಿ
ಅದೆಂದೂ ಪಟ್ಟಿಲ್ಲ ಆತಂಕದ ಭೀತಿ
ಪಕ್ಷದಿಂ ಪಕ್ಷಕ್ಕೆ ಹಾರುವ ರಾಜನೀತಿ
ಕೋತಿಯೊಂದಿಗಿನ ಹೋಲಿಕೆಯೇ ಜಾಸ್ತಿ.


ದೀಪಾವಳಿ
--------
ದೀಪಾವಳಿ ತಂದಿತು ದೀಪಗಳ ಸಾಲು
ದನಕರುಗಳಿಗೂ ಉಂಟು ಕಡುವಿನಲಿ ಪಾಲು
ತೆನೆ ಕೊನೆಗಳು ತುಂಬಿಹ ಸಮೃದ್ಧ ಫಸಲು
ಅದ ನೋಡಿ ಮರೆಯುವಾ ಗತ ಕಾಲದ ನೋವು.


ಸಬಲೆ
--------
ಕೈ ಹಿಡಿದು ಕಳುಹಿದರೂ ಕಲಿಯದವನು ಶಾಲೆ
ಅವಗೆ ಮುಂದಕೆ ಬರುವುದೆಲ್ಲವೂ ಸೋಲೆ
ಬಾಲ್ಯ ಮೀರುವುದೊಳಗೆ ನೀ ಕಲಿ ಬಾಲೆ
ಜ್ಞಾನ ತುಂಬಿದ ಮೊಗದಿ ಮಿಂಚುವೆ ಪ್ರಭಲೆ.


ಚಂಚಲೆ
---------
ಇಟ್ಟಾಂಗ ಇರಲೊಲ್ಲಳು ಇಂದಿನಾ ಹೆಣ್ಣು
ಫ್ಯಾಶನ್ ಮಸ್ತಿ ದೋಸ್ತಿ ಶಹರದತ್ತ ಕಣ್ಣು
ಹಣ್ಣು ಸವಿದಾಂಗ ಸವಿಯುವವರೇ ಎಲ್ಲ
ಮದುವೆ ಮಾತು ಬಂದಾಗ ಕಾಲ್ಕೀಳುವನು ನಲ್ಲ.


ಬಡಪಾಯಿ ರೈತ
-------------
ಶಹರಕ್ಕೆ ಹೋದರೆ ಕಡಿನೊಣಗಳೇ ಜಾಸ್ತಿ
ಹೋದಾಗ ಮೇವಿಗೆ ವಿಪರೀತ ಕುಸ್ತಿ
ಹಿರಿಕಿರಿಯ ನೋಡದೇ ಹೀರುವವು ರಕ್ತ
ಹಣಕೆ ತಕ್ಕ ಮೌಲ್ಯ ತರದ ರೈತ ಅಶಕ್ತ.


ಹಗಲು ದರೋಡೆ
------------
ಮಂತ್ರಿ ಮಾಗಧರಿಂದ ಖಜಾನೆ ಕನ್ನ
ಎಲ್ಲ ಬಲ್ಲ ಸರಕಾರಿ ಅಧಿಕಾರಿ ಮನ್ನ
ದಿನದಿನಕೂ ದುಬಾರಿ ಬಡವ ಉಣ್ಣೋ ಅನ್ನ
ಮರೀಚಿಕೆಯೇ ಮತ್ತೆ ಇವಗೆ ಬೆಳ್ಳಿ ಚಿನ್ನ.


ಡಾ.ರಾಜ್ರಿಗೆ ಚುಟುಕು ನಮನ
------------------------
ಕಲೆಗಾಗಿ ಮೀಸಲಿಟ್ಟೆ ನಿನ್ನೀ ಜೀವ
ಅಭಿಮಾನಿ ಬಳಗಕ್ಕೇ ನೀನೇ ದೈವ
ಶಿವು, ರಾಘು, ಪುನಿತ್ ಮೂರು ಮುತ್ತನ್ನಿತ್ತೆ
ಕರುನಾಡ ಮಡಿಲಲ್ಲಿ ಜನಿಸಿ ಬಾ ಮತ್ತೆ.


ಸಾರ್ಥಕವು ನಿನ್ ದೇಹ ನಟನೆಯಲ್ಲಿ
ಮಿಡಿಯುತಿದೆ ನಮ್ ಜೀವ ನಿನ್ ನೆನಪಲ್ಲಿ
ನಾಯಕ ಗಾಯಕ ಓ ಮೇರು ನಟನೆ...
ಕಣ್ಮುಚ್ಚಿ ನಾ ಉಲಿವೆ, ನಿನ್ ಚಿತ್ರದ ಪ್ರತಿ ಘಟನೆ.


ಸಿನಿಮಾ ಜಗತ್ತು ನೀನಿರದೇ ಶೂನ್ಯ
ನಿನ್ ಸಿನಿಮಾ ಯುಗ ಯುಗಾಂತರಕೂ ಮಾನ್ಯ
ನಟ ಸಾರ್ವಭೌಮ ನಿನಗೆ ನೀನೇ ಸರಿಸಾಟಿ
ಅಭಿಮಾನಿ ಬಳಗ ಇದ್ದಿಹುದು ಕೋಟಿ.


'ವರನಟ'ನಿಗಾಗಿತ್ತು ಕಲೆಯೇ ಉಸಿರು
ಕನ್ನಡಿಗರ ಮನದಲ್ಲಿ ಸದಾನೀ ನೆಲೆಸಿರು
ಅಣ್ಣಾವ್ರ ಸಿನಿಮಾದಲ್ಲಿ ಸಮಾಜಕ್ಕೊಂದು ಸಾರಾಂಶ
ಇಂದಿನ ಸಿನಿಮಾಗಳಿಂದ ಸಾಹಿತ್ಯ ನಾಶ.


ಚೌತೀ ಹಬ್ಬ
---------
ಬಂದೀತು ನೋಡು ಚವತಿಯ ಹಬ್ಬ
ತುಂಬುವವು ಬೇಗ ಕಜ್ಜಾಯಗಳ ಡಬ್ಬ
ಚಕ್ಕುಲಿ, ಕೋಡ್ಬಳೆ, ಅತ್ರಾಸ ಹಲ್ಲಿದ್ದವರಿಗೆ
ಚಪ್ಪೆ ಉಂಡ್ಳೀಕಾಳು ಮಾತ್ರ ಶುಗರಿದ್ದವರಿಗೆ.


ಎಲ್ಲೆಂದರಲ್ಲಿ ಗಣಪ!
------------------
ಕಸುವು ಹಸಿವೂ ಇದ್ದವಗೆ ಹಬ್ಬ
ಸಾಮಾನು ರೇಟು ಕೇಳಿದಿರಾ ಅಬ್ಬ!
ಗಲ್ಲಿಗಲ್ಲಿಯಲಿಂದು ಕೂರುವನು ಗಣಪ
ಪೂಜೆಗೆ ಭಟ್ಟರೇ ಸಿಗಲಿಲ್ಲ ಪಾಪ.


ಕಲಬೆರಿಕೆ ಆಹಾರ
--------------
ಕಲಬೆರಿಕೆ ಆಹಾರ ಖಾಯಿಲೆಗೆ ಮೂಲ
ಹೆಣೆದಿಹುದು ಇಲ್ಲಿ ವ್ಯವಸ್ಥಿತ ಜಾಲ
ಅಮೃತವು ಎಂದು ತಿನ್ನುವನು ಹಸಿದವ
ಅದೇ ವಿಷವಾಗಿ ನುಂಗುವುದು ಬಡಪಾಯಿ ಜೀವ.


ಕಲಿಗಾಲ
--------
ಪ್ರೀತಿ ವಿಶ್ವಾಸ ನಂಬಿಕೆ ಸವಕಲು ನಾಣ್ಯ
ಸತ್ಯ ಧರ್ಮ ಅಹಿಂಸೆ ಶಾಂತಿ ನಗಣ್ಯ
ಹಣ ಹೆಸರು ಕೀತರ್ಿ ಪ್ರತಿಷ್ಠೆಯೇ ಗಣ್ಯ
ಸಜ್ಜನರ ಸಾಧನೆ ಸಮಾಜದಿ ಶೂನ್ಯ.


ಸಾಕಾರ ಮೂತರ್ಿ
-------------
ಮಹಿಳೆ ಒಂದು ವಸ್ತುವಲ್ಲ ಒಬ್ಬ ವ್ಯಕ್ತಿ
ಸಂಸಾರದ ಸಾರ ಅರಿತ ದಿವ್ಯ ಶಕ್ತಿ
ಕಷ್ಟ ನಷ್ಟ ಸಂಕಷ್ಟ ಅವಳಿಂದಲೇ ಮುಕ್ತಿ
ಪ್ರೀತಿ ಪ್ರೇಮ ಮಮಕಾರದ ಅಭಿವ್ಯಕ್ತಿ.


ಧರ್ಮದ ಮರ್ಮ
--------------
ಅಧ್ಯಾತ್ಮ ನಮ್ಮ ಸಂಸ್ಕ್ರತಿಯ ಒಳ ತಿರುಳು
ಪಾಶ್ಚಿಮಾತ್ಯರೂ ಆಗುತಿಹರು ಮರುಳು
ಪ್ರಪಂಚದೆಲ್ಲೆಡೆಯೂ ಅವರದೇ ನೆರಳು
ಸತ್ಯ ಧರ್ಮ ನ್ಯಾಯ ಇದ್ದಲ್ಲಿ ಹೊರಳು.


ಕೋಪ
-------
ಕ್ಷಿಪ್ರಗತಿಯಲ್ಲಿ ಅನಾಹುತವೆಗೋ ಸಿಟ್ಟು
ವಿಲಕ್ಷಣ ಕ್ಷಣದಿ ಆಗುವುದದರ ಹುಟ್ಟು
ನಾಶ ಪಡಿಸು ಅದನ ಬೇರು ಸಹಿತ ಸುಟ್ಟು
ಸಾಗದಿರು ಕೋಪದ ಕೈಗೆ ಮನವ ಕೊಟ್ಟು.


ದುಡಿಮೆಯ ಮಹತ್ವ
---------------
ದುಡಿಮೆಯೇ ದೇವರೆಂದು ಬೆವರು ಸುರಿಸಿ 'ದುಡಿ'ಯ
ಸೋಮಾರಿ ಅಲೆದರೆ ಹೀಗಳೆವರು 'ದಡಿಯ'
ತಿರಸ್ಕರಿಸು ಪೋಲಿ ಗೆಳೆಯರಿಂದ ಬಿಡಿಯ
ಕಷ್ಟ ಜೀವಿಯಾದರೆ ಆಸ್ತಿಗೇ ಒಡೆಯ.


ಪಾದುಕಾಶ್ರಮ
----------
ತೀರ್ಥಕ್ಷೇತ್ರಕ್ಕೆ ಹೋಗುವ ವೃಥಾ ಶ್ರಮವೇಕೆ?
ದರ್ಶನ ನೀಡಿರೈ ಪಾದುಕಾಶ್ರಮಕೆ
ಪ್ರಶಾಂತಮಯ ತಪೋನಿಷ್ಠ ಪುಣ್ಯ ಭೂಮಿ
ಭಕ್ತರ ಅಭಿಷ್ಠ ಪೂರೈಸುತಿಹರು ಸ್ವಾಮಿ.


ಶ್ರೀಧರರ ಆರಾಧನೆ
-------------
ಇಲ್ಲ ಸಲ್ಲದ ಯೋಚನೆಯೇಕೆ ಸುಮ್ಮನೆ?
ನಿತ್ಯ ಮಾಡು ಶ್ರೀಧರರ ಆರಾಧನೆ
ಪರಿಹಾರ ನೂರು ತರಹದೆಲ್ಲ ವೇದನೆ
ಮೂಡುವುದು ದೇವರಲಿ ಭಯ ಭಕ್ತಿ ಭಾವನೆ.


ಸಂಘ ಜೀವಿ
-----------
ಸಹೃದಯ ಸಾಧು ಸಜ್ಜನರ ಸಾಂಗತ್ಯ
ಈ ಪೀಳಿಗೆಯ ಜನಕೆ ಬಹುವೇ ಅಗತ್ಯ
ಒಂದು ಗೂಡಿ ಬದುಕು ಸವೆಸಿದವರ ಬಾಳು
ಹೆಮ್ಮರದ ಹೆಜ್ಜೇನ ಗೂಡಂತೆ ಕೇಳು.


ಚಟದಿಂದ ಚಟ್ಟ
------------
ಜೂಜು, ಮೋಜು, ಗುಟಕಾ, ಸಿಗರೇಟು ಬೀಡಿ
ಕೆಟ್ಟ ವ್ಯಸನಗಳ ಕೂಟವ ಬೇಗ ಬಿಟ್ಟು ಬಿಡಿ
ಚಟಕ್ಕಾಗಿ ಕದ್ದರೆ ಕರಗಳಿಗೆ ಬೇಡಿ
ಬೇಡಿ ತಿಂದಾದರೂ ಬದುಕಿ ನೋಡಿ.


ಸ್ವದೇಶೀ ಬಳಕೆ
-------------
ಬಿಡದೆಯೇ ಧರಿಸಿರಿ ದೇಶೀಯ ವಸ್ತ್ರ
ಇದೀಗ ಬರೀ ಬಾಯಿ ಮಾತಿನ ಶಾಸ್ತ್ರ
ವಿದೇಶೀ ಇಂಧನವೇ ಭಾರತದ ಉಸಿರು
ರಫ್ತು, ಆಮದಿರೆ ಆಥರ್ಿಕ ಸ್ಥಿತಿ ಏರುಪೇರು.



ಮಾನವೀಯತೆ
------------
ಮರೆಯದಿರು ಮಾನವಾ ಮಾನವೀಯತೆಯ
ಮನುಷತ್ವಕ್ಕದೇ ಭದ್ರ ಅಡಿಪಾಯ
ದುರ್ಬಲರ ಆಪತ್ತಿಗಾಗುವವ ನಿಜ ಮನುಜ
ಇಂತವ ಸ್ಚರ್ಗಕ್ಕೇರೋ ಆಸೆ ಇಟ್ಟರದು ಸಹಜ


ಅಸತ್ಯದ ಫಲ
------------
ಕಠಿಣ ಕಾರ್ಯ ನುಣುಚಲು ಸುಳ್ಳಾಡುವಾಗ
ಸಂದಿಗ್ಧತೆಯಲಿ ಬಾಯಿಗೆ ಹಾಕಿ ಬೀಗ
ಉದ್ವೇಗದ ಸಮಯ ನಾಲಿಗೆಗಿರಲಿ ಹಿಡಿತ
ಇಲ್ಲದಿರೆ ಸಂಗ್ರಹಿತ ಪುಣ್ಯದಲಿ ಕಡಿತ.


ಸೂತ್ರಧಾರಿ ಮನಸ್ಸು
-------------------
ಸಂಯಮ ಮನಸ್ಥಿತಿಯವ ವಿಶ್ವವನೇ ಗೆದ್ದ
ಶೀಘ್ರ ಕೋಪಿ ಹೊಸ್ತಿಲಲೇ ಎಡವಿ ಬಿದ್ದ
ಎಲುಬಿಲ್ಲದ ನಾಲಿಗೆ ನಿಮಿತ್ತ ಮಾತ್ರ
ಸಕಲವೂ ಮನಸ್ಸೇ ಹೆಣೆಯುವುದು ಸೂತ್ರ.


ಮಹಾಮಾತೆ
-----------
ದೇವನೊಬ್ಬನೇ ಈ ಜಗತ್ತಿನ ಕತರ್ೃ
ಭೂತಾಯಿಯೊಬ್ಬಳೇ ಜಗಕೆಲ್ಲ ಮಾತೃ
'ಶಸ್ತ್ರ' ವಿಶ್ವಕ್ಕಂಟಿದ ಏಕೈಕ ಶತ್ರು
ಕತರ್ೃ ಮಾತೃ ನೋಯಿಪನ ಕೇಳ್ವರಿಲ್ಲ ಸತ್ರು.


ಸಬಲೆ
-------
ಬರೀ ಮನೆ ವಾತರ್ೆ ಕೆಲಸ ತರವಲ್ಲ ಬಾಲೆ
ನಿನಗಾಗಿಯೇ ತೆರೆದಿದೆ ಸುಂದರ ಶಾಲೆ
ಮಹಿಳೆಗಂಟಿದ ಸೋಂಕು 'ಅನಾಥೆ, ,ಅಬಲೆ,
ವಿದ್ಯೆ ಕಲಿತರೆ ನೀ ಸಮೃದ್ಧ ಸಬಲೆ.


ದೇಶದ ಆಸ್ತಿ
---------
ಸಾಕ್ಷರತೆ ಸಾಧಿಸಿದಲಿ ನೀ ನಿಜ ಜಾಣೆ
ಆಗ 'ಅನಾಥೆ ಅಬಲೆ' ಈ ಶಬ್ಧ ಕಾಣೆ
ಸುಶೀಕ್ಷಿತರೇ ದೇಶಕೆ ಸಮರ್ಥ ಆಸ್ತಿ
ಮಾಡಲಿಚ್ಚಿಸುವರೆಲ್ಲ ಅವರದೇ ದೋಸ್ತಿ.


ಅಕ್ಷರ ವೃಕ್ಷ
--------------
ತೊಡಲು ಅಕ್ಷ ಮಾಲೆಗಳೊಂದಿದ್ರೆ ಸಾಕು
ಕೊರಳಿಗೆ ಇತರೇ ಹಾರ ಇನ್ನೇಕೆ ಬೇಕು
ಎದ್ದು ಕಾಣಲು ಅಕ್ಷರ ಅಲಂಕಾರ ತೊಡಿ
ಅಕ್ಷರ ವೃಕ್ಷಗಳ ಕಂಡ ಕಂಡಲ್ಲಿ ನೆಡಿ.


ಪೋಲಿಯೋ
---------
ಅಂಗವಿಕರಲ್ಲಿ ಮೂಡಿರಲಿ ಅನುಕಂಪ
ಕೈಲಾಗದವರು ಎಂದು ತೋರದಿರಿ ಕೋಪ
'ಪೋಲಿಯೊ' ಮನುಜ ಕುಲಕ್ಕಂಟಿದ ಶಾಪ
ಒಂದಾಗಿ ಕರ ಪಿಡಿದು ನಡೆಸೋಣ ಪಾಪ.


ದುಡಿಮೆ
--------
ಜಮೀನು ಇರೋದ್ಮಾತ್ರ ಕೆಲವೇ ಗುಂಟೆ
ಇರದಿದ್ರೆ ಅಕ್ಕಪಕ್ಕದವರ ತಂಟೆ
ಕೈಲಿದ್ದರೆ ಎತ್ತು, ನೊಗ, ನೇಗಿಲು, ರೆಂಟೆ
ಮನಸ್ಪೂತರ್ಿ ದುಡಿವೆ ದಿನದೆಲ್ಲ ಗಂಟೆ.


ಮಹಾದ್ವಾರ
---------
ಪಾಠಿ ಪುಸ್ತಕ ಚೀಲ ಹೊರಲೇಕೆ ಭಾರ?
ಶಾಲೆಯೇ ಭವಿಷ್ಯಕೆ ಮೂಲ ದ್ವಾರ
ವಿದ್ಯಾಥರ್ಿ ಜೀವನ ಬದುಕಲೇ ವಿಭಿನ್ನ
ವಿದ್ಯೆಯೇ ನೀಡುವುದು ನಿರಂತರ ಅನ್ನ.


ಭಾಗ್ಯ
-----------
ಮನಃಶುದ್ಧಿ ಮನುಜಗೆ ಎಲ್ಲಕ್ಕಿಂತ ಮುಖ್ಯ
ಸುಲಭದಲಿ ಆತ್ಮ ಭಗವಂತನೊಳು ಐಕ್ಯ
ಪುಣ್ಯವಂತಗೆ ಬೇಕೇ ಇದಕ್ಕಿಂತ ಭಾಗ್ಯ
ಜನಕೆ ಉಪದೇಶಿಸಲಿವ ಪರಿಪೂರ್ಣ ಯೋಗ್ಯ.


ಅಂತರಂಗ ಶುದ್ಧಿ
---------------
ಚೊಕ್ಕಚೊಕ್ಕ ಇದು ಬಹಿರಂಗದೆಡೆಗೆ?
ಅಂತರಂಗ ಕಲ್ಮಶಗಳ ಮೊದಲು ತೊಡೆ
ಭೋಗ ತೊರೆದ ಪ್ರಾಧಾನ್ಯತೆ ಭಕ್ತಿಗೆ ನೀಡಿ
ವ್ಯಸನದಿಂ ದೂರವಿದ್ದು ಜಪತಪ ಮಾಡಿ.


ವ್ಯಸನ ಮುಕ್ತ ಸಮಾಜ
-----------------
ಒಮ್ಮೆ ಯೋಗಾಭ್ಯಾಸದ ಕಡೆ ಮುಖ ತೋರು
ಆಗ ನೀ ಚಿತ್ತ ಚಾಂಚಲ್ಯದಿಂದ ಪಾರು
ಸಂಧಿಗ್ಧತೆಯಲ್ಲೂ ಸುಳ್ಳಾಡ ಬೇಡ
ವ್ಯಸನ ಮುಕ್ತ ಸಮಾಜ ಅದೆಂಥ ಸದೃಢ.


ಸುಜ್ಞಾನದ ಗೂಡು
-----------
ಅನಕ್ಷರತೆ ಇದುವೇ ಅಜ್ಞಾನದ ಜೀಡು
ಇದ ಬದಲಿಸಿದಲ್ಲಿ ಸುಜ್ಞಾನದ ಗೂಡು
ಸರ್ವರೂ ಸೇರಿ ಹಾಡಿ ಸಾಕ್ಷರತೆಯ ಹಾಡು
ಅನುದಿನವೂ ವಿದ್ಯೆಯ ಕಲಿಕೆಗಾಗಿ ಓಡು.


ಸ್ವಾತಂತ್ರ್ಯ ಚಳುವಳಿ
--------------
ಭಾರತದ ದಿಟ್ಟ ಹೋರಾಟಗಾರರ ಛಲ
ಇಂದಿಗೂ ಮರೆಯದೆ ಉಳಿದಿದೆ ಅಚಲ
ದೇಶದ ಅಭ್ಯುದಯಕೆ ಸಮೃದ್ಧ ಬಲ
ಈ ಪೀಳಿಗೆ ಜನ ಸುಖಲೋಪಾದಿ ಕುಶಲ.


ದೇಶ ಪ್ರೇಮ
---------
ದೇಶ ಸೇವೆಗೆಂದು ಹೋರಾಡಿ ಮಡಿವುದು
ಭಾರತಾಂಬೆಯ ಜೀವ ನಿಮಗಾಗಿ ಮಿಡಿವುದು
ಇತಿಹಾಸದ ಪುಟದಿ ಮಿಂಚುವ ದೇಶಪ್ರೇಮಿ
ಧನ್ಯವಾಯಿತು ಭರತ ಖಂಡದ ಭೂಮಿ.


ತ್ರಿವರ್ಣ ಧ್ವಜ

-----------
ಜಯ ಘೋಷದ ಹಾರಿಸೋ ನಮ್ಮ ಧ್ವಜ
ಓ ಭಾರತೀಯ ದೇಶ ಭಕ್ತ ದಿಗ್ಗಜ
ಅಶೃದ್ಧೆ ತೋರಿದರೆ ಖಂಡಿತಾ ಸಜೆ
ತಪ್ಪಿದರೆ ಅಧಿಕಾರಿಗಳಿಗೆ ಧೀರ್ಘ ರಜೆ.


ನಂದಾ ದೀಪ
-----------
ದೇವರೆದುರು ಬೆಳಗಿಸಿ ನಂದದಾ ದೀಪ
ಪೂಜಿಸಿ ಪುಷ್ಪಗಂಧ ಮಂಗಲ ಲೇಪ
ಜೀವನದಿ ಸತ್ಯ ನುಡಿಯಲು ಸಂಕಲ್ಪ
ಬಾಳಿನಲ್ಲಿ ನೀವಾಗಲಾರಿರಿ ಎಂದೂ ಅತ್ಯಲ್ಪ.


ಸ್ಚರ್ಣವಲ್ಲಿಗೆ
-----------
ವರ್ಷಕ್ಕೆ ಒಮ್ಮೆ ದೀಪಾರಾಧನೆ ಕಾಣಿಕೆ
ಜಂಜಾಟದಲಿ ಮರೆತು ಬಿಟ್ಟೀರಿ ಜೋಕೆ
ಸೇಗೈಯಿರಿ ನಿಮ್ಮ ಪಾಲನ್ನು ಇಟ್ಟು
ಆಥರ್ಿಕ ದೈವಿಕವಾಗಿ ಭದ್ರ ನೆಲಗಟ್ಟು.


ಮಠಕ್ಕೆ ಅಕ್ಕಿ
----------
ಅನ್ನಕ್ಕಿಡುವಾಗ ಇಡಿರಿ ಮುಷ್ಠಿ ಅಕ್ಕಿ
ಆದಾಯ ಉಳಿಯದು ಮಠದಿ ಮಿಕ್ಕಿ
ಆರೋಗ್ತ ಸಂಪನ್ನ ಸಮೃದ್ಧ ಕೇಳು
ಅಂಧಕಾರ ತೊಲಗಿ ಬೆಳಗುವುದು ಬಾಳು.


ಭಕ್ತಿ ರಸ
----------
ಮುಸ್ಸಂಜೆಯಲಿ ದೀಪ ಬೆಳಗಿ ಧೂಪ ತೋರು
ಭಕ್ತಿಯಲಿ ದೇವರನು ಕರ ಮುಗಿದು ಕೋರು
ಗತ ಪೂರ್ವದ ಅರಿಯದ ತಪ್ಪನು ತೊಳೆದು
ತಾಳ್ಮೆಯಲಿ ಬಾಳು ಭಕ್ತಿ ರಸವ ಸವಿದು.


ದಾಂಪತ್ಯ
--------
ಅರಿತು ಸಂಯಮದಿ ನಡೆಸಿದರೆ ಸಂಸರ್ಗ
ದಾಂತ್ಯದಾ ದಾರಿಯು ಸುಲಭ ಸ್ವರ್ಗ
ಹೇಳ ಹೆಸರಿಲ್ಲದಾಗುವುದು ಏಡ್ಸು
'ಸಂಸಾರ' ಹೈವೆಯಲಿ ಹರಿಯುವಾ ಗೂಡ್ಸು.


ಸಾಹಿತ್ಯ ಮಂಥನ
-------------
ಕವಿಯಾದೆನಾ! ಎಂದು ಕೇಳುವುದೇಕೆ ಕಣಿ?
ಕಾರಂತ, ಕುವೆಂಪು, ದಿನಕರ, ಕಾಯ್ಕಿಣಿ
ಮಹಾನ್ ಕವಿವರ್ಯರಾ ಸಾಹಿತ್ಯ ಮನನ
ಮಾಡಿದರೆ ಬರೆಯಲಿಚ್ಚಸುವೆ ಖಂಡಿತಾ 'ಕವನ'


ಉಳಿತಾಯ
--------
ಬೇಳೆ, ಕಾಳು ಕಡಿ, ಜೀರಿಗೆ, ಮೆಣಸು, ಸಾಸಿವೆ
ಈ ಕರಡಿಗೆಗಳಲ್ಲೇಕೆ ಹಣ ಅಡಗಿಸಿಡುವೆ?
ವನಿತೆಯರೇ ಕಟ್ಟಿರಿ ಸ್ವ ಸಹಾಯ ಗುಂಪು
ಉಳಿತಾಯದ ಹಣದಿ ನಿಮ್ಮ ಸಂಸಾರ ಸಂಪು.


ದೈವ ಬಲ
-----------
ಸ್ಚ ಕ್ಷೇತ್ರದಲ್ಲಿ ದೈವಗಳ ಪ್ರತಿಷ್ಠೆ
ತಪ್ಪದೇ ನಡೆಸಿದಲ್ಲಿ ನೇಮ ನಿಷ್ಠೆ
ಸತ್ಕಾರ್ಯಗಳಲ್ಲಿ ಬರುವುದು ಬೀಮಬಲ
ಜೀವಿತಾದ್ಯಂತ ಮೇರು ಕೀತರ್ಿ ಉಜ್ವಲ.


ಪಾನ ನಿಷೇಧ
----------
ಹಳ್ಳೀ ಹೈದ ಗಮಾರ, ಲೊಳಲೊಟ್ಟೆ
ಅವನ ಎಟ್ಟೆಯಾಗಿರಿಸುವುದು ಆ 'ಕೊಟ್ಟೆ'
ಎಂದು ಜಾರಿಗೆ ಬರುವುದೋ 'ಪಾನ ನಿಷೇಧ'?
ಆವರೆಗೂ ಏಳಲಾರದು ಬಡವನಾ ಸೌಧ.


ಸಾತ್ವಿಕತೆಯ ಶಕ್ತಿ
---------------
ಪ್ರೇತ ಭೂತಗಳ ಭಯವೇತಕ್ಕೆ ಮಿತ್ರ?
ಪೂತರ್ಿ ದಿನ ಜಪಿಸುವಾ ಗಾಯತ್ರಿ ಮಂತ್ರ
ಭಯವ ಓಡಿಸಲಿಹುದು ಸಾತ್ವಿಕತೆಯ ಶಕ್ತಿ
ನಮ್ಮಿಚ್ಚೆಯಂತೆ ಸಿಗಬಹುದು ಕೊನೆಗೆ ಮುಕ್ತಿ.


ಕಿಮ್ಮತ್ತು
----------
ಏರುತಿಹವು ದಿನ ನಿತ್ಯ ಬಳಕೆಯ ವಸ್ತು
ಸಾಮಾನ್ಯ ಜನರಿಗೋ ಬಡಿದಿರುವುದು ಸುಸ್ತು
ಮಾಯವಾಗಿದೆ ಈಗ ಗತ ಕಾಲದ ಗಮ್ಮತ್ತು
ಕಳೆದುಕೊಂಡಿಹನು ಹಣಕಾಸಿನಲಿ ಕಿಮ್ಮತ್ತು.


ವೆನಿಲ್ಲಾಕ್ಕೆ ದರ ಬಂದಾಗ
---------------
ತಿರುಗಿದರೆ ಗಸ್ತು, ದಿನ ರಾತ್ರಿ ಹೊತ್ತು
ಉಳಿಯುವುದು ತೋಟದಲಿ ವೆನಿಲ್ಲಾ ಸೊತ್ತು
ಈ ಬೆಳೆಗೆ ದರವೇನೋ ವಿಪರೀತ ಬಂತು
ಬೆಳೆಗಾರನಿಗೆ ಮಾತ್ರ ಜೀವ ಭಯದ ಜಂತು.


ಕಲಿಗಾಲದ ಮಹತ್ವ
---------------
ಪಾಪಕರ್ಮಗಳು ಪಿತ್ರಾಜರ್ಿತವಲ್ಲ
ಸಿಗದು ಹಿಂದಿನ ಜನ್ಮಗಳ ಪುಣ್ಯವೆಲ್ಲ
ಮಾಡಿದಂತಹ ಕೆಟ್ಟ ಕೆಲಸಗಳ ಫಲ
ಉಣಿಸಿಯೇ ತೀರುತ್ತದೆ ಈ ಕಲಿಗಾಲ.


ಮರಕೋತಿಯಾಟ
----------------
ಹತ್ತಿರ ಬರುತ್ತಿದ್ದ ಹಾಗೇ ಇಲೆಕ್ಷನ್
ರೂಪಾಯಿ ಸಾರಾಯಿಗಳ ಜಂಗೀ ಕಲೆಕ್ಷನ್
ಪಕ್ಷದಿಂದ ಪಕ್ಷಕ್ಕೆ ಮರಕೋತಿಯಾಟ
ಚುನಾವಣೆಯಲ್ಲಿ ಸೋತಾಗ ಮುಗಿಯಿತವರ ಆಟ.


ನುಸಿ ಪೀಡೆ
----------
ಸದ್ದಿಲ್ಲದೆ ನುಸಿ ಪೀಡೆಯೆಂಬಾ ಮಾರಿ
ಎರಗಿಹುದು ಮರದಿಂದ ಮರಗಳಿಗೆ ಹಾರಿ
ಅತ್ಯಲ್ಪವು ಕಲ್ಪವೃಕ್ಷಗಳಿರದ ತೋಟ
ನುಂಗಲಾಗದು ತೆಂಗಿರದ ಅಡಿಗೆಯೂಟ.


ಇಂಧನ ಉಳಿಸಿ
------------
ಶಹರದೆಡೆ ವಾಹನಗಳ ಭಾರೀ ಲಗ್ಗೆ
ಸುಟ್ಟು ಹಾರುವುದು ಇಂಧನದ ಹೊಗೆ ಬುಗ್ಗೆ
ಇಂಧನ ದರ ಅಗ್ಗ ಇದು ಹಗಲುಗನಸು
ಇದನ್ನರಿತು ಮಿತವ್ಯಯಗೊಳಿಸಿ ಬಳಸು.


ಬಡವನ ಗೋಳು
-----------
'ಓಟು ಕೊಡಿ' ಎಂದು ಕೇಳ ಬರುವರಿವರು ಭಿಕ್ಷೆ
ಗೆದ್ದ ಬಳಿಕ ನುಂಗಲು ಹಾಕ್ತಾರೆ ನಕ್ಷೆ
ಗಾಢಾಂಧಕಾರದಲ್ಲಿ ಬಡವನಾ ಬಾಳು
ಇವನ ಗೋಳು ಕೇಳುವರ್ಯಾರಿಹರು ಹೇಳು.


ಜಾತ್ರೆಯಲ್ಲಿ
----------
ಮಾರೆಮ್ಮನ ದರ್ಶನವಾದರೆ ಸಾಕೇ?
ಎಂದು ಹಾದಿಬದಿಯಲಿ ತಿಂದೀರಿ ಜೋಕೆ!
ಬೆಳೆಸಿದಲ್ಲಿ ಕ್ರಿಮಿಕೀಟಗಳ ಸಂತತಿ
ದೇಹದಾರೋಗ್ಯ ಹೊಂದಲಿಹುದು ಅವನತಿ.


ಜಾತ್ರೆ ವೇಳೆ
-----------
ನೆನಪಿರಲಿ ಅಮ್ನೋರ ಕಾಣಿಕೆಯ ಹುಂಡಿ
ಕಣ್ಹಾಯಿಸದಿರು ಹಾದಿಬದಿಯ ಉಂಡಿ
ಮತ್ತೆ ತಿಂದಲ್ಲಿ ಐಸ್ಕ್ರೀಮು ಐಸ್ಕೇಂಡಿ
ತಡವಿಲ್ಲದೇ ಬರುವುದು ಮೂಗು ಮಟ ಥಂಡಿ.


ಜಾತ್ರಾ ವಿಶೇಷ
-----------
ಮಧುಮೇಹಿಗಳಿಗೆಲ್ಲ ಮಿಠಾಯಿ ರದ್ದು
ಬಳೆ ಪೇಟೆಗೆ ಹೋದವಗೆ ಪೋಲೀಸರ ಗುದ್ದು
ನಾಟಕ ಸಿನೇಮ ಸರ್ಕಸ್ಸು ಬಲು ಬೋರು
ಜೂಜು ಮೋಜಾಡಿದರೆ ಮನೆ ತನಕ ದೂರು.



ಜಾತ್ರಾ ಮಜ
----------
ಪುಂಡಾಟಿಕೆ ಜನರಿಗೆ ಮಾತ್ರವೀ ಜಾತ್ರೆ
ಕುಣಿದು ಕಪ್ಪಳಿಸುವವರಿಗೆ ಮೋಜಿನಾ ಯಾತ್ರೆ
ರಾತ್ರಿ ಬೆಳಗು ಮಾಡಲು ಸ್ಥಳಿಕರಿಗೆ
ತಪ್ಪದೇ ನುಂಗಬೇಕು ನಿದ್ದೆಯ ಗುಳಿಗೆ.


ದರ ಏರಿಕೆ
----------
ಏರುತಿದೆ ದಿನ ಬಳಕೆ ವಸ್ತುಗಳ ಬಿಲ್ಲು
ಜನಸಾಮಾನ್ಯರ ಜೀವನವು ಬಹಳ ಡಲ್ಲು
ಪೇಟೆಗೆ ಓಡಾಡಲೆಂದು ಬರುವದೇ ಚೆನ್ನ
ಜೇಬೆಲ್ಲ ಖಾಲಿ ಖರೀದಿ ಮಾತ್ರ ಸೊನ್ನೆ.


ಮೀಸಲಾತಿ
---------
'ಮೀಸಲು' 'ಮೀಸಲಾತಿ' ಎಂಬ ಸವಲತ್ತು
ರಾಜಕೀಯ ಪ್ರೇರಿತ ಕಿರು ಮಸಲತ್ತು
ಮೀಸಲಾತಿಯ ಇತಿಮಿತಿಗಿರಲಿ ಒಂದು ಸಮೀತಿ
ಸ್ವ ಸಾಮಥ್ರ್ಯದಿ 'ಉನ್ನತಿ' ಬಂದರದೇ 'ಕೀತರ್ಿ'


ಧರ್ಮ ಶಾಸ್ತ್ರ
---------
ಕಂಠ ಪಾಠದಿ ಜಪಿಸಿ ಶ್ರೀ ದೇವಿಯ ಸ್ತೋತ್ರ
ದಿನವೂ ಮನನ ಮಾಡಿ ಸಕಲ ಧರ್ಮ ಶಾಸ್ತ್ರ
ತಪ್ಪದೇ ಪಾಲಿಸಿದರೆ ಇವಿಷ್ಟು ಸೂತ್ರ
ಭಯವ ಓಡಿಸಲು ಸಾಕು ಇದೊಂದೇ ಅಸ್ತ್ರ.


ಅಂಪೈರ್ ಬಳಿ ಮುನಿಸಿಕೊಂಡ ಕ್ರಿಕೇಟಿಗ
-------------------------
ಔಟಾದರೆ ಅಂಪೈರ್ ಮೇಲೇಕೆ ಆರೋಪ?
ಧಮ್ಮಿದ್ದರೆ ಆಟದಿ ತೋರು ಪ್ರತಾಪ
ಬಂದರೂ ಬರಲಿ ಬಿಡು ವೀರೋಚಿತ ಸೋಲು
ಆಗಲೂ ಗಳಿಸುವೆ ಪ್ರೇಕ್ಷಕರಾ ಒಲವು.


ಅವಿಭಕ್ತ ಕುಟುಂಬ
--------------
ಅತ್ತೆ, ಮಾವ, ಭಾವ, ನಾದಿನಿಯರ ಕಾಟ
ಇಹುದೆಂದು ಬಿಡದಿರಿ ಸಪರಿವಾರ ಕೂಟ
ಅವಿಭಕ್ತ ಕುಟುಂಬವು ಅವಿಭಾಜ್ಯ ಅಂಗ
ಮಾರ್ಗದರ್ಶಕರಿರದೇ ಬಾಳುವುದು ಹೆಂಗ?


ಮಮಕಾರ
-----------
ಮಗನೋರ್ವನೆಂದು ಮಮಕಾರವೇ ಒಡಿಯ
ಬರೀ ಇವನದು ಕ್ರಿಕೆಟ್, ಕಾಮೆಂಟ್ರಿ, ರೇಡಿಯ
ಕೊಬ್ಬಿದವನ ಕಡಿದರೆ ನಾಲ್ಕಾಳು ದಡಿಯ
ಬೈದು ಬುದ್ದಿ ಹೇಳಲೇತಕ್ಕೆ ಬಿಡಿಯ.


ಕನ್ನಡದ ಕಲಿ
----------
ದಿನಗೂಲಿ ಮಕ್ಕಳೇ ಆಡುವಿರಾ ಗೋಲಿ?
ಶುದ್ಧ ಪೋಲಿಗಳೆಂದು ಮಾಡುವರು ಗೇಲಿ
ಜೀವನದಿ ಸದ್ವ್ಯಕ್ತಿ ಆಗ ಬಯಸಿದಲ್ಲಿ
ಶ್ರಮದು ಕಲಿತು ಆಗು 'ಕನ್ನಡದ ಕಲಿ'


ನೀರಿಂಗಿಸಿ
----------
ಹೊಯ್ದೊಡನೆ ಮಳೆಗಾಲದ ಮೊಟ್ಟ ಮೊದಲ ಹದ
ಭದ್ರಪಡಿಸಿ ಕೆರೆ ಕೋಡಿ ಕಟ್ಟುಗಳ ಬದ
ಓಡೋ ನೀರ ತಡೆದು ನಿಲ್ಲಿಸಿ ಇಂಗಿಸಿ
ಮುಂದೆಂದೂ ತಟ್ಟದು 'ಜಲಕ್ಷಾಮದ ಬಿಸಿ.


ಜಪ
------
ಯಾವ ದೇವಾಲಯಕೆ ಸಂದರೂ ಕಾಣಿಕೆ
ನೆರವೇರುವುದು ನಿಮ್ಮಯ ಎಲ್ಲ ಕೋರಿಕೆ
ಜಪಿಸಿ ಮೃತ್ಯುಂಜಯ ಜಪಮಾಲಿಕೆ
ದೂರವಾಗುವುದು ಯಮಧರ್ಮನಾ ಕುಣಿಕೆ.


ಬ್ರಷ್ಠಾಚಾರ
---------
ಹೊಡೆದೋಡಿಸಿ ಬ್ರಷ್ಠಾಚಾರವೆಂಬ ಭೂತ
ಎಳೆದು ತಂದು ಹಾಕಿ ಕತ್ತರಿಸಿದಂತೆ ಹೋತ
ಸುಟ್ಟರೂ ಚಿಗುರುವುದು ಫಿನಿಕ್ಸಿನಂತೆ
ಜಗದಿ ತುಂಬಿ ಹೋಗಿದೆ ಅದರದೇ ಸಂತೆ.


ಮನೋಕಾಮನೆ
-------------
ನಿಷ್ಕಲ್ಮಶ ಮನದಿ ದೈವದ ಸಾನಿಧ್ಯ-
-ದಲ್ಲಿದ್ದು, ಪಠಿಸಿ ಸಕಲ ವೇದ ವೈವಿಧ್ಯ
ಮಾಡಿ ದೈವಾರಾಧನೆ ದಿನ ಸಮಾರಾಧನೆ
ನೆರವೇರುವುದಾಗ ಸಕಲ ಮನೋಕಾಮನೆ.


ಮೂಲ
-------
ಆತ್ಮೋನ್ನತಿಯ ಮೂಲ ವೇದೋಪನಿಷತ್ತು
ಸತ್ಪುರುಷರಲ್ಲಿ ಸಮೃದ್ಧಿ ಈ ಸ್ವತ್ತು
ಸದ್ಭಕ್ತಗೆ ಸಿದ್ದಿಸಿದ ಮಂತ್ರದ ಮರ್ಮ
ಫಲಾಪೇಕ್ಷೆಯಿರದೇ ಮಾಡುವಾ ಕರ್ಮ.


ಮಂತ್ರವೇ ಮದ್ದು
------------
ಜಪತಪಗಳಿಂದ ಮನೋವಿಕಾರವ ತಿದ್ದು
ಮನಸ್ಸಿನ ನಿಯಂತ್ರಣಕೆ ಮಂತ್ರವೇ ಮದ್ದು
ಸತ್ಸಂಪ್ರದಾಯಕೆ ಸುಭದ್ರ ಅಡಿಪಾಯ
ತಪ್ಪದೇ ಪಾಲಿಸಿದಲ್ಲಿ ಉನ್ನತ ಧ್ಯೇಯ.


ಜ್ಞಾನ
-----
ಸತ್ಸಂಗವು ಮುಕ್ತಿಯ ಮೊದಲ ಸೋಪಾನ
ಎಲ್ಲಕ್ಕಿಂತ ಪವಿತ್ರ ತೀರ್ಥ ಸ್ನಾನ
ಸಮಗ್ರ ವಿಶ್ರಾಂತಿಯೇ ಮೌನ ಧ್ಯಾನ
ಅತ್ಯಂತ ತಿಳುವಳಿಕೆಯೇ ದಿವ್ಯ ಜ್ಞಾನ.


ರೈತ ಮತ್ತು ಆತ್ಮಹತ್ಯೆ
---------------
ಜಗತ್ತಿನ ನಿಜವಾದ ಜಗದ್ಗುರು ರೈತ
ಈಗ ಅಡ್ಡಾಡುತಿಹವು ಅವನದೇ ಪ್ರೇತ
ಸಾಲವೇ ಇರಿಯಿತವನಿಗೆ ಶೂಲವಾಗಿ
ದುರಂತ ನಾಯಕನಾಗಿ ಹೋದ ನೇಗಿಲಯೋಗಿ.

ಮೋಕ್ಷ
---------
ಕ್ಷಣ ಮಾತ್ರದಿ ಪಾಪಿಷ್ಠ ರೋಗಿ ಸಾಯ್ತ!
ತಿಳಿತಿಳಿದು ಮತ್ತೇಕೋ ಕಟ್ಟುವಿರಿ ತಾಯ್ತ?
ದೇಹ ಸತ್ತು ಆತ್ಮದ ಬಿಡುಗಡೆಯೇ ಮೋಕ್ಷ
ಇದನ್ನರಿತು ಮುನ್ನಡೆದ ಮನುಜ ನಿಜ ದಕ್ಷ.


ಚಿಂತನೆ
--------
ಆಧ್ಯಾತ್ಮಿಕತೆಯಿಂದ ಮಾನಸಿಕ ನೆಮ್ಮದಿ
ಯೋಗ ಧ್ಯಾನ ಚಿಂತನೆಯಿಂದ ಸಮೃದ್ಧಿ
ದುವರ್ಿಚಾರ ದುವರ್ಾಕ್ಯ ಮೊದಲು ಕೊಲ್ಲಿ
ದೇವನಿರಲ್ಲ ಅರಿಷಡ್ವರ್ಗಗಳಿರುವಲ್ಲಿ.


ದೈವ ಕೃಪೆ
---------
ಮದ ಮೋಹ ಮತ್ಸರಗಳಿಗೆ ಪ್ರಹಾರ
ಸತ್ಯ ನಿಷ್ಠೆ ನ್ಯಾಯದ ಲಘು ಉಪಹಾರ
ಕೃಪೆ ತೋರುವನಾಗ ಶ್ರೀ ಸರ್ವ ಶಕ್ತ
ಆಗ ಕಷ್ಟ ನಷ್ಟ ಸಂಕಷ್ಟ ವ್ಯಾಧಿ ಮುಕ್ತ.


ಸಂಪತ್ತು
-----------
ಸಂತೋಷಕ್ಕೆ ಮಿಗಿಲಾದ ಸಂಪತ್ತಿಲ್ಲ
ಖುಷಿಯಿಂದ ಆದಂತಹ ಆಪತ್ತಿಲ್ಲ
ಅದ್ಯಾವ ಕಳ್ಳನೂ ಕದಿಯಲಾರನಲ್ಲ
ಇದ ತಿಳಿದರೆ ಜೀವನವೆಲ್ಲ ಬೇವೂ ಬೆಲ್ಲ.


ದೈವದೊಲವು
----------
ಸಾಧಸಿದರೆ ಅರಿಷಡ್ವರ್ಗಗಳ ಗೆಲುವು
ಸಿಗುವುದು ಸಮಸ್ತ ದೇವತೆಗಳಾ ಒಲವು
ಆಸೆ ಆಮಿಷದ ಚಂಚಲ ಚಿತ್ತ ಮನಸ್ಸು
ಸಿದ್ದಿಸದು, ಗತಿಸಿದರೂ ಅದೆಷ್ಟೇ ವಯಸ್ಸು.


ಯೋಗವೊಂದು ಯಾಗ
---------------
ಮನೋನಿಗ್ರಹಕೆ ಸುಲಭ ಸಾಧನ ಯೋಗ
ರೋಗಗಳ ತವರೂರಾಗಲು ಮೂಲ ಭೋಗ
ಜನುಮ ಜನುಮದ ಇಷ್ಟಾರ್ಥ ಸಿದ್ಧಿಗೆ ಯಾಗ
ಪಾಪ ಪುಣ್ಯದಲಿ ಯಾರೂ ಕೇಳರು ಭಾಗ.


ಶ್ರೀಧರ ಸಂದೇಶ
---------------
ಕೋಶ ಓದಿ ದೇಶ ತುರುಗಿ ಸಿಗದೇ ಮುಕ್ತಿ
ಶುದ್ದ ಮನದಿಂ ಒಸರಿ ಬರಬೇಕು ಭಕ್ತಿ
ಒಲುಮೆಯಲಿ ಓದು ಶ್ರೀಧರ ಸಂದೇಶ
ದುವರ್ಿಚಾರ ದುಗರ್ುಣ ಖಂಡಿತಾ ನಾಶ.


ದೈವ ನಿಷ್ಠೆ
------------
ಇಷ್ಟ ದೈವದಲಿ ಕಷ್ಟದಲೂ ನಿಷ್ಠೆಯಿಡಿ
ಕ್ಲಿಷ್ಟವೀ ದೈವ ಸ್ಮರಣೆ ಸ್ಪಷ್ಟ ಹೊಡಿ
ಅನಿಷ್ಠ ದುರಾದೃಷ್ಟವ ಕನಿಷ್ಠ ಮಾಡಿ
ಮಿಂಚಿನಂತ ಅದೃಷ್ಟವ ಎದುರು ನೋಡಿ.


ಆಧ್ಯಾತ್ಮದ ಅಭಾವ
--------------
ನೆಮ್ಮದಿಯ ಬದುಕಿಗೆ ಆಧ್ಯಾತ್ಮವೇ ಮದ್ದು
ಸಾಧಿಸು ಅರಿಷಡ್ವರ್ಗಗಳ ನೀ ಗೆದ್ದು
ಭಗವಂತನ ನೆರಳಿನಲಿ ನಡೆದರೆ ಸಮರ್ಥ
ಆಧ್ಯಾತ್ಮದ ಅಭಾವ ಕಾದಿದೆ ಅನರ್ಥ.


ಸಾಮರಸ್ಯ
-----------
ಒಂಟಿ ಜೀವಕೆ ಮದುವೆ ಎಂಬಾ ಮೂರ್ಗಂಟು
ಪ್ರೇಮ ಕಾಮ ಬಾಂಧವ್ಯದ ಬೆಸುಗೆ ಈ ನಂಟು
ಸಂಸಾರವಿದೋ ಜೋಡೆತ್ತಿನಾ ಬಂಡಿ
ಸತಿಪತಿ ಸೇರಿ ಸಾಗೋ ಸಾಮರಸ್ಯದ ಗಾಡಿ.


ಸಾವಯವ ಕೃಷಿ
--------------
ಸರಕಾರಿ ಗೊಬ್ಬರದ ಅಬ್ಬರದ ಬಳಕೆ
ಸೂಕ್ಷ್ಮಾಣು ಜೀವಿಗಳ ಕುಲಕ್ಕೇ ಕುಣಿಕೆ
ಬೆಳೆದ ಆಹಾರ ದೇಹಕ್ಕೆ ಮಾರಕ
ಸಾವಯವ ಬಳಕೆ ಎಲ್ಲಕ್ಕೂ ಪೂರಕ.


ಸ್ವಾಭಿಮಾನ
------------
ದಂಪತಿಗಳೇ ಸಮರ ರಹಸ್ಯ ಅದುಮಿಕೊಳ್ಳಿ
ಆಗ ಚಿಗುರೀತು ಸಾಮರಸ್ಯದ ಬಳ್ಳಿ
ಸ್ವಾಭಿಮಾನ, ಪ್ರತಿಷ್ಠೆ, ಅಹಂ ಬಿಟ್ಟು
ಪ್ರೀತಿ ವಿಶ್ವಾಸದ ಆಶಾಸೌಧವ ಕಟ್ಟು.


ಭಕ್ತನ ಯೋಗ
---------------
ಧ್ಯಾನ ಚಿಂತನೆನೆ ಮನಸ್ಸು ಅಣಿಯಾದಾಗ
ದುವರ್ಿಚಾರ ಪಲಾಯನಗೈವವು ಬೇಗ
ಫಲಪ್ರಾಪ್ತಿ, ನೆರವೇರಿದಂತೆ ಯಾಗ
ಸಧ್ಬಕ್ತರಿಗೆ ಬೇಕೇ ಇದಕ್ಕಿಂತ ಯೋಗ.


ಸುಜ್ಞಾನ
----------
ಜ್ಞಾನಾರ್ಜನೆಗೆ ಬೇಕು ಗುರುವಿನ ಓಲೈಕೆ
ಶಾಂತಿ ಸಂಯಮ ತ್ಯಾಗ ಭಕ್ತಿಯ ಆರೈಕೆ
ವಿದ್ಯೆಯೊಲಿಯೆ ಮೊಗದಿ ಮಂದಸ್ಮಿತ ಕಾಂತಿ
ಅವನತಿ, ಅಜ್ಞಾನ ಮೂಢ ನಂಬಿಕೆಯ ಭ್ರಾಂತಿ.


ಧಾಮರ್ಿಕ ಪರಂಪರೆ
---------------
ದುವ್ರ್ಯಸನಗಳೆಂಬುದು ಭಯಾನಕ ಹದ್ದು
ಅದನ ಹತ್ತಿಕ್ಕಲು ಜಪತಪವೇ ಮದ್ದು
ಧಾಮರ್ಿಕ ಪರಂಪರೆಗೆ ಆಶ್ರಮವೇ ಮೂಲ
ಅದೇ ದುಷ್ಟ ಶಕ್ತಿಯ ನಿರ್ಭಂಧ ಗೋಲ.


ತಾಯಿ
-------
ಮಾನವೀಯತೆಯೇ ಮಾತೆಯ ಮಹಾ ಆಸ್ತಿ
ಅವಳ ನಿಂದಿಪನ ಪುಣ್ಯವೆಲ್ಲಾ ನಾಸ್ತಿ
ನಿಸ್ವಾರ್ಥ ಸೇವೆ ಅವಳಿಂದಲೇ ಸಾಧ್ಯ
ತಾಯಿಯ ಆಶೀವರ್ಾದವಿರೆ ಬಾಳು ಅಭೇಧ್ಯ.


ಸ್ನೇಹ
-----------
ಗೆಳೆತನವೇ ಪ್ರೀತಿಯ ಮೊದಲ ಮೆಟ್ಟಿಲು
ದುರುಯೋಗವಾದರೆ ಬಾಳು ಕತ್ತಲು
ಪರಸ್ಪರರಲ್ಲಿ ಗೌರವ ನಂಬಿಕೆ ಇದ್ರೆ
ದಿನ ನಿತ್ಯ ಕಣ್ತುಂಬ ನೆಮ್ಮದಿಯ ನಿದ್ರೆ.


ನಂಬಿಕೆ
---------
ಅಪನಂಬಿಕೆ ತಾತ್ಸಾರ ಮತ್ಸರ ಬಿಟ್ಟು
ಪ್ರೀತಿ ವಿಶ್ವಾಸದಿ ಮಹಲನು ಕಟ್ಟು
ಗೆಳೆತನ ಪ್ರೀತಿಯ ಮೊಟ್ಟ ಮೊದಲ ಹೆಜ್ಜೆ
ಸಾಮರಸ್ಯ ಸಹಬಾಳ್ವೆ ನಡೆಸಲೇಕೆ ಲಜ್ಜೆ.


ಗುರು
---------
ಗುರುವಿನ ಮಹಾ ಮಸ್ತಕ ವಿದ್ವತ್ ಭಂಡಾರ
ವಿದ್ಯೆ ಬೇಕೇ? ತಟ್ಟಿ ಜ್ಞಾನಿ ಮನೆ ದ್ವಾರ
ಯೋಗ್ಯ ಶಿಷ್ಯನಿಗೇ ಗುರುವಾಗುವ ಭಾಗ್ಯ
ಗುರುಶಿಷ್ಯರಿರೋ ಸಮುದಾಯ ಎಂದಿದ್ದರೂ ಯೋಗ್ಯ.


ಸ್ವಾತಂತ್ರ್ಯ
------------
ಹಂಗಿರದೇ ಹೋರಾಡಿತು ದೇಶ ಭಕ್ತ ಪಡೆ
ಅಂತೂ ತೊಲಗಿತು ಪರಕೀಯರಾ ಪೀಡೆ
ಅದೇ ಖುಷಿಯಲ್ಲಿ ಹಂಚಿ ತಿನ್ನುವಾ ಪೇಡೆ
ದೇಶದ ನವ ನಿಮರ್ಾಣಕ್ಕೆ ನುಗ್ಗಿ ನಡೆ.


ವಿಧವೆ
-------------
ಪತಿಯಿರದ ಹೆಣ್ಣು ಎಂದಿದ್ದರೂ ವಧುವೇ
ಯಾರ ಹಂಗಿಲ್ಲದೇ ಆಗು ಮರು ಮದುವೆ
ಮೂರ್ಖ ಮನುಜನ ಶೃಷ್ಠಿ ವಿಧವೆ ಪಟ್ಟ
ಅಂತಹ ದುರಾತ್ಮರ ಕೈಗೆ ಕೊಡದಿರು ಜುಟ್ಟ.


ಶಾಶ್ವತ ಸೂತ್ರ
-----------
ಏಕೆ, ಆಸ್ತಿ ಅಂತಸ್ತು ನಕ್ಷತ್ರ ಗೋತ್ರ?
ಗುಣ ವಿದ್ಯೆ ನಡತೆಗಳೇ ನೆಂಟಸ್ತನದ ಸೂತ್ರ
ಪ್ರೀತಿ ವಿಶ್ವಾಸ ನಂಬಿಕೆಯೇ ಶಾಶ್ವತ ಮಿತ್ರ
ಮಿಂಚುವುದಾಗ ನಮ್ಮ ಗಮನಾರ್ಹ ಪಾತ್ರ.


ಮಿತಾಹಾರ
----------
ಜಿಹ್ವಾ ಚಾಪಲ್ಯ ರೋಗಗಳಿಗೆ ರಹದಾರಿ
ಹಿತಮಿತ ಆಹಾರ ಆರೋಗ್ಯಕ್ಕೆ ಆಭಾರಿ
ಏಕಾದಶಿ ಸಂಕಷ್ಠಿ ಚೌತಿ ಒಪ್ಪತ್ತು
ಎಂದು ತಿನ್ನದಿರಿ ರೊಟ್ಟಿ ದೋಸೆ ಇಪ್ಪತ್ತು.



ಅಕ್ಷರ ಜ್ಞಾನ
-----------
ಅಕ್ಷರ ಅಭ್ಯಾಸ ಹೊಂದದ ಪಾಪದ ಶಿಶು
ಮುಂದದು ತಿಳುವಳಿಕೆ ಜ್ಞಾನವಿರದ ಪಶು
'ಅನಕ್ಷರಸ್ಥ' ಹಣೆಪಟ್ಟಿ ಹೊತ್ತವನ ಪಾಡು
ಅವನು ಹೊಲಿಯಲೂ ಲಾಯಕ್ಕಿಲ್ಲ ಜೋಡು


ಹಿರಿಯರಿಗೆ ಗೌರವ
------------
ಯಾವುದೇ ಜಾತಿ ಪಂಥದಾ ಅನುಯಾಯಿ
ಆದರೂ ಹೇಳಿದಂತಿರು ತಂದೆ ತಾಯಿ
ಅಶಕ್ತ, ಅನಾಥ, ಅಂಗಹೀನ, ವೃದ್ಧ
ರ ಪೋಷಣೆ ಸಂರಕ್ಷಣೆಗೆ ನೀನಾಗು ಬದ್ದ.


ಸರಕು
-------
ಪ್ರೀತಿ, ಪ್ರೇಮವೆಂಬುದು ಹಳಸಲು ಸರಕು
ಕಂಡ ಕಂಡಲ್ಲಿ ಸೋರಿ ಹೋಗುವಾ ಹರುಕು
ತುಂಬು ಸಂಸಾರದಲ್ಲಿ ಮೂಡಿದರೆ ಬಿರುಕು
ಬಿರುಗಾಳಿಯಲಿ ಹಾರಿ ಹೋಗುವಾ ದರಕು.


ಮೂಢ ನಂಬಿಕೆ
----------
ಹಸುಗೂಸೆ ಎಂದೂ ಏರದಿರು ಹಸೆಮಣೆಗೆ
ಪಂಜರದೊಳಿಟ್ಟಂತೆ ಚೆಂದದಾ ಗಿಣಿಗೆ
ಬದುಕಿನಲಿ ಬಾಡಿ ಹೋಗುವುದು ಎಳೆಬಾಲೆ
ಎರಗಿದಾಗ ಮೂಢ ನಂಬಿಕೆಯೆಂಬಾ ಬಲೆ


ಸಿಂಪಲ್ ಮದುವೆ
-----------
ಕೇಳದೆಯೆ ಮಾವನಿಂದ ಕವಡೆ ಕಾಸು
ಮನ-ಮನೆಯ ತುಂಬೆಲ್ಲ ತುಂಬಿಸಿಕೋ ಕೂಸು
ತುಂಬು ಸಂಸಾರದ ಗೃಹವು ಬಲು ಸೊಗಸು
ಆಡಿಕೊಳ್ಳಲಾರರು ಯಾರೂ ಗುಸುಗುಸು.


ಕಲಿಕೆಯಿಂದ ಗಳಿಕೆ
------------
ಕಲಿಸೋ ಕಲಿಸು ಕಲಿಯದಿರುವ ಮನುಜಗೆ
ಕಲಿಯುವುದಿರುವುದು ಕೊನೆಯುಸಿರಿರುವವರೆಗೆ
ಕಲಿಯದವಗೆ ಅರ್ಧಂಬರ್ಧ ತಿಳುವಳಿಕೆ
ಕೊನೆತನಕವೂ ಉಳಿಸಲು ಆಗದು ಗಳಿಕೆ.


ಕದಿಯಲಾಗದ ಆಸ್ತಿ
------------
ಕಲಿಯದಿದ್ದರೆ ಹಿತವಚನದಿ ಅವ ಬದುಕು
ಸಂಕೋಚ ಬಿಟ್ಟು ಹಿಡಿದು ನಾಲ್ಕು ತದುಕು
ವಿದ್ಯೆ ಮಾರಾಟ ಮಾಡುವ ಸರಕಲ್ಲ
ಅಷ್ಟೇ ಕಲಿತರೂ ಕದಿಯಲಾರನು ಕಳ್ಳ.


ಸ್ವಾತಂತ್ರ್ಯೋತ್ಸವದ ದಿನ
----------------
ಕೇಳದಿರು ಬಾವುಟ ಹ್ಯಾಂಗ ಹಾರತೈತಿ
ಹಾರುವುದು ಖಚಿತ ರಾಜಕಾರಣಿಗಳ ಧೋತಿ
ಹೇಳಿದರೆ ತಿಳಿದೀತೆ ಕೋತಿಗಳಿಗೆ ನೀತಿ
ಅದು ಓತಿ ಅಂದರೆ ಪ್ರೇತಿ ಎನ್ನುವ ಜಾತಿ.


ಅಂಧಕಾರವ ಅಳಿಸುವಾ
---------------
ಅಂಧಕಾರದಿ ಕವಿದಿರುವಾ ಕರಿನೆರಳು
ಹಿಮ್ಮೆಟ್ಟಿಸುವಾ ಹೆದರದೆಯೆ ಹಗಲಿರುಳು
ಒಟ್ಟಾಗಿ ತೊಳೆಯುವಾ ಅಜ್ಞಾನದ ಕಲೆ
ಇದಕಿಲ್ಲ ಕಾನೂನು ಕಾಯಿದೆ ಕಟ್ಟಳೆ.


ಬರೀ ಭಸ್ಮ
--------
ಗುಡಿ ಗೋಪುರ ಮಸೀದಿ ಮಂದಿರ ಚಚರ್ು
ಇದಕ್ಯಾಕೋ ಮಾಡುವಿರಿ ವೃಥಾ ಖಚರ್ು
ಎಲ್ಲಾ ಸೇರಿಯೇ ರೂಪುಗೊಂಡಿದೆ ನಮ್ಮಾತ್ಮ
ಕೊನೆಯಲ್ಲಿ ಉಳಿವುದು ಬರೀ ಚಿತಾ ಭಸ್ಮ..


ಮೀಸೆ ಮೊಳೆತಾಗ
--------------------
ಹಳ್ಳೀ ಹೈದರೆಲ್ಲಾ ಹುಟ್ಟೂರಿಗೆ ಗುಡ್ ಬೈ
ಓಡಿದರೆಲ್ಲಾ ಬೆಂಗ್ಳೂರ್ ಮುಂಬೈ ದುಬೈ
ಮೈಲಿ ಕಸುವಿರೊ ತನಕ ಊರು ಸುತ್ತಿದ್ದು
ಪ್ರಾಯ ಇಳಿವಾಗ ಮನೇಲೇ ವಕ್ಕರಿಸಿದ್ದು.


ಅರಣ್ಯ ನಾಶ
------------
ಅಕೇಶಿಯಾ ನೀಲಗಿರಿ ಮ್ಯಾಂಜಿಯಂ ಗಾಳಿ
ಈ ಗಿಡಗಳೆಂದರೆ ನುಡಿವರನೇಕರು ತೆಗಳಿ
ಇವನ್ನೆಲ್ಲ ಬೆಳೆಸದಿದ್ದರೆ ಉರುವಲಿಗೇನು ಇದೆ?
ಜಂಗಲ್ಲಿನಲ್ಲಿ ಬರೀ ಫಾಥರ್ೇನಿಯಂ ಸದೆ.


ಹುಲ್ಲಿನ ಹುಟ್ಟು
--------
ನೀರು ಗೊಬ್ಬರ ಉಣಿಸಿ ಒಳ್ಳೇ ಬೀಜವ ಬಿತ್ತು
ಫಸಲು ಬರುವ ತನಕ ಬೆಳೆ ರಕ್ಷಣೆಗೆ ಒತ್ತು
ಹುಲ್ಲಿನಾ ಹುಟ್ಟು ಹುಲುಮಾನವಗೇನು ಗೊತ್ತು!
ಬೀಜ ನೀರು ರಕ್ಷಣೆ ಮಾಡಿದವರ್ಯಾರು ಹೊತ್ತು?


ವಿದ್ಯೆಯ ಮಹತ್ವ
--------------
ರಾಷ್ಟ್ರ ರಕ್ಷಣೆಯಲ್ಲಿ ಶಿಕ್ಷಣವೇ ಪೂರಕ
ಅವಿದ್ಯಾವಂತರೇ ದೇಶಕ್ಕೆ ಮಾರಕ
ಸಮಾನತೆಗೆ ನಮ್ಮೆಲ್ಲರಾ ಮಾನ್ಯತೆ
ವಿದ್ಯೆ ಕಲಿತರೇ ಜೀವನದಿ ಪಕ್ವತೆ.


ವಿಜ್ಞಾನಿಗಳ ಶೋಧನೆ
----------------
ಉಪಗ್ರಹ ಉಡಾವಣೆ ಅಪ್ರತಿಮ ಸಾಧನೆ
ನಮ್ಮ ವಿಜ್ಞಾನಿಗಳ ಹೆಮ್ಮೆಯ ಶೋಧನೆ
ದೇಶದ ಅಭಿವೃದ್ಧಿಗೆ ಭದ್ರ ಅಡಿಪಾಯ
ಹಿಂದುಳಿದವರೆಂಬ ಹಣೆಪಟ್ಟಿಗೆ ವಿದಾಯ.


ಭವಿಷ್ಯ !
----------
ಕೇಳಿದೆನು ನಾನೋರ್ವರ ಬಳಿ ಜ್ಯೋತಿಷ್ಯ
ತಿಳಿಯಿತಾಗ ಅಪರೂಪದ ಆಘಾತದ ವಿಷಯ
ಕಾಲಾವಧಿ ಸಮಾಪ್ತಿ ಹಂತದ ಆಯುಷ್ಯ
ಜೀವಿತದ ದಿನಗಳಿದವು ನಿಮಿತ್ತ ಶೇಷ.


ಬದಲಾವಣೆ
----------
ಆ ಕಾಲ ನಡೆದ ಸ್ವಾತಂತ್ರ್ಯ ಸಂಗ್ರಾಮ
ಪಸರಿಸಿತ್ತು ದೇಶದ ಪ್ರತಿಯೊಂದು ಗ್ರಾಮ
ಇಂದಿನಾ ಜನಮನದಿ ಬರೀ ಪಂಗನಾಮ
ತಿಳಿ ಹೇಳಲಿವಕೆ ನೀರಲಿ ಮಾಡಿದ ಹೋಮ.


ಸ್ಮರಣೆ
-------
ಭಾರತದ ಸಂಜಾತ ನಿಜ ದೇಶ ಭಕ
್ತದೇಶದ ನವ ನಿಮರ್ಾಣದಲಿ ಅವ ಸ್ವಶಕ್ತ
ಪ್ರತೀ ಬರಿಯ ಸ್ವಾತಂತ್ರ್ಯ ಆಚರಣೆ
ಹುತಾತ್ಮ ಯೋಧರುಗಳ ಪುಣ್ಯ ಸ್ಮರಣೆ.


ಬಳುವಳಿ
--------

ಸ್ವಾತಂತ್ರ್ಯ ಹೋರಾಟಗಾರರ ಚಳುವಳಿ
ಇಂದಿನಾ ಪೀಳಿಗೆಗದು ಮುಖ್ಯ ಬಳುವಳಿ
ಈ ಸವಿ ನೆನಪಿಗಾಗಿ ಚಿಣ್ಣರಿಗೆ ಸಿಹಿ ಹಂಚಿ
ಖಾಲಿ ಆಗುವುದೆಂದು ನೋಡದೆಯೆ ಸಂಚಿ.


ಖಾಯಿಲೆಗೆ ಮೂಲ
-------------
'ನೋವೇ' ಇರದಿರೆ ಬದುಕು ಅದೆಷ್ಟು ಚಂದ!
ನವರಸಗಳಿರಗ ಬಾಳು ನೀರಸ ಮಂದ
ಹೇಡುತನದ ಲಕ್ಷಣ, ಬರೀ ಸುಖದ ಬಯಕೆ
ಬೊಜ್ಜು ಬೆಳೆಯಲು ರೋಗ ಬಂದಾವು ಜೋಕೆ.


ಆಸ್ಥಿರ ತಾಕತ್ತು
--------------
ದೇವಸ್ಮರಣೆ ಇರದ ನಿರೀಕ್ಷೆ ನೀರುಪಾಲು
ನಾಸ್ತಿಕರಿಗೆ ಮಾತ್ರವೇ ನಿರಂತರ ಸೋಲು
ನಾಮ ಸ್ಮರಣೆಯಿಂದ ತಪ್ಪೀತು ಆಪತ್ತು
ಕಾರ್ಯಸಿದ್ಧಿಗೆ ದಕ್ಕೀತು ನೂರಾನೆ ತಾಕತ್ತು.



ಹಣೆಬರಹ
----------
ಸಾಲವೆಂಬುದು ಜೀವನದ ಕೊನೆಯ ಅಂಕ
ನೀಡಬೇಕಿಲ್ಲ ಪರವಾನಿಗೆ ಸುಂಕ
ಬದಲಾದೀತು ಸುಖ, ದುಃಖ, ಪ್ರೀತಿ, ವಿರಹ
ಎಂದಿಗೂ ತಿರುಚಲಾಗದು ಬ್ರಹ್ಮನ ಹಣೆಬರಹ.



ಸಹಾಯ
----------
ಆಪತ್ತಿಗಾದವನೇ ನಿಜವಾದ ನೆಂಟ
ಬಿದ್ದಾಗ ಎತ್ತಿದವನೇ ನಿಜವಾದ ಭಂಟ
ಅಬಲರ ಕೈ ಹಿಡಿದು ನಡೆಸಿದವ ಸಬಲ
ಬರೀ ವೇಸ್ಟು ಅಪ್ರಯೋಜಕನ ತೋಳ್ಬಲ.



ಮಾನವೀಯತೆ
----------
ಅನುಭವವೇ ಕಾರ್ಯ ಸಿದ್ದಿಗೆ ಮೂಲ
ಅನುಮಾನವೇ ಕಾರ್ಯವಿಘ್ನದ ಬಾಲ
ಮಣ್ಣುಗೂಡದಿರಲಿ ಮಾನವೀಯತೆ ಮನುಜ
ಸಾರು ಅರಿಷಡ್ವರ್ಗಗಳ ಮೇಲೆ ದಿಗ್ವಿಜಯ.



ದೇಹವಿದು ದೇಗುಲ
--------------
ಆಸಕ್ತಿಯೇ ಗುರಿ ತಲುಪಿಸುವಾ ಶಕ್ತಿ
ಭಕ್ತಿಯೇ ಭಕ್ತನಿಗೆ ಕೊಡಿಸಲಿದೆ ಮುಕ್ತಿ
ದೈವ ಬಲ ನಂಬಿದವಗೇ ವಿಜಯಮಾಲೆ
ದೇಹವೆಂಬ ದೇಗುಲದಿ ದೈವಕ್ಕಿರಲಿ ಶಾಶ್ವತ ನೆಲೆ.



ಯೋಗ್ಯತೆ
----------
ವಿಜ್ಞಾನದ ಮೊದಲ ಮೆಟ್ಟಿಲು ವಿದ್ಯಾಭ್ಯಾಸ
ಅಜ್ಷಾನಿಯ ಮೊಗ ಕಾಂತಿಯಿರದೇ ಅಭಾಸ
ಅಪ್ರಮಾಣಿಕತೆ ಎಂದಿದ್ದರೂ ಅಪಾಯ
ಮನಕೆ ನಾಟಿದರೆ ಅಳಿಸಲಾರದ ಗಾಯ.



ಸತ್ಯವಂತ
---------
ನಿಷ್ಕಾಮ ಕರ್ಮ ನಿಜವಾದ ಧರ್ಮ
ಬದುಕು ಉಜ್ವಲ, ತಿಳಿದರೆ ಅದರ ಮರ್ಮ
ಸಾಧನೆಗಿಂತ ಸಾರ್ಥಕತೆಗಿದೆ ಮಹತ್ವ
ಸತ್ಯವಂತನ ಮೊಗದಿ ನಿರಂತರ ಸತ್ವ.



ದೈವ ನೀಡಿದ ಆಸ್ತಿ
---------------
ದೈವ ನರಗೆ ಕೊಟ್ಟ ಅದ್ಭುತ ಅಂಗ ಮೆದುಳು
ಉಪಯೋಗಿಸೋ ಕಲೆ ಕರಗತವಾಗಲಿ ಮೊದಲು
ಮನುಜನ ಪ್ರತಿ ಬಹು ಮುಖ್ಯ ಅವಯವವು
ಒಂದು ಸ್ತಬ್ಧವಾದರೂ ಗ್ಯಾರೆಂಟಿ ಸಾವು.



ವಿವಾಹ ಬಂಧನ
-------------
ಬ್ರಹ್ಮಚಾರಿ ಆಗ್ತೀನಿ ಅಂತೀರಾ ಜೋಕೆ!
ಎದುರಿಸಲು ಸಜ್ಜಾಗಿ ಆಪ್ತೇಷ್ಠರ ಟೀಕೆ
ಜೀವನದಿ ಮದುವೆ ಒಂದು ಪವಿತ್ರ ಬಂಧ
ಮಿಂಚದು ಸಂಗಾತಿ ಇರದವರ ಮುಖಾರವಿಂದ.



ನಿದ್ರೆ
-------
ಹಗಲಿಡಿ ದುಡಿ ರಾತ್ರಿ ಕಣ್ತುಂಬಾ ನಿದ್ರೆ
ನಂತ್ರ ಬೇಕೆಂದ್ರೂ ನಿದ್ರೆ ಸಿಗದು ಉದ್ರೆ
ಯಾವ ಕಳ್ಳನೂ ಕದಿಯಲಾರ ಈ ಸುಖ
ಮತ್ತೆ ಕೇಳಬೇಕೇ ಜೊತೆಗಿದ್ರೆ ಸಖ[ಸಖಿ].



ಕಾವ್ಯ ಜನನ
------------
ಕಲ್ಪನೆಗಳನು ಕುದುರಿಸಲು ಕಾವ್ಯ ಬೇಕು
ಕಾವ್ಯ ಪೂರ್ಣಗೊಳ್ಳಲು ಪ್ರೇರಣೆ ಸಾಕು
ಕೇಳುಗರ ದಂಡಿರಲು ಕಾವ್ಯವು ಜೀವಂತ
ಸಾಹಿತಿಗೆ ಇರಬಾರದು ಎಂದೂ ಬಲವಂತ.


ಬದಲಾದ ನಿಲುವು
----------------
ಧ್ಯಾನ ವೈರಾಗ್ಯದ ಸಂಕೇತವಲ್ಲ
ಮೌನದ ಮಹತ್ವ ಬಲ್ಲವನೇ ಬಲ್ಲ
ಮನುಜನ ಸಮಸ್ಯೆಗೆ ಸಮಾಧಾನ, ಧ್ಯಾನ
ಆಧ್ಯಾತ್ಮಿಕತೆಯತ್ತ ಯುವ ಜನತೆಯ ಚಿತ್ತ.


ಶ್ರಮಪೂರಿತ ದುಡಿಮೆ
---------------

ಶ್ರಮ ರಹಿತ ದುಡಿತ ಚಿನ್ನದ ಬಾಳಿಗೆ ನಾಂದಿ
ಇಲ್ಲದಿರೆ ದೇಹ ರೋಗದ ಗೂಡಲಿ ಬಂಧಿ
ಸೋಮಾರಿ ಅಲೆದರೆ ಹೀಗಳೆವರು ದಡಿಯ
ಕಷ್ಟ ಜೀವಿಯಾದರೆ ಆಸ್ತಿಗೇ ಒಡೆಯ.


ಸುಳ್ಳಾಗದ ಸತ್ಯ
---------------
ಅನುಭವದ ನುಡಿಗಳಿಗೆ ಎಂದೂ ಸಾವಿಲ್ಲ
ಸತ್ಯ ಧರ್ಮ ಪರಿಪಾಲಕಗೆ ಎಂದೂ ಸೋಲಿಲ್ಲ
ಲೋಕಾನುಭವಿಯ ನುಡಿ ಎಂದೂ ಸುಳ್ಳಲ್ಲ
ನರಗೆ ಸಾವು ನೋವು ಮಾತ್ರ ಎಂದೂ ತಪ್ಪಲ್ಲ.


ಸಾಮರಸ್ಯ
-----------
ಸಂಸಾರವಿದೋ ಜೀವನದ ರಸಸೂತ್ರ
ಸತಿಪತಿಯರದೇ ಇಲ್ಲಿ ಪ್ರಮುಖ ಪಾತ್ರ
ಗಂಡ ಹೆಂಡಿರ ನಡುವೆ ಅಂತರ ಅತಂತ್ರ
ಬಿಡಿ ಸ್ವಾಭಿಮಾನ ಪ್ರತಿಷ್ಠೆಯ ಮಂತ್ರ.


ಮೂರ್ಖರ ಪೆಟ್ಟಿಗೆ
-------------
ಟಿ.ವಿ ಮಕ್ಕಳ ಸ್ಮರಣ ಶಕ್ತಿಗೆ ಧಕ್ಕೆ
ಪುಸ್ತಕ ಬೇಕು ಮನಸ್ಸಿನ ವಿಕಾಸಕ್ಕೆ
ದುರ್ಬಲ ದೃಷ್ಠಿ ಶಕ್ತಿ ಬೌದ್ಧಿಕ ಕಸರತ್ತು
ವಿಲಕ್ಷಣ ವ್ಯಕ್ತಿತ್ವ ಮಕ್ಕಳ ಸೊತ್ತು.


ನಂಬಿಕೆ
---------
ನೈಜ ಪ್ರಾರ್ಥನೆಯಿಂದ ಪಾಪ ಪರಿಹಾರ
ಕೆಟ್ಟ ಕೀಟ ಕೂಟದ ಕಾಟ ಅನತಿ ದೂರ
ಸತ್ಕಾರರ್ಯಕೆ ದೇವರ ಮೇಲೆ ಹಾಕಿ ಭಾರ
ಭಗವಂತನ ಹೃದಯಕೆ ಮುಕ್ತ ದ್ವಾರ.


ಚಿಂತೆ
---------
ಗುಡಿಸಲು ಹೊಲ ಮನೆ ದನಕರ ಚಾಕರಿ ನಡುವೆ
ನಮಗೇಕೆ ದೇಶದುದ್ಧಾರದಾ ಗೊಡವೆ!
ಹಚ್ಚಿಕೊಂಡರೆ ಚಿಂತೆ ನೂರಾರು ಉಂಟು
ಉಗುಳ ತೆಗಳಲಾರದೇ ಊರುವವು ಟೆಂಟು.


ಕಿಮ್ಮತ್ತಿಲ್ಲದ ಕಾಯಕ
-------------
ಮಣ್ಣಿಗೆ ಹಣ ಸುರಿ ಸುರಿದು ಸಕಲವೂ ವ್ಯಯ
ದಮಡಿ ಕಿಮ್ಮತ್ತಿಲ್ಲದ ಕಾಯ ವ್ಯವಸಾಯ
ಮಣ್ಣ ಮಕ್ಕಳಿಗೇ ಭಯ ಬೇಸಾಯವೆಂದ್ರೆ
ಕೊಂಚವೂ ಲಾಭ ಬರದು ಬೆವರಲ್ಲೇ ಮಿಂದ್ರೆ.


ಪ್ರಭಲೆ
----------
ಕೀಳರಿಮೆ ಮಹಿಳೆಯರನು ಕೊರೆಯುವಾ ಕೀಟ
ನಾಚಿಕೆ ಉಸಿರಿರುವವರೆಗೂ ಉರುಳದ ಪೇಟ
ಹುಟ್ಟ ಹೊತ್ತಿಹಳು ಅಬಲೆಯೆಂಬ ಹಣೆ ಪಟ್ಟಿ
ಭಟ್ಟಿ ಇಳಿಸಿದಷ್ಟೂ ಆಕೆ ನಿಜಕ್ಕೂ ಗಟ್ಟಿ.


ತಂತ್ರ
---------
ಆಧ್ಯಾತ್ಮಿಕತೆ ಆಸ್ತಿಕರಿಗೆ ದೊಡ್ಡ ಸ್ವತ್ತು
ಅತ್ಯಾಧುನಿಕತೆ ತಂದಿಟ್ಟಿತು ವಿಪತ್ತು
ಧ್ಯಾನ, ಮೋಕ್ಷ ಸಾಧನೆಯ ಮೂಲ ಮಂತ್ರ
ದೈವವೊಲಿಯಲು ಇದುವೇ ಏಕಮಾತ್ರ ತಂತ್ರ .



----------------------------------------------------------------------------------------------------
ಚುಟುಕು ರಚನೆ - ದತ್ತಗುರು ಕಂಠಿ.
ಪೊ - ಉಂಚಳ್ಳಿ.
ತಾ - ಸಿರಸಿ, ಜಿ - ಉತ್ತರ ಕನ್ನಡ, 581318, ಮೊ -9483648230.
======================================================================================================